ನಿಮ್ಮ ದೇಹ ಸೇಬೋ ಪೇರು ಹಣ್ಣೋ?
ಸೇಬೋ ? ಪೇರು ಹಣ್ಣೋ ?
ಬಹಳಷ್ಟು ಜನರಲ್ಲಿ ಕಂಡು ಬರುವಂತಹ ಸಾಮಾನ್ಯ ಸಮಸ್ಯೆ ಎಂದರೆ ದೇಹದ ತೂಕದ ಬಗ್ಗೆ. ಸಣ್ಣಗಿರುವವರು ದಪ್ಪವಾಗಬೇಕೆಂದು, ದಪ್ಪಗಿರುವವರು ಸಣ್ಣಗಾಗಬೇಕೆಂದು !
ನಾವು ಯಾವ ರೀತಿ ಇದ್ದೇವೆ ಎಂಬುದನ್ನು ಅರಿಯೋಣವೇ ?
ನಾವೆಲ್ಲರೂ ಹಣ್ಣಗಳನ್ನು ತಿನ್ನುತ್ತೇವೆ. ನಮ್ಮ ದೇಹ ಯಾವ ಹಣ್ಣಿನಂತಿದ್ದರೆ ಒಳಿತು ?
ನಿಮ್ಮ ದೇಹವು ಸೇಬು ಹಣ್ಣಿನ ಆಕಾರದಂತಿದೆಯೇ ? ಅಥವಾ ಪೇರು ಹಣ್ಣಿನಂತಿದೆಯೇ ?
ದೇಹದ ತೂಕ ಹೆಚ್ಚಿದಂತೆ ಕೊಬ್ಬು ತುಂಬಿದ ಜೀವಕೋಶಗಳ ಗಾತ್ರ ಹಿರಿದಾಗುವುದು. ಇವುಗಳಿಂದ ಅನೇಕ ವಿಧವಾದ ಸಮಸ್ಯೆಗಳುಂಟಾಗುವುದು.
ಇಂಥಹ ಕೊಬ್ಬಿನ ಜೀವಕೋಶಗಳು ಹಾಗೂ ಕೊಬ್ಬು ಶೇಖರಣೆ ದೇಹದ ಮಧ್ಯಭಾಗ ಹಾಗೂ ಮೇಲ್ಬಾಗದಲ್ಲಿದ್ದರೆ. ದೇಹವು ಸೇಬಿನ ಆಕಾರದಲ್ಲಿರುವುದು. ಇಲ್ಲಿ ಶೇಖರಣೆಯಾಗುವ ಕೊಬ್ಬು ಸ್ವಲ್ಪ ವಿಭಿನ್ನವಾಗಿದ್ದು ಇದರಿಂದ ದುಷ್ಪರಿಣಾಮಗಳು ಹೆಚ್ಚು ! ಇಂಥಹವರಲ್ಲಿ ಸಕ್ಕರೆ ಖಾಯಿಲೆಯೂ ಹೆಚ್ಚು.
ದೇಹದಲ್ಲಿನ ಕೊಬ್ಬು, ಸೊಂಟದ ಕೆಳಭಾಗದಲ್ಲಿ ಶೇಖರಣೆಯಾದಲ್ಲಿ ದೇಹವು ಪೇರುಹಣ್ಣಿನ ಆಕಾರವನ್ನು ಹೊಂದುವುದು. ಇಂಥವರಲ್ಲಿ ಸೇಬು ಆಕಾರದವರಿಗಿಂತ ಡಯಾಬಿಟಿಸ್ ಖಾಯಿಲೆ ಕಡಿಮೆ ಎಂದು ಕೆಲವು ವೈಜ್ಞಾನಿಕ ವರದಿಗಳು ತೋರಿಸಿವೆ.
ಏನೇ ಅದರೂ ಅತ್ಯಧಿಕವಾಗಿರುವ ದೇಹದ ಕೊಬ್ಬನ್ನು ಕರಗಿಸಿದರೆ ಆರೋಗ್ಯ ಒಳಿತು.
ನಮ್ಮ ಬಾಡಿ ಮಾಸ ಇಂಡೆಕ್ಸ್ ಅನ್ನು ಅವಲಂಬಿಸಿ,
ನಾವು ಸ್ಥೂಲ ಕಾಯದವರೇ ಎಂಬುದನ್ನು ನಿರ್ಧರಿಸಲಾಗುವುದು.
ಃಒI 30 ಅಥವಾ ಹೆಚ್ಚು ಇದ್ದಲ್ಲಿ ಸ್ಥೂಲಕಾಯ ಹಾಗೂ ಇಂಥವರಲ್ಲಿ ಹೃದಯ ಸಂಬಂಧಿ ರೋಗಗಳು, ಸಕ್ಕರೆ ಖಾಯಿಲೆಗಳು ಮುಂತಾದವು ಬಹಳ ಹೆಚ್ಚು.
ಃಒI 21-25 ಇರುವುದು ಸೂಕ್ತ. ಮೇಲೆ ತಿಳಿಸಿರುವ ಖಾಯಿಲೆಗಳು ಬರುವ ಅವಕಾಶ ಕಡಿಮೆ.
BMI 25-27 ಖಾಯಿಲೆಗಳು ಸಂಭವಿಸುವ ಅವಕಾಶ ಇದೆ.
BMI 27-30 ಮೇಲೆ ತಿಳಿಸಿದ ಖಾಯಿಲೆಗಳಿಗೆ ಗುರಿಯಾಗುವ ಅವಕಾಶ ಹೆಚ್ಚು.
ನಮ್ಮ ದೇಹದ ಬಾಡಿಮಾಸ್ ಇಂಡೆಕ್ಸ್ (BMI)ಅನ್ನು 21-25ರಷ್ಟು ಇರುವಂತೆ ದೇಹದ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸುವುದು ಒಳಿತು.
ಃಒI ಕಂಡು ಹಿಡಿಯುವ ವಿಧಾನ :
ದೇಹದ ತೂಕ (ಕೆ.ಜಿ)
ದೇಹದ ಎತ್ತರ (ಮೀಟರ್ಗಳಲ್ಲಿ) 2
ಉದಾ : ನಿಮ್ಮ ದೇಹದ ತೂಕ 50 ಕೆ.ಜಿ. ಇದ್ದು ನೀವು ಐದು ಆಡಿ ಎತ್ತರವಿದ್ದಲ್ಲಿ (5 ಅಡಿ = 150 ಸೆ.ಮೀ. ಅಂದರೆ 1.5 ಮೀಟರ್)
50
BMI ------------ = 22.2
(1.5)2
BMI - 18.5 ಕ್ಕಿಂತ ಕಡಿಮೆ-ಕಡಿಮೆ ತೂಕ
BMI- 18.5-24.9 ಸರಿಯಾದ ತೂಕ
BMI- 25-29.9 ಹೆಚ್ಚಿನ ತೂಕ
BMI - 30 ಕ್ಕಿಂತ ಹೆಚ್ಚು ಸ್ಥೂಲಕಾಯ