ನಿನ್ನ ವಿನಹ...

ನಿನ್ನ ವಿನಹ...

ಕವನ

ಓ ಗೆಳತಿ ನಿನ್ನ ವಿನಹ

ಲೋಕದೊಳು ಏನೂ ಇಲ್ಲ

ನಿನ್ನ ನೋಡದೆ ಇದ್ದ ದಿನವೆ

ನಾನು ನಲ್ಲನಾಗುವುದಿಲ್ಲ

ಓ ಗೆಳೆಯ ನಿನ್ನ ವಿನಹ

ಮೌನವೆ ನನ್ನ ಬಾಳಿಗೆಯೆಲ್ಲ

ನಿನ್ನ ಜೊತೆಗೆ ಇರದಿಹ ದಿನವೆ

ನಾನು ನಲ್ಲೆಯಾಗುವುದಿಲ್ಲ

 

ಈ ಬನದ ಸುತ್ತಲುಯೆಲ್ಲ

ಗೆಳತಿಯೆ ನೀನೆ ಕಂಡಿರುವೆ

ತುಂಟಾಟದ ಸುತ್ತಾಟಗಳ 

ಕಳೆದಾ ದಿನಗಳ ನೆನಪಿಹುದೆ

ಗೆಳೆಯ ನಿನ್ನ ರೂಪವೆಯೆಲ್ಲ

ತುಂಬಿ ತುಳುಕಿದೆ ವನ ವನವೆ

ಮೋಹಕ ರೂಪದ ಗೆಳತಿಯೆ

ಇಂದು ಬಂದಿರುವಳು ನಿನಗಾಗೆ

 

ಹುಣ್ಣಿಮೆಯ ರಾತ್ರಿಯಲಿ

ಬಾನ ತಾರೆಯಾ ಜೊತೆಗೆ

ನಿನ್ನೊಡಲ ಸವಿಯನು ಕಂಡೆ 

ರಾಧಾ ಮೋಹನ ನಾನಾದೆ

ಸುರಿವ ಹೊನ್ನ ಮಳೆಯಲ್ಲಿ

ನನ್ನ ಹೃದಯ ಕದ್ದಿರುವೆ

ಒಲುಮೆಯ ಸನಿಹ ಸೇರೆಂದು

ಕೊಳಲ ಧ್ವನಿಯು ಹೇಳುತಿದೆ

 

ಕಾವೇರಿಯಾ ಜಲದಲ್ಲಿ

ದೋಣಿಯೊಳಗೆ ಸಾಗುತಲಿ

ಆಲಿಂಗನ ಪ್ರೇಮ ಪಯಣ

ಪ್ರೀತಿ ಜೊತೆಗೆ ಚುಂಬನದಲಿ

ಗೆಳೆಯ ನಿನ್ನ ಸನಿಹದೊಳು

ಚೆಲುವೆಯಾಗಿ ನಾನಿರುವೆ

ಚೆಲುವ ನಿನ್ನ ಮಡಿಲಲ್ಲಿ

ಕೈಯ ಹಿಡಿದು ಜೊತೆಗಿರುವೆ

 

ಉಯ್ಯಾಲೆಯೊಳು ಕುಳಿತಿರುವಾಗ

ಹೃದಯದಾಳದ ಮಾತಿನೊಳು

ಶೃಂಗಾರದ ಲೋಕಕೆ ಸಾಗಿ

ನವಿಲಿನಂತೆ ನಾವಿರಲು

ಗೆಳೆಯ ನಿನ್ನ ಒಲುಮೆಯಲಿಂದು

ಸುಖದ ಸೌಧವಾ ಕಂಡೆನು

ಹೀಗೆಯೆ ಇರಲಿ ಬಾಳಿನ ಕೊನೆಗು

ನಿನ್ನ ಜೊತೆಯಲೇ ಬಂದೆನು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್