ನಿರೀಕ್ಷೆಗಳಿಲ್ಲದ ಕಾಲ

ನಿರೀಕ್ಷೆಗಳಿಲ್ಲದ ಕಾಲ

ಕವನ

ಯಾರಲ್ಲೂ ನಿರೀಕ್ಷೆ ಇಡಬೇಡ

ಕೊನೆಗೆ ನನ್ನಲ್ಲೂ !

ಸಂದ ಪ್ರಾಯವನು 

ಎಣಿಸುತ್ತಾ ಕೂರಬೇಡ

ಮನವು ಮೌನವಾಗುವ 

ಸಮಯ ಬಂದಿದೆ

 

ಹಾಗೇ ಪಾರ್ಕಿನ 

ಕಲ್ಲು ಬೇಂಚಲ್ಲಿ ಕುಳಿತಿದ್ದ 

ಸಮಯ 

ಯೌವನದ ದಿನಗಳ ನೆನಪಿಸಿಕೊಳ್ಳಬೇಡ 

ಯಾವ ತರುಣಿಯು 

ತಿರುಗಿಯೂ ನೋಡಳು !

 

ಚಿಕ್ಕವನಾಗಿದ್ದಾಗ, 

ಪ್ರೀತಿಯಿಂದ ತಿನ್ನುತ್ತಿದ್ದ 

ತಿನಿಸುಗಳ ಹೆಸರು 

ಇಂದು ನೆನಪು ಮಾತ್ರ !

ಬಂದಿರುವ ರೋಗಗಳ 

ನಡುವೆ ದೇಹ ಸತ್ತು ಬದುಕಿದೆ !

 

ನಮ್ಮ ಕಾಲವೇ ಹಾಗಿತ್ತು 

ಹೀಗಿತ್ತು ಅನ್ನುವ ಬದಲು

ಈಗಿನ ವ್ಯವಸ್ಥೆಯಂತೆ 

ಇದ್ದು ಸಾಗಬೇಕಿದೆ

ನಾಡು ಬೆಳೆದಿದೆ , 

ಅದಕ್ಕೆ ತಕ್ಕಂತೆ 

ನಾನೂ ಬದಲಾಗಬೇಕಿದೆ !

 

ಏನು ಬರೆದಿರುವೆನೋ ತಿಳಿಯದು

ಜೊತೆಗಾರರ ಹೂಂಕಾರಗಳಿಗೆ 

ತಲೆ ಬಾಗುತ ಸಾಗಿರುವೆ

ಹುಟ್ಟು ಸಾವು ಇವುಗಳ 

ನಡುವೆ ಒಂಟಿಯಾಗಿ ಮಲಗಿಹೆ

ಹೊಸ ಜನುಮ ಇದೆಯೋ ಇಲ್ಲವೋ ? 

ಈಗ ಉಸಿರಾಡುತ್ತಿರುವೆ !

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್