ನಿಯಮ ಪಾಲಿಸುವ

ನಿಯಮ ಪಾಲಿಸುವ

ಕವನ

ಮತ್ತದೇ ಸೋಮಾರಿತನ !

ಮಾಡಬೇಡವೆಂದರು

ಮಾಡಿದೆಯಲ್ಲವೆ ? ಅನುಭವಿಸು ಎನ್ನಲೂ ಬಾರದ ಸ್ಥಿತಿ

ಆತ್ಮೀಯರೇ ಹೀಗೆ ಹೇಳಿದ್ದನ್ನು ಕೇಳುವುದಿಲ್ಲ ಏನೆಂದು ಹೇಳುವುದೂ ಇಲ್ಲ

ಮಾತು ಒಂದು ಹೆಚ್ಚಾಯಿತೋ ಕಣ್ಣೆದುರಿಂದ ದೂರ ಬಹುದೂರ ಹೊರಟೇ ಹೋಗುವರು

 

ಬರಬಾರದ ನೋವು ಬೇಡದೆ ಬಂದಾಗ

ತಿಳಿದವರ ಮಾತನ್ನು ಕೇಳುವ ತವಕವೂ ಇಲ್ಲ

ಉಪದೇಶ ಈಗಿನವರಿಗೆ ಬೇಡವೆಂದಲ್ಲ ಕಾಂಚಾಣವೇ ಕಾರ್ಯಸಿದ್ದಿಯೀಗ

ಉಸಿರು ಬಿಡುವಾಗಲೂ ತನ್ನವರ ನೆನಪಿಸಿಕೊಳ್ಳದೆ ಹಣದೊಳಗೇ ತೂರಿಹೋದವರು ನಮ್ಮ ಸನಿಹದಲ್ಲಿದ್ದಾರೆ ನಡುವಲ್ಲಿದ್ದಾರೆ 

ಬದುಕು ಮಾಯೆಯೊಳಗಿನ ಮಾಯೆಯೆಂಬುವುದು ತಿಳಿದಾಗ

ಎಲ್ಲವೂ ಬದಲಾವಣೆಯ ಸಮಯ ಬದಲಾಗಲೇ ಬೇಕು!

 

ಸುಮ್ಮನಾಗದಿರಿ ಒಬ್ಬರಿಗೊಬ್ಬರು ಧೈರ್ಯ ತುಂಬುವ ಕೆಲಸ ತುರ್ತಾಗಿ ಆಗಬೇಕಿದೆ

ಸಹಾಯ ಸಹಕಾರ ನಿರ್ಮಲ ಮನಸ್ಸಿಂದ ಮಾಡಬೇಕಿದೆ

ಬದುಕುವ ದಾರಿಯಲಿ ಎಲ್ಲರೊಂದೆ ತಿಳಿದು ಮುನ್ನುಗ್ಗುವ

ದೇಶದ ಬಹುಸಾಮಾನ್ಯ ಜನರ ಮುದುಡಿದ ಮನವ ಮತ್ತೆ ಅರಳಿಸುವ ಅರಳಿಸುವ ಅರಳಿಸುವ !

***

ಗಝಲ್

 

ಮುಂದೊಂದು ದಿನ ಹೀಗೆಯೇ ಜೀವನ ಹೇಳಲಾಗುವುದಿಲ್ಲ

ಮತ್ತೆಂದೂ ಮರಳಿ ಬರುವೆನು ಎಂಬುವುದನ್ನು ತಿಳಿಸಲಾಗುವುದಿಲ್ಲ

 

ಎದೆಯಲ್ಲಿ ನೋವು ಬಂದಿತೆಂದರೇ ಆಸ್ಪತ್ರೆಗೆ ಓಡುವ ಜಾಯಮಾನ

ಉಪ್ಪರಿಗೆಯಲ್ಲಿ ಇದ್ದ ಮನುಷ್ಯನಿಗೂ ಸಾವನ್ನು ನಿಲ್ಲಿಸಲಾಗುವುದಿಲ್ಲ

 

ಮೊದಲೆಲ್ಲ ಹಳ್ಳಿಯ ಮದ್ದಲ್ಲೆ ಕಡಿಮೆ ಆಗುತ್ತಿತ್ತು ಕಾಯಿಲೆ

ಏನೂ ಇಲ್ಲದವರಿಗು ಈಗೀಗ ಆಸ್ಪತ್ರೆಯ ಸಹವಾಸ ತಪ್ಪಿಸಲಾಗುವುದಿಲ್ಲ

 

ಜನಸಾಮಾನ್ಯರ ನೋವುಗಳು ಉಳ್ಳವರ ಮಹಲಿನ ಒಳಗೆ ತೂರದೆ

ನಮ್ಮವರ ಬಾಗುವ ಗುಣವನ್ನು ಮತ್ತೆಂದು ಹೇಳಿ ಬದಲಾಯಿಸಲಾಗುವುದಿಲ್ಲ

 

ಈಶನ ಎಚ್ಚರಿಸುವ ಗುಣವನ್ನು ಅರಿಯದೆ ಹೋದರೆ ಇವರು

ಬಡಪಾಯಿಯ ತಲೆಗೆ ಅವನದೇ ಕೈಯೆಂದರು ಮತ್ತೂ ಸರಿಯಾಗುವುದಿಲ್ಲ

 

-ಹಾ ಮ ಸತೀಶ

 

ಚಿತ್ರ್