ನಿಮಗೆ ಗೊತ್ತೇ? ವಿಚಿತ್ರ ಸಾಕುಪ್ರಾಣಿಗಳು (ಭಾಗ 1)
![](https://saaranga-aws.s3.ap-south-1.amazonaws.com/s3fs-public/styles/article-landing/public/flatten.jpeg?itok=lT8A8SJz)
![](https://saaranga-aws.s3.ap-south-1.amazonaws.com/s3fs-public/styles/article-landing/public/Igel.jpeg?itok=J2Ldylwh)
![](https://saaranga-aws.s3.ap-south-1.amazonaws.com/s3fs-public/styles/article-landing/public/IMG_20221015_122656_2.jpg?itok=qj5VHMYw)
![](https://saaranga-aws.s3.ap-south-1.amazonaws.com/s3fs-public/styles/article-landing/public/stick.jpg?itok=6wlHOEEN)
ಸಾಕುಪ್ರಾಣಿಗಳೆಂದರೆ ಸಾಕು, ನಾಯಿ, ಬೆಕ್ಕು, ಮೊಲ, ಗಿಳಿ, ಪಾರಿವಾಳಗಳು ನಮ್ಮ ಕಣ್ಣೆದುರಿಗೆ ಪ್ರತ್ಯಕ್ಷವಾಗಿ ಬಿಡುತ್ತದೆ ಅಲ್ಲವೇ? ಇಲ್ಲಿ ಜಗತ್ತಿನಲ್ಲಿ ಬೇರೆ ಬೇರೆ ಕಡೆ ಎಂತೆಂತಹ ವಿಚಿತ್ರ ಪ್ರಾಣಿಗಳನ್ನು ತಮ್ಮ ಸಾಕುಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ತಿಳಿಯೋಣ ಬನ್ನಿ.
ಪುಟ್ಟ ಕತ್ತೆ: ಈ ಪುಟ್ಟ ಕತ್ತೆ 'ಶ್ರೆಕ್' ಎನ್ನುವ ಇಂಗ್ಲಿಷ್ ಚಲನಚಿತ್ರದಲ್ಲಿ (ಅನಿಮೇಟೆಡ್) ಕಾಣಿಸಿಕೊಂಡ ಮೇಲೆ ಇದೊಂದು ಜನಪ್ರಿಯ ಸಾಕು ಪ್ರಾಣಿಯಾಗಿದೆ. ಇಂದು ಅಮೆರಿಕದಲ್ಲಿ ಇದೊಂದು ಜನಪ್ರಿಯ ಸಾಕುಪ್ರಾಣಿ. ಈ ಪ್ರಾಣಿಗಳು ಅತ್ಯಂತ ಪ್ರೀತಿ ತೋರಿಸುವ ಹಾಗೂ ಮಕ್ಕಳೊಂದಿಗೆ ಬಲು ಸ್ನೇಹದಿಂದ ಇರಬಲ್ಲವು. ಇವು 3 ಅಡಿ ಎತ್ತರವಿದ್ದು ಸುಮಾರು 90ರಿಂದ 150 ಕಿಲೋಗ್ರಾಂ ತೂಗಬಲ್ಲವು. ಇದು ಸಸ್ಯಾಹಾರಿಯಾಗಿದ್ದು ಸಾಕಲು ಮಾತ್ರ ಹೆಚ್ಚು ಜಾಗ ಬೇಕಾಗುತ್ತದೆ.
ಹೆಜ್ ಹಾಗ್ಸ್ (Hedgehog): 1991 ರಲ್ಲಿ ಬಂದ ಮಕ್ಕಳ ವಿಡಿಯೋ ಆಟದಲ್ಲಿ ಈ "ಹೆಜ್ ಹಾಗ್ಸ್ " ನೇ ನಾಯಕ. ಇದನ್ನು ಮುಳ್ಳುಹಂದಿ ಇದು ತಪ್ಪಾಗಿ ಭಾವಿಸಬಾರದು. ಚಿಕ್ಕದಾದ ಇಲಿಯಂತೆ ಕಾಣುವ ಈ ಪ್ರಾಣಿ ಸುಮಾರು ಅರ್ಧ ಕೆಜಿ ಯಿಂದ 6ಕೆಜಿ ಅವರಿಗೆ ತೂಗಬಲ್ಲದು. ಇವು ಮಿಡತೆಗಳನ್ನು ತಿಂದು ನಾಶ ಮಾಡಬಲ್ಲವು. ಇದರ ವಿಶೇಷವೆಂದರೆ ಇದು ಹಗಲಿಡೀ ಮಲಗಿ, ರಾತ್ರಿ ಇಡೀ ಎಚ್ಚರದಿಂದ ಇರಬಲ್ಲವು. ಆದರೆ ಅಮೆರಿಕದಲ್ಲಿ ಇವುಗಳನ್ನು ಸಾಕಲು ಅನುಮತಿ ಇಲ್ಲ.
ಕೆಪಿ ಬೆರ: ಇದೊಂದು ಗಿನಿ ದೇಶದ ಹಂದಿ. ಇದರ ಮೂಲ ದಕ್ಷಿಣ ಅಮೇರಿಕ ಇದು ಸಂಪೂರ್ಣ ಬೆಳೆದಾಗ ನಾಲ್ಕು ಅಡಿ ಉದ್ದವಿದ್ದು, ಸುಮಾರು 45 ಕೆಜಿ ತೂಗಬಲ್ಲದು. ಇಂತಹ ಪ್ರಸಿದ್ಧಿ ಪಡೆಯದ ಪ್ರಾಣಿಯೊಂದು ಸಾಕು ಪ್ರಾಣಿಯಾಗಿದೆ ಎಂದರೆ ಅಚ್ಚರಿಯಲ್ಲವೇ? ಇದು ಇಂದು ಬುಡಾಪೆಸ್ಟ್ ಮತ್ತು ಟೆಕ್ಸಾಸ್ ಗಳಲ್ಲಿ ಸಾಕುಪ್ರಾಣಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ಇವು ಭಾಗಶಃ ನೀರಿನಲ್ಲಿ ಈಜಬಲ್ಲವು. ಇವು ಚೂಪಾದ ಹಲ್ಲುಗಳನ್ನು ಹೊಂದಿರುವುದರಿಂದ ಚಿಕ್ಕ ಮಕ್ಕಳಿರುವ ಮನೆಯಲ್ಲಿ ಸಾಕಲು ಯೋಗ್ಯವಲ್ಲ..
ಸ್ಟಿಕ್ ಇನ್ ಸೆಕ್ಟ್ (Stick insect): ಇದೊಂದು ಮಕ್ಕಳ ಆಟಕ್ಕೆ ಬಳಸಬಹುದಾದ ವಿಚಿತ್ರ ಪ್ರಾಣಿ. ಇದನ್ನು ಸಾಕಲು ಹೆಚ್ಚು ಶ್ರಮ ಪಡಬೇಕಾಗಿಲ್ಲ. ಈ ಕಡ್ಡಿಯಂತಹ ಪ್ರಾಣಿ ಸುಮಾರು ಮೂರರಿಂದ 4 ಇಂಚು ಉದ್ದವಿರುತ್ತದೆ. ಇದಕ್ಕೆ ಯೋಗ್ಯ ವಾತಾವರಣವನ್ನು ಕಲ್ಪಿಸಿದರೆ ಹಲವಾರು ವರ್ಷಗಳ ಕಾಲ ಸಂಗಾತಿ ಆಗಿರಬಲ್ಲದು. ಕೊಠಡಿಗಳಲ್ಲಿ ನೇತಾಡ ಬಲ್ಲ ಇವುಗಳನ್ನು ಎತ್ತಿ ಆಡಿಸುವಾಗ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕೈಕಾಲುಗಳು ಮುರಿದಾವು ಜೋಕೆ!
ಚಿತ್ರ 1. ಪುಟ್ಟ ಕತ್ತೆ 2. ಹೆಜ್ ಹಾಗ್ 3. ಕಪಿಬೆರ 4. ಸ್ಟಿಕ್ ಇನ್ ಸೆಕ್ಟ್
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ