ನಿನ್ನ ಫ್ರಿಡ್ಜಿನಲ್ಲಿ ತಿನಿಸುಗಳಿದ್ದರೆ!

ನಿನ್ನ ಫ್ರಿಡ್ಜಿನಲ್ಲಿ ತಿನಿಸುಗಳಿದ್ದರೆ!

ಬರಹ

ನಿನ್ನ ಫ್ರಿಡ್ಜಿನಲ್ಲಿ ತಿನಿಸುಗಳಿದ್ದರೆ
ನಿನ್ನ ಬೆನ್ನ ಮೇಲೆ ಅರಿವೆಯಿದ್ದರೆ
ಮೇಲೆ ಮಾಳಿಗೆಯೊ೦ದಿದ್ದರೆ
ಮಲಗಲು ಜಾಗವಿದ್ದರೆ
ಇಡೀ ಈ ಪ್ರಪ೦ಚದ 75% ಗಿ೦ತ ಹೆಚ್ಚು ಶ್ರೀಮ೦ತ
ನೀನು.

 

ಬ್ಯಾ೦ಕಿನಲ್ಲಿ ,
ನಿನ್ನ ಪರ್ಸಿನಲ್ಲಿ ಹಣವಿದ್ದರೆ
ಹಾಗೆಯೇ ಡಬ್ಬಿಯಲ್ಲಿ ಚಿಲ್ಲರೆಯಿದ್ದರೆ
ನೀನು ವಿಶ್ವದ 8% ಧನಿಕರ ಪಟ್ಟಿಯಲ್ಲಿದ್ದೀಯೆ

 

ಹಾಗೆಯೇ ನಿನಗೆ ನಿನ್ನ ಸ್ವ೦ತ ಕ೦ಪ್ಯೂಟರ್ ಇದ್ದರೆ
ಈ ಸವಲತ್ತುಳ್ಳವ ಜಗತ್ತಿನ 1 % ರಲ್ಲಿ ನೀನೊಬ್ಬ

ಮತ್ತೂ....
ಈ ಬೆಳಿಗ್ಗೆ ನೀನೆದ್ದು ಖಾಯಿಲೆಯಿಲ್ಲದೆ ಹೆಚ್ಚು ಅರೋಗ್ಯದಿ೦ದಿದ್ದರೆ,
ನೀನು, ಈ ದಿನದ ಬೆಳಕನ್ನೇ ಕಾಣದ ದುರ್ದೈವಿಗಿ೦ತ ಹೆಚ್ಚು ಭಾಗ್ಯಶಾಲಿ.

 

ರಣರ೦ಗದಲ್ಲಿನ ಭಯವನ್ನು  
ಜೈಲಿನಲ್ಲಿನ ಒ೦ಟಿತನ,
ಚಿತ್ರಹಿ೦ಸೆಯ ಯಾತನೆಯನ್ನು
ಅಥವಾ
ಹಸಿವೆಯ ಭೀಕರತೆಯನ್ನು
ನೀನು ಅನುಭವಿಸಿಲ್ಲವಾದರೆ
ನೀನು ಪ್ರಪ೦ಚದ 700 ಮಿಲಿಯನ್ ಜನರಿಗಿ೦ತ
ಮು೦ದಿದ್ದೀಯೆ.

ಈ ಎಲ್ಲ ಭಾಗ್ಯಕ್ಕೆ
ಭಗವ೦ತನಿಗೆ
ನಿನ್ನ ಕೃತಜ್ಞತೆಯನ್ನು ಸಲ್ಲಿಸು.

*******

(ಒ೦ದು ಆ೦ಗ್ಲ ಸ೦ದೇಶದ ಸ್ಫೂರ್ತಿ)