ನಿನ್ನ ಮಾಯೆ ಮುಸುಕಿನಲ್ಲಿ
ಬರಹ
ನಿನ್ನ ಮಾಯೆ ಮುಸುಕಿನಲ್ಲಿ
ನಿನ್ನ ದನಿಯ ಎದೆಗೆ ಅವಚಿ|
ನಿನ್ನ ನೆನಪ ನೆನಪಿಸುತ್ತ
ಗೋಡೆಗೊರಗಿ ಮಲಗಿಕೊಂಡೆನಾ ||೧||
ಮುಗ್ಧ ಮೊಗವ ನೆನೆದು ದಣಿದೆ
ದಗ್ಧ ವಿಧಿಯ ಜರಿದು ಮಣಿದೆ |
ನಗ್ನಸತ್ಯ ವ್ಯಾಪ್ತೆ ನೀನು
ಮುನಿಸಿಕೊಂಡೆ ಇನಿಯನೊಡನೆ ||೨||
ಕನಸು ಕಂಡೆ ಹಗೆಯಮರೆತು
ರಮಿಸಿ ಬಂದೆ ನಲ್ಲನರಿತು |
ಎಲ್ಲ ಮೀರಿ ಎಲ್ಲೆ ದಾಟಿ
ನಲ್ಲೆ ಸಂಗ ಸ್ವರ್ಗ ಸಾಟಿ ||೩||
ನಿನ್ನ ಕಣ್ಣ ಬೆಳಕಿನಲ್ಲಿ
ನಿನ್ನ ಕಣ್ಣ ಝಳಕಿನಲ್ಲಿ |
ನಿನ್ನ ಸಂಗ ಸ್ವರ್ಗದಲ್ಲಿ
ಸಖಿಸಿ ಸುಖಿಸಿ ಸೃಜಿಸಿದೆ ||೪||
ಕಾಲ ಪರಿಧಿ ಯಾರ ಬಿಡದು
ಬಾನನೇರಿ ಭಾನು ಬಂದ ನಡೆದು |
ಪ್ರಖರ ಕಿರಣ ಕಣ್ಣು ಕುಕ್ಕಿ
ಎದ್ದು ಕೂತೆ ನಿನ್ನೆ ನಿನ್ನ ನೆನೆಸಿ ಅಟ್ಟದಲ್ಲಿ ಮಲಗಿದ್ದೆ ನಾ ||೫||
ಬಚ್ಚಿಟ್ಟ ಮಾತ ಬಾಯ್ಬಿಡು
ಮನದನ್ನೆ ನಿನ್ನ ಮನದಾಳದಿಂದ
ಮನಮಿಡಿಯುವಂತೆ ನುಡಿ ಮನದೊಳಡಗಿದ ಮಾತ ||
ಕನಸಲ್ಲಿ ಕನವರಿಸಿ ಕಿವಿಕಚ್ಚುವಂತೆ
ನಿಶೆಯಲ್ಲಿ ಹಪಹಪಿಸಿ ಮನಮುಟ್ಟುವಂತೆ |
ಕವಿಕವಿದು ಕಾರ್ಮೋಡ ಮಳೆಗೆರೆಯುವಂತೆ
ಧರೆಗಿಳಿದು ಸುರರು ವರವೀಯುವಂತೆ ||೧||
ನೀನಿಟ್ಟ ಕಿಚ್ಚು ನೀನೆಂಬ ಹುಚ್ಚು ಅಚ್ಚೊತ್ತುವಂತೆ
ಒಂದೊಂದು ಪದದಲ್ಲು ಪದವೀಯುವಂತೆ |
ಅಘಹರಿದು ಸುಮಹರಡು ಘಮಘಮಿಸುವಂತೆ ||೨||
ನೀನನ್ನ ಒಲವು ನೀನನ್ನ ಜಗವು
ನೆನೆದವನು ನಾನು ನೆಲೆಯೂರು ಇಲ್ಲೇ |
ಸರಿಯಾರು ನಿನಗೆ ಸರಿಸುವರು ಯಾರು
ವರಿಸುವನು ನಾನು, ಧ್ವನಿ ಹರಿಯುವಂತೆ ||೩||
ನಿನ್ನ ಮಾಯೆ ಮುಸುಕಿನಲ್ಲಿ
ನಿನ್ನ ದನಿಯ ಎದೆಗೆ ಅವಚಿ|
ನಿನ್ನ ನೆನಪ ನೆನಪಿಸುತ್ತ
ಗೋಡೆಗೊರಗಿ ಮಲಗಿಕೊಂಡೆನಾ ||೧||
ಮುಗ್ಧ ಮೊಗವ ನೆನೆದು ದಣಿದೆ
ದಗ್ಧ ವಿಧಿಯ ಜರಿದು ಮಣಿದೆ |
ನಗ್ನಸತ್ಯ ವ್ಯಾಪ್ತೆ ನೀನು
ಮುನಿಸಿಕೊಂಡೆ ಇನಿಯನೊಡನೆ ||೨||
ಕನಸು ಕಂಡೆ ಹಗೆಯಮರೆತು
ರಮಿಸಿ ಬಂದೆ ನಲ್ಲನರಿತು |
ಎಲ್ಲ ಮೀರಿ ಎಲ್ಲೆ ದಾಟಿ
ನಲ್ಲೆ ಸಂಗ ಸ್ವರ್ಗ ಸಾಟಿ ||೩||
ನಿನ್ನ ಕಣ್ಣ ಬೆಳಕಿನಲ್ಲಿ
ನಿನ್ನ ಕಣ್ಣ ಝಳಕಿನಲ್ಲಿ |
ನಿನ್ನ ಸಂಗ ಸ್ವರ್ಗದಲ್ಲಿ
ಸಖಿಸಿ ಸುಖಿಸಿ ಸೃಜಿಸಿದೆ ||೪||
ಕಾಲ ಪರಿಧಿ ಯಾರ ಬಿಡದು
ಬಾನನೇರಿ ಭಾನು ಬಂದ ನಡೆದು |
ಪ್ರಖರ ಕಿರಣ ಕಣ್ಣು ಕುಕ್ಕಿ
ಎದ್ದು ಕೂತೆ ನಿನ್ನೆ ನಿನ್ನ ನೆನೆಸಿ ಅಟ್ಟದಲ್ಲಿ ಮಲಗಿದ್ದೆ ನಾ ||೫||