ನಿನ್ನ ಮೌನ ಭರದ ನಡಿಗೆ

ನಿನ್ನ ಮೌನ ಭರದ ನಡಿಗೆ

ಬರಹ

ನೀ ನೀಡುವ ಆಜ್ಷೆಯನು ಗಾಳಿ ಎದುರು ನೋಡುತ್ತಿದೆ
ಜೀವದಿ ಉಸಿರಾಡಿ ನಿನ್ನುಸಿರಿನ ಜೊತೆ ನನ್ನ ಸೇರಲು

*** *** ***
ಮಳೆ ಗಾಳಿ ಸುನಾಮಿ ಜೋರಾಗಿ ಬೀಸಿ ಬೀಸಿ ಬಂದರೂ
ನಿನ್ನ ಮೌನ ಭರದ ನಡಿಗೆ ಮುಂದೆ ಎಲ್ಲಾ ಸೋತಿವೆ

*** *** ***
ಅಂದು ತುಟಿಗೆ ನೀಡಿದ ಒಂದೇ ಒಂದು ಹನಿ ಮುತ್ತು
ಇಂದು ತುಂಬು ಕಡಲಾಗಿ ಅಲೆ ರೂಪದಿ ಮನ ತಬ್ಬಿದೆ

*** *** ***
ಇಡುವ ಪ್ರತಿ ಹೆಜ್ಜೆ ಹೆಜ್ಜೆಗೂ ಪದಗೆಜ್ಜೆ ತೊಡಿಸುವೆ
ನಿನ್ನ ನಡಿಗೆಯಿಂದ ಹೊಮ್ಮುವ ನಾದ ಕೇಳಲು

*** *** ***
ಕೊಟ್ಟ ಒಂದೊಂದು ಮುತ್ತುಗಳನ್ನು ಜೋಡಿಸಿರುವೆ
ಗಗನದಲಿ ಪ್ರೇಮ ಪಟ ಮಾಡಿ ಹಾರಿ ಬಿಡಲು