ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು
ಹೌದು ಕಾರುಗಳೂ ಸಹ ಲಿನಕ್ಸ್ ಬಳಸ್ತವೆ. ಅದ್ರಲ್ಲೂ ಚಾಲಕನೇ ಬೇಕಿಲ್ಲದ ಸ್ವಯಂಚಾಲಿತ ಕಾರುಗಳು. ಅಮೇರಿಕಾದ ಸಿ.ಈ.ಎಸ್ (CES) ಆಟೋಮೊಬೈಲ್ ಮೇಳದಲ್ಲಿ ಕಂಡು ಬಂದ ಕಾರ್ನಿಗಿ ಮೆಲ್ಲೊನ್ ಅನ್ನೋ ಈ ಸ್ವಯಂಚಾಲಿತ ಕಾರನಲ್ಲಿ ಉಬುಂಟು ಬಳಸಿಕೊಳ್ಳಲಾಗಿದೆ ಅನ್ನೋದೇ ಒಂದು ಕುತೂಹಲಕಾರಿ ಸಂಗತಿ. ಗೂಗಲ್, ನೆಟ್ಆಪ್ ಮತ್ತು ಇಂಟೆಲ್ ಪ್ರಾಯೋಜಿತ ಕಾರ್ನಿಗಿ ಈ ವರ್ಷದ ಡಾರ್ಪ(DARPA) ಚಾಲೆಂಜ್ ಅನ್ನ ಗೆದ್ದಿದೆ ಕೂಡ. ಈ ಸ್ವಯಂಚಾಲಿತ ಕಾರು ಡಜನ್ ಗಟ್ಟಲೆ "ಇಂಟೆಲ್ ಕೋರ್ ೨" ಪ್ರಾಸೆಸರ್ ಗಳನ್ನ ಬಳಸಿಕೊಳ್ಳುವುದರೊಂದಿಗೆ, ಉಬುಂಟು ೬.೦೬ "ಡ್ರಾಪರ್ ಡ್ರೇಕ್" ಲಿನಕ್ಸ ಅನ್ನ ತನ್ನ ಮೂಲ ತಂತ್ರಾಂಶವನ್ನಾಗಿ ಹೊಂದಿದೆ. ಉಬುಂಟು ೬.೦೬ ಯಾಕೆ ಬಳಸಿದ್ರು ಅದು ಹಳೇದಲ್ವಾ ಅಂತ ನಿಮಗನ್ನಿಸಿದರೆ, ಅದಕ್ಕೆ ಕಾರಣ ಕೂಡ ಇದೆ. ಉಬುಂಟು ೬.೦೬ ಎಲ್.ಟಿ.ಏಸ್ (Long Term Support) ಅತಿ ಹೆಚ್ಚುಕಾಲ ತಂತ್ರಾಂಶಕ್ಕೆ ಬೇಕಾದ ಟೆಕ್ನಿಕಲ್ ಸಪೋರ್ಟ್ ಕೊಡ್ತಿರೋದ್ರಿಂದ. ಈ ಕಾರು ಮುಂದಿನ ವರ್ಷಉಬುಂಟು ೮.೦೪ ಉಪಯೋಗಿಸ್ತದೆ ಅನ್ನೋದು ಕೂಡ ಬಿಸಿ ಬಿಸಿ ಸುದ್ದಿ.
ಕಾರೇನೂ ಅಷ್ಟು ಚೆನ್ನಾಗಿಲ್ಲ ಅಂತ ಗೇಲಿ ಮಾಡ್ತಿದ್ರೇನೋ, ಮುಖ ನೋಡಿ ಮಣೆ ಹಾಕ್ಬೇಡ್ರಿ.
ಸುದ್ದಿ ಮೂಲ ಫೋರೊನಿಕ್ಸ್