ನಿನ್ನ ಬಯಸುವ ಮನವು...

ನಿನ್ನ ಬಯಸುವ ಮನವು...

ಕವನ

ಒಮ್ಮೆ ಬರುವೆಯಾ ನನ್ನೊಳು

ನಿನಗಾಗಿ ಮಿಡಿಯುತಿದೆ ಈ ಹೃದಯ

ಸದಾ ಕದ್ದು ನೋಡುವೆ 

ನಿನ್ನ ಮಂದಹಾಸದ ಸೊಗಸು ನೋಡಲು

 

ಹಂಬಲಿಸುತಿದೆ ನನ್ನ ಮನ

ನಿನ್ನ ಪ್ರೀತಿಯ ಮಡಿಲ ಸೇರಲು

ನನ್ನ ಮಡಿಲೊಳಗೆ ನಿನ್ನ ಮುಡಿಯಿರಿಸಬೇಕೆಂಬ ತುಡಿತ

ನನ್ನೊಳಗಿನ ಪ್ರೀತಿ ಶಿಖರವೇರಿಸುತಿದೆ

 

ನನ್ನೊಳಗೆ ಬಚ್ಚಿಟ್ಟ ಆಸೆಯನು

ನಾನಿಲ್ಲದ ನಿನ್ನ ಮನಸಲ್ಲಿ ಬಿಚ್ಚಿಡಬೇಕೆಂಬ ಮಹಾದಾಸೆ

ನಿನ್ನ ಗೆಜ್ಜೆ ನಾದದ ನಡಿಗೆಯ ನೋಡುತ

ಮನ ಬಯಸುತಿದೆ ನನ್ನ ನಿನ್ನ ಪ್ರೇಮ ಪಯಣವನು

 

ಕಂಡರೂ ಕಾಣದಂತೆ ಸಾಗುವ ನಿನ್ನ ಹೆಜ್ಜೆಗಳು

ನಾ ನಿಂತಲ್ಲೇ ನಿಲ್ಲಲಿ ಎಂದು ಜಪಿಸುತ್ತಿದೆ ಕಣ್ಣುಗಳು

ನಿನ್ನ ಮೂಗುತಿಯ ಹೊಳಪು ಕಾಣುತ್ತಾ

ಬಯಸುತ್ತಿರುವೆ ಹೊಳಪಿನಲಿ ನಿನಗೆ ನಾನಾಷ್ಟೆ ಕಾಣಲೆಂದು..

 

-ಅರ್ಚನಾ ಪಿ, ಹೊಸ್ಕೇರಿ  ಕುಮಟಾ.

ಚಿತ್ರ: ಇಂಟರ್ನೆಟ್

 

ಚಿತ್ರ್