ನಿರೀಕ್ಷೆ
ಬರಹ
ಮೋಡದ ಮರೆಯಲಿ, ಚಂದೀರ ಅವಿತಂತೆ,
ಹೆಣ್ಣೇ, ನೀನೇಕೆ ಕುಳಿತೆ ಕಾಣದಂತೆ,
ಗೊತ್ತೈತಿ ನಿನ್ನ ರೂಪ ಚಂದವಂತೆ,
ತೋರಬಾರದೆ ಆ ಮೊಗವ,
ಬಾಯಾರಿದವನಿಗೆ ಸಿಗುವ ನೀರಿನಂತೆ....
ನನ್ನೀ ಮನಸಿನ ಕನ್ನಡಿಯಲ್ಲೇ,
ಸಿಂಗಾರ ಮಾಡುವೆ, ಬಾ ನನ್ನ ನಲ್ಲೆ,
ಮುಡಿಸಿ ನಿನಗೆ, ಮೈಸೂರ ಮಲ್ಲೆ,
ನಾಚುತ್ತ ಕುಳಿತ ಆ ಮೊಗವ,
ತೋರದೆ ಕೊಲ್ಲುತಿಹೆ, ನಿನ್ನೀ ಕಣ್ಣೀನಲ್ಲೇ..............
ದಿನಕೊಂದು ರೂಪ, ಕ್ಷಣಕೊಂದು ಕಲ್ಪನೆ
ಮಾಡುತ್ತ ಕುಳಿತೆ, ನನ್ನ ಮನದನ್ನೆ,
ಮರೆತೇನು ನಾನು ನನ್ನನ್ನೇ,
ಕಾಯುತ್ತ ಕುಳಿತೆ ನಾನಾಗ,
ನೀ ನನ್ನ ಕರೆಯುವ ಆ ಸನ್ನೆ.....................
ನನ್ನವಳ ನಿರೀಕ್ಷೆಯಲ್ಲಿ
ಗುರುಪ್ರಸಾದ್