ನಿರೀಕ್ಷೆ (ಕಾದಿಹಳು ಅಭಿಸಾರಿಕೆ)

ನಿರೀಕ್ಷೆ (ಕಾದಿಹಳು ಅಭಿಸಾರಿಕೆ)

ಇವತ್ತ್ಯಾಕೋ ಎಲ್ಲಿಲ್ಲದ ಮಳೆ ಸುರಿಯುತ್ತಿದೆ. ಗುಡುಗು ಸಿಡಿಲಿನ ಆರ್ಭಟವು ಕೂಡಾ ಒಂದರ ಮೇಲೊಂದರಂತೆ ಘರ್ಜಿಸುತ್ತಿದೆ, ಗಾಳಿಯ ರಭಸಕ್ಕೆ ಮರಗಳೆಲ್ಲ ಬಿದ್ದು ಕರೆಂಟ್ ಬರುವುದೇ ಇಲ್ಲವೋ ಎಂದು ಕಾದು ಕುಳಿತ್ತಿದ್ದೆ ಯಾವುದೇ ಕೆಲಸ ಮಾಡಲೂ ಮನಸ್ಸಿಲ್ಲದೆ ಹಾಗೇ ಹೊರಬಂದು ಬೀಳುತ್ತಿದ್ದ ಮಳೆಹನಿಯನ್ನೇ ಗಮನಿಸುತ್ತಿದ ನನ್ನ ಮನಸ್ಯಾಕೋ ಬೇಡ ಬೇಡವೆಂದರೂ ಕೇಳದೆ ಹಳೆಯ ದಿನಗಳನ್ನು ಜ್ಞಾಪಿಸುತ್ತಿದ್ದವು.ಈ ಮಳೆಗೂ ನನ್ನ ಯೋಚನೆಗಳಿಗೂ ಯಾವುದೇ ಸಂಬಂಧವಿಲ್ಲವಾದರೂ, ಸುಮ್ಮನೆ ಕೂತವಳ ಮನಸ್ಸಿನಲ್ಲಿ ಕೆಲವೊಂದು ಪ್ರಶ್ನೆಗಳು ಉದ್ಭವಿಸಿದ್ದು ನಿಜಾನೆ.

ಹಾಗೆ ಕೂತವಳು ಎದ್ದು ಪೋನ್ ತೆಗೆದು ಫೇಸ್ಬುಕಗೆ ಹೋದರೆ ಅಲ್ಲಿ ಎಷ್ಟೊ ವೀಡಿಯೋಗಳು ನೋಡುತ್ತಾ ಕುಳಿತರೆ ಸಮಯ ಸರಿದದ್ದೆ ತಿಳಿಯುವುದಿಲ್ಲ. ಇನ್ನು ವಾಟ್ಸಾಪ್ ನಲ್ಲಿ ಬೇಕಾದಷ್ಟು ಸ್ನೇಹಿತರು, ಅದರಲ್ಲಿ ಗ್ರೂಪ್ ಗಳು, ಒಟ್ಟಾರೆಯಾಗಿ ಹೇಳಬೇಕಾದರೆ ಇವತ್ತಿನ ಮಕ್ಕಳಿಂದ ಹಿಡಿದು ಹಣ್ಣ ಹಣ್ಣು ಮುದುಕರವರೆಗೆ ಸಮಯ ಕಳೆಯಲು ಈ ಮೊಬೈಲ್ ಎಂಬ ಮಾಯಾಪೆಟ್ಟಿಗೆಯೊಂದಿದ್ದರೆ ಇನ್ನೇನು ಬೇಡ,ಆದರೆ ಇವತ್ತ್ಯಾಕೋ ಇದೆಲ್ಲವು ಬೇಡ ಅನಿಸಿತು.

ಅದಕ್ಕೆ ಈ ಮಾಯಾ ಪೆಟ್ಟಿಗೆನ ತೆಗೆದಿಟ್ಟು ಸುಮ್ನೆ ಕೂತಿದ್ದೀನಿ. ಏನೊಂದು ಯೋಚನೆ ಇಲ್ಲದೆ ಹಾಯಾಗಿದ್ದ ಮನಸೇಳಗೆ ಒಂದು ದಿನ "ಅವನು" ಆಗಮನವಾಯಿತು, ಬಂದವನು ಹೇಳದೆ ಕೇಳದೆ ತುಂಬಾ ಪ್ರೀಯವಾಗಿ ಬಿಟ್ಟ. ಗುಡ್ ಮಾರ್ನಿಂಗ್ ಯಿಂದ ಶುರುವಾದ ಮೆಸೇಜ್ ಗಳು ಗುಡ್ ನೈಟ್ ವರೆಗೆ ಮುಂದುವರೆಯಲು ತುಂಬಾ ಸಮಯವನ್ನೇನೂ ತೆಗೆದುಕೊಂಡಿಲ್ಲ,ಅವನ ಆಗಮನ ಮನಸ್ಸಿಗೆ ತುಂಬಾ ಖುಷಿಕೊಟ್ಟಿದ್ದು ಸುಳ್ಳಲ್ಲ. ಯಾವುದೋ ಮದುವೆ ಮನೆಯಲ್ಲಿ "ಆತನ" ಪರಿಚಯವಾಯಿತ್ತು, ಆತನ ಮುದ್ದಾದ ನಗು, ನಿಷ್ಕಲ್ಮಶ ಮನಸ್ಸು, ಈ ಜನ್ಮದಲ್ಲಿ "ಆತ" ಯಾರನ್ನು ನೋಯಿಸಿರಲಾರ ಅನ್ನಿವಷ್ಟು ಮುಗ್ಧ ಸ್ವಭಾವ ಹತ್ತು ಮಾತಿಗೆ ಒಂದೆರಡು ಉತ್ತರ, ಆಡಂಬರವಿಲ್ಲದ "ಅವನನ್ನು" ನೋಡಿದಾಕ್ಷಣ ಯಾರಿಗಾದರೂ ಒಮ್ಮೆ ಮಾತನಾಡಬೇಕು ಅನ್ನಿಸೋದು ಗ್ಯಾರಂಟಿ.

ಆವತ್ತು ನನ್ನ ಗೆಳತಿ ಮದ್ವೆ ಆತ ಅವಳಿಗೆ ದೂರದ ಸಂಬಂಧಿ, ಮದ್ವೆ ಮುಂಚಿನ ದಿನ ಅವರ ಮನೆಗೆ ಹೋದಾಗ " ನನ್ನವನ" ದರ್ಶನವಾಗಿತ್ತು. ಇಡೀ ದಿನ ಅವರ ಮನೆಯಲ್ಲೇ ಮನೆಯವಳಾಗಿ ಇದ್ದಿದ್ದರಿಂದ ಆತನನ್ನು ಗಮನಿಸಲು ಸಾಧ್ಯವಾಯಿತು. ಹಾಗೇ ನೋಡ್ತಾ ನೋಡ್ತಾ ಸಂಜೆಯಾಯಿತ್ತು ,ಇನ್ನೇನು ಮನೆಗೆ ಹೊರಡ್ಬೇಕು ಅನ್ನೊಷ್ಟರಲ್ಲಿ ನನ್ನ ಪೋನ್ ನಂಬರ್ ಅವನಿಗೆ ಕೊಟ್ಟುಬಿಟ್ಟಿದ್ದೆ. ಹಾಗೇ ಕೊಟ್ಟು ಮನೆಗೆ ಬಂದು ನನ್ನೆಲ್ಲ ಕೆಲಸ ಮುಗಿಸಿ ಮಲಗೋದಕ್ಕೆ ಹೋದಾಗ ಎಂದಿನ ಅಭ್ಯಾಸದಂತೆ ಮೊಬೈಲ್ ಹಿಡಿದು ಕೂತೆ. ಮೊಬೈಲ್ ಓಫನ್ ಮಾಡಿದಾಕ್ಷಣ ಖುಷಿಯೋ ಖುಷಿ, ಯಾಕಂದ್ರೆ ಅವನ ಗುಡ್ ನೈಟ್ ಮೆಸೇಜ್ ಬಂದಿತ್ತು. ನಾನೂ ಒಂದು ಗುಡ್ ನೈಟ್ ಕಳಿಸಿದೆ. ಮರುದಿನ ಎದ್ದು ಬೇಗನೇ ರೆಡಿಯಾಗಿ ಮದುವೆ ಮನೆಗೆ ಹೊರಟೆ ನನ್ನ ಸ್ನೇಹಿತೆ ನನ್ನನ್ನು ನೋಡಿದಾಕ್ಷಣ ಯಾಕೆ ಲೇಟು ಅಂತ ಕೇಳಿದ್ರೆ ಅವಳ ಅಮ್ಮ ರಾತ್ರಿ ಇಲ್ಲೇ ಇರಬಹುದಿತ್ತು ಅಂತ ಪ್ರೀತಿಯಿಂದ ಗದರಿಸಿದರು. ಎಲ್ಲರಿಗೂ ಸಮಾಧಾನ ಮಾಡಿ ಅವಳನ್ನು ರೆಡಿ ಮಾಡಿ ಒಂದೆರಡು selfie ತೆಗೆದು ಮುಗಿದರೂ ನನ್ನವನ ಪತ್ತೆ ಇಲ್ಲ. ಅರೆ ಎಲ್ಲೋದ ಅಂತ ಅಂದ್ಕೊಂಡು ಹೊರ ಬಂದಾಗ ಅದೇ ಮುಗುಳ್ನಗು ಹೊತ್ಕೊಂಡು ಗುಡ್ ಮಾರ್ನಿಂಗ್ ಅಂದ, ಮನಸ್ಸು ಮತ್ತೊಮ್ಮೆ ಹಕ್ಕಿಯಾಯಿತು, ಈ ಮುಗುಳ್ನಗೆಯೂ ಯಾವತ್ತು ಹೀಗೇ ಇರಲಿ ಎಂದು ಎಷ್ಟು ಸಾರಿ ದೇವರಿಗೆ ಕೈ ಮುಗಿದಿದ್ನೋ ಲೆಕ್ಕನೇ ಇಲ್ಲ. ಅಂತು ಇಂತು ಮದ್ವೆನೂ ಮುಗಿತು,ಮದುಮಗಳನ್ನು ಕಳುಹಿಸಿಕೊಟ್ಟ ಮೇಲೆ ಎಲ್ಲರೂ ಅವರವರ ಗೂಡುಗಳಿಗೆ ಮರಳಲೇ ಬೇಕಲ್ವಾ. ನನ್ನ ಸ್ನೇಹಿತೆಯ ಅಗಲುವಿಕೆ ನನಗೂ ಕೂಡಾ ಬೇಸರ ತಂದಿತ್ತು. ಆದ್ರೆ ಅವಳನ್ನು ಮನಸಾರೆ ಹಾರೈಸಿ ಒಲ್ಲದ ಮನಸ್ಸಿನಿಂದ ಮನೆಗೆ ಹಿಂತಿರುಗಿದೆ. ಅಷ್ಟರಲ್ಲಿ ಅವಳ ಅಮ್ಮ ನನ್ನನ್ನು ಕರೆದು ನಾಳೆ ಬೆಳಿಗ್ಗೆ ಸ್ವಲ್ಪ ಬಂದ ಬಿಡೆ,ಮನೆ ಎಲ್ಲಾ ಅಸ್ತವ್ಯಸ್ತವಾಗಿದೆ,ನೀನು ಬಂದರೆ ಸ್ವಲ್ಪ ಹೆಲ್ಪ್ ಆಗುತ್ತೆ ಅಂದರು. ಅದು ಕೂಡಾ ಮನೆ ತರ ಅಲ್ವ್ ಅದಕ್ಕೆ ಅಷ್ಟೊಂದು ಸಲಿಗೆ ಅದಕ್ಕೆ ಓಕೆ ಬರತ್ತೀನಿ ಎಂದು ತಿಳಿಸಿ, ಮನೆಗೆ ಹಿಂತಿರುಗಿ ನೆಚ್ಚಿನ ಗೆಳತಿಯ ನೆನಪಿನಲ್ಲಿ ಕುಳಿತು ನನಗೆ ಹೊತ್ತಾಗಿದ್ದೇ ಗೊತ್ತಾಗಲಿಲ್ಲ. ಅಂತೂ ಇಂತೂ ಊಟದ ಶಾಸ್ತ್ರ ಮುಗಿಸಿ ಮಲಗಲು ರೆಡಿ ಆಗುತ್ತಿದ್ದ ವೇಳೆ ಮೊಬೈಲ್ ಮೆಸೇಜ್ ರಿಂಗ್ ಕೇಳಿಸಿತು, ತೆರೆದು ನೋಡಿದ್ರೆ ಅದೇ ಗುಡ್ ನೈಟ್ ಮೆಸೇಜ್ ಗೆಳತಿ ನೆನಪು ನಿದ್ದೆ ಎಲ್ಲಾ ಹಾರಿ ಹೋಗಿ ಮನಸ್ಸು ಸ್ವಲ್ಪ್ ಉಲ್ಲಾಸಭರಿತವಾಗಿತ್ತು.

ಅದೇ ಗುಂಗಿನಲ್ಲಿ ಮಲಗಿದ ನನಗೆ ಬೆಳಿಗ್ಗೆ ಅಲಾರಂ ಬಡಿದಾಗಲೇ ಎಚ್ಚರವಾಗಿದು, ಬೇಗ ಬೇಗ ದಿನ ನಿತ್ಯದ ಕೆಲಸ ಮುಗಿಸಿ ಮತ್ತೆ ಗೆಳತಿಯ ಮನೆಗೆ ಹೊರಟಾಗ ಗಂಟೆ ಹನ್ನೊಂದಾಗಿತ್ತು,ಗೇಟ್ ದಾಟುತ್ತಿದ್ದಾಗಲೇ ಬರಮಾಡಿಕೊಂಡಿದ್ದು ನನ್ನ ಗೆಳತಿಯ ಅಣ್ಣ. ಹಾ ಅಂದ ಹಾಗೆ ಅಣ್ಣ ಮತ್ತು ನನ್ನಾತ ಒಂದೇ ಕಂಪನಿಯಲ್ಲಿ ಕೆಲಸ ಮಾಡೋದು. ಬಹಳ ಅರ್ಜೆಂಟಿ ನಲ್ಲಿದ್ದ ಅಣ್ಣನನ್ನು ತಡೆದು ಯಾಕೋ ಇಷ್ಟು ಅರ್ಜೆಂಟನಲ್ಲಿದಿಯಾ ಎಂದು ಕೇಳಿದೆ. ಏನಿಲ್ಲ ಸ್ವಲ್ಪ್ ಹೊರಹೋಗಿ ಬರಬೇಕು. ಆಮೇಲೆ ಸಂಜೆನೆ ಹೊರಡ್ಬೇಕು ರಜೆ ಇಲ್ಲ, ನಾಳೆ ಡ್ಯೂಟಿಗೆ ಹೋಗ್ಬೇಕು ಅಂತ ಹೇಳಿ ಗಾಡಿ ಮಾಡಿ ಹೊರಟೆ ಬಿಟ್ಟ. ನನ್ನ ಆಲೋಚನೆಗಳು ಮಾತ್ರ ಅವನಿಗಿಂತ ವೇಗದಲ್ಲಿ ಹೊರಟಿದ್ದವು, ಅಂದ್ರೆ ಇವತ್ತು ಸಂಜೆ ನನ್ನವನು ಕೂಡಾ ಹೊರಡ್ತಾನೆ. ಇನ್ನು ನಾನ್ಯಾವತ್ತೂ ಆತನನ್ನು ನೋಡೊದಿಕ್ಕೆ ಆಗೋದೆ ಇಲ್ವೇನೋ ಅಂತ, ಅಷ್ಟರಲ್ಲಿ ಆಂಟಿ ಕರೆದದ್ದು ಕೇಳಿ ಒಳಗೋದೇ ಆತ ಅಲ್ಲೇ ಕೂತಿದ್ದ, ಅದೇ ಮುಗುಳ್ನಗು ಶಾಂತ ಸ್ವಭಾವ ಕೆಲಸ ಎಲ್ಲಾ ಮುಗಿಸಿ ಊಟ ಮಾಡಿ ಎದ್ದಾಗ ಗಂಟೆ ನಾಲ್ಕಾಗಿತ್ತು,ಅಣ್ಣ ಮತ್ತು ಆತ ಹೊರಟು ನಿಂತಿದ್ದರು .ನಾನು ಕೂಡಾ ಹೊರಡ್ತೀನಿ ಅಂದೆ,ಆಂಟಿ ಜೊತೆ ಮಾತಾಡಿ ಹೊರಬಂದಾಗ ನನ್ನಾತ ಒಬ್ಬನ್ನೇ ನಿಂತಿದ್ದ . ನನ್ನನ್ನ ನೋಡಿ bai ಹೋಗಿ ಬರ್ತೀನಿ ಎಂದ, ಓಕೆ bai safe journey ಎಂದು ಭಾರವಾದ ಹೃದಯದ ಜೊತೆಗೆ ಮನೆಗೆ ಬಂದು ಸೇರಿದೆ. ಯಾಕೋ ಯಾವುದರಲ್ಲೂ ಉತ್ಸಾಹವಿಲ್ಲ ಅನಿಸಿ ಮಲಗಿ ಬಿಟ್ಟೆ. ಆವತ್ತು ಅವನ ಯಾವುದೇ ಮೆಸೇಜ್ ಇರಲಿಲ್ಲ ನಾನು ಕೂಡಾ ಮಾಡೋದಿಕ್ಕೆ ಹೋಗಿಲ್ಲ.

ಮಾರನೇ ದಿನ ಗುಡ್ ಮಾರ್ನಿಂಗ್ ಎಂದು ಮೆಸೇಜ್ ಬಂತು ,fulll ಖುಷಿಯಾಗಿ vgood ಮಾರ್ನಿಂಗ್ ಎಂದು ಮೆಸೇಜ್ ಕಳುಹಿಸಿದೆ. ಆ ದಿನ ಆಫೀಸಿಗೆ ಹೋಗಬೇಕಾಗಿರುವುದ್ದರಿಂದ ಬೇಗ ಬೇಗ ರೆಡಿಯಾಗಿ, ಆಫೀಸಿಗೆ ಹೋದೆ. 3-4 ದಿನ ರಜೆ ತೆಗೆದುಕೊಂಡಿದ್ದರಿಂದ ಕೆಲಸ ಎಲ್ಲಾ ಹಾಗೇ ಉಳಿದುಕೊಂಡಿತ್ತು. ಎಲ್ಲಾ ಮುಗಿಸಿ ಅಬ್ಬಾ ಅಂತ ಕೂತ chair ಗೆ ಒರಗಿದಾಗ ಸ್ವಲ್ಪ ಹಾಯೆನಿಸಿತು, ಅಷ್ಟರಲ್ಲೇ ಪೋನ್ ರಿಂಗ್ ಆಯಿತು ನೋಡಿದ್ರೆ ನನ್ನ ಮುಗುಳ್ನಗೆ ನಾಯಕನ ಕಾಲ್ ಖುಷಿಯಾಯ್ತು ಜೊತೆಗೆ ಅರೆ ಕೆಲಸದ ನಡುವೆ ಈತನನ್ನು ಮರತೆ ಬಿಟ್ಟೆನಲ್ಲಾ ಅಂತ ಅನಿಸಿತು. ಇರಲಿ ಅಂತ ಪೋನ್ ರಿಸಿವ್ ಮಾಡಿ ಮಾತಾಡಿದೆ ಪೋನ್ ಮಾಡಿದ್ದು ಅವನೆ ಆದರೂ ಮಾತೆಲ್ಲ ನನ್ನದೇ ಮಾತಿನ ನಡುವೆ ತಡೆದು ಆತ ಕೇಳಿದ " ಇವತ್ತು ನಾನು ಕಾಲ್ ಮಾಡ್ತೀನಿ ಅಂತೇನಾದ್ರೂ ಗೊತ್ತಿತ್ತಾ ಅಂತ ,ಇಲ್ಲ ಯಾಕೆ? ಅಂದೆ ಏನಿಲ್ಲ ಆವಾಗಿಂದ ಮಾತಾಡ್ತಾನೇ ಇದ್ದಿಯಲ್ಲಾ ನಾನು ಕಾಲ್ ಮಾಡ್ತಿನಿ ಅಂತ ಮೊದಲೆ ತಯಾರಾಗೇ ಇದ್ದಂತಿದೆ ಅಂದ, ಆತನ ಮಾತಿಗೆ ಸ್ವಲ್ಪ್ ಜೋರಾಗೇ ನಕ್ಕು, ನಾನಿರೋದೇ ಹೀಗೆ ಅಂದೆ ಓಕೆ ಇನ್ಮುಂದೆ ಸ್ವಲ್ಪ ಕಮ್ಮಿ ಮಾತಾಡ್ತೀನಿ ಅಂದೆ, ಹೇಯ್ ಹಾಗೆಲ್ಲ ಮಾಡಬೇಡ, ನೀನು ಸದಾ ಕಾಲ ಹೀಗೆ ನಗನಗುತ್ತಾ ಇರು ಅಂದ, ಹಾಗೇ ಮಾತು ಮುಗಿಸಿ ಮತ್ತೆ ನನ್ನ ಕೆಲಸಕ್ಕೆ ತಯಾರಿಯಾದೆ, ಒಂದೆರಡು ದಿನ ಹೀಗೆ ಕಳೆಯಿತ್ತು, ಆಮೇಲೊಂದು ದಿನ ನಾನು ಕೆಲಸದಲ್ಲಿ ಇದ್ದಾಗ ಆತನ ಕಾಲ್ ಬಂದಿತ್ತು, ನಾನು ಅರ್ಜೆಂಟಲ್ಲಿದ್ದೆ ,ಆದ್ದರಿಂದ ಆಮೇಲೆ ಮಾಡಿದ್ರಾಯ್ತು ಅಂತ ಸುಮ್ಮನಾದೆ, ಪೋನ್ ಸೈಲೆಂಟ್ ಇದ್ದಿದ್ದರಿಂದ ಮೊದಲು ಬಂದ ಮೂರು-ನಾಲ್ಕು ಕರೆಗಳು ನನಗೆ ಗೊತ್ತಾಗಿರಲಿಲ್ಲ. ಕೆಲಸ ಮುಗಿಸಿ ಪೋನ್ ನೋಡಿದ್ರೆ miss call ತುಂಬಿ ಹೋಗಿತ್ತು. ಮೊದಲು ಈತನಿಗೊಂದು call ಮಾಡಿ ಮಾತಾಡತ್ತೀನಿ ಅಂದುಕೊಂಡು ಫೋನ್ ಮಾಡಿದೆ. ಆಜೆ ಕಡೆಯಿಂದ ಸೈಲೆಂಟ್ ಆಗಿ ಹಲೋ ಅಂತ ಬಂತು ,ನಾನು ಮಾಡಿದಾಗಲೇ ಮಾತಾಡ್ತಾ ಹೋದೆ. ಆದ್ರೆ ಆತ ಇಷ್ಟು ದಿನ ಇದ್ದದಕ್ಕಿಂತ ಸ್ವಲ್ಪ್ ಜಾಸ್ತಿನೇ ಸೈಲೆಂಟ ಆಗಿ ಇದ್ದ ಅಂತ ಅನ್ನಿಸಿತ್ತು. ಯಾಕೆ ಸೈಲೆಂಟ್ ಇದ್ದೀರಾ ಎಂದು ಕೇಳ್ದೆ, ಆದಕ್ಕವನು ಹಾಗೆನಿಲ್ಲ ನಾನು ಇರೋದೇ ಹೀಗೆ ಅಲ್ವಾ, ಅದಕ್ಕೆ ,ನಾನು ಅದು ಸರೀನೇ ಆದರೆ ಇವತ್ಯಾಕೋ ಸ್ವಲ್ಪ್ ಜಾಸ್ತಿನೇ ಸೈಲೆಂಟ್ ಆಗಿರೋ ಹಾಗಿದೆ ಅಂದೆ ಅದಕ್ಕೆ ಮಾರ್ನಿಂಗ್ ಎಷ್ಟೊಂದು ಕಾಲ್ ಮಾಡಿದೆ ಗೊತ್ತಾ, ಹಾಂ ನಾನು ಸ್ವಲ್ಪ್ workನಲ್ಲಿದೆ ಅಂದೆ. ಫೋನ್ ಸೈಲೆಂಟ್ ಇತ್ತು so ಗೊತ್ತಾಗಿಲ್ಲ sorry ಅಂದೆ. ಇಲ್ಲ ಹಾಗೇನಿಲ್ಲ ಪರವಾಗಿಲ್ಲ ಬಿಡು ಅಂದ ,call ಮಾಡದೆ ಇರುವುದಕ್ಕೆ ಈ ತರ ಮುಖ ಊದಿಸ್ಕೊಂಡಿದ್ದಾರೆ ಅಂತ ತಿಳಿಯೋದಕ್ಕೆ ತುಂಬಾ ಹೊತ್ತೇನೂ ಆಗಿಲ್ಲ. ಮತ್ತೆ sorry ಕೇಳ್ದೆ ಅದಕ್ಕೆ ಆತ, ಇವತ್ತು ನಾನು ನಿನಗೆ ಅಷ್ಟೊಂದು ಕಾಲ್ ಮಾಡಿದ್ರು ನೀನು call recv ಮಾಡದೆ ಇರುವುದನ್ನು ನೋಡಿ ನೀನು ನನ್ನ ಮರೆತು ಬಿಟ್ಟೆ ಅಂತ ಅಂದ್ಕೊಂಡೆ ಅಂದ, ಇಲ್ಲಪ್ಪ ಹಾಗೇನಿಲ್ಲ phone silent ಇತ್ತು. so ಗೊತ್ತಾಗಿಲ್ಲ ಅಂದೆ. ಇನ್ಯಾವತ್ತೂ ನಿನಗೆ call ಮಾಡ್ಲೇ ಬಾರದು ಅಂತ ಅಂದ್ಕೊಂಡೆ ಅಂದ. ಅಯ್ಯೋ ಹಾಗೆಲ್ಲ ಮಾಡ್ಬೇಡಿ ಅಂದೆ. ಮತ್ತೆ ಮತ್ತೆ ಮರೆತು ಬಿಟ್ಟೆ ಅಂದ್ಕೊಂಡೆ ಅಂದಾಗ ಪಾಪ ಅನ್ನಿಸಿತ್ತು, ನೋಡಿ ನಾನ್ಯಾವತ್ತೂ ಯಾರನ್ನು ಮರೆಯಲ್ಲ ನನ್ನವರೇ ನನ್ನನ್ನು ಮರೆತು ಬಿಡೋದು. ಮರೆತು ಬಿಟ್ಟವರ ನೋವು ಏನಂತ ನನಗೆ ಬಹಳ ಒಳ್ಳೆ ತರ ಗೊತ್ತು, ಅದ್ರಿಂದ ನಾನ್ಯಾರನ್ನು ಮರೆಯಲ್ಲ ಅಂದೆ.

ಒಂದೆರಡು ನಿಮಿಷದ ಮೌನದ ನಂತರ ಆತನೇ ಮೌನ ಮುರಿದ. ಒಂದು ಹುಡ್ಗಿನ ಪ್ರೀತಿಸಿದೆ, ಎಷ್ಟೋ ಹುಡ್ಗಿರು ನನಗೆ propose ಮಾಡಿದ್ದಾರೆ ಆದ್ರೆ ನಾನು ಪ್ರೀತಿಸಿದ್ದು ನನ್ನ ಅತ್ತೆ ಮಗಳನ್ನ ಎಲ್ಲಾನೂ ಒಳ್ಳೇದೇ ಇತ್ತು, ಆದ್ರೆ ಏನಾಯ್ತೋ ಏನೋ ಅವಳ lifeಲ್ಲಿ ಬೇರ್ಯಾರೊ ಬಂದ. ನನ್ನನ್ನು ಬಿಟ್ಟು ಹೋದಳು. ಆಮೇಲಿಂದ ಯಾರನ್ನು ನಂಬೋಕ್ಕಾಗಲ್ಲ so plz ನೀನು ನನ್ನ ಜೊತೆ ಚೆನ್ನಾಗಿ ಇರು ಅಂದ. ಆ ಘಳಿಗೆಲಿ ಇಷ್ಟೊಂದು ಒಳ್ಳೆಯ ಹುಡುಗನ್ನ ಬಿಟ್ಟೋದವಳ ಬಗ್ಗೆ , ಯಾವ ಯಾವ ತರ ಹುಡ್ಗಿರಿತ್ತಾರೋ ಅಂತ ಬೇಸರವೂ ಆಯ್ತು ಅವನನ್ನು ಸಮಾಧಾನ, ಮಾಡ್ತಾ ನೋಡಿ ಇದೆಲ್ಲ ಆಗುತ್ತೆ ಬಿಡಿ ,ನನ್ನ ವಿಷಯದಲ್ಲಿ ಹಾಗೆಲ್ಲ ಅಂದ್ಕೋಬೇಡಿ ನನ್ನ lifeಲ್ಲಿ ಯಾರೇ frnd ಆದ್ರೂ, ಅವರಾಗೇ ಎದ್ದು ಹೋಗ್ಬೇಕೆ ವಿನಃ ನಾನಾಗಿ ಯಾರನ್ನು ಬಿಟ್ಟು ಹೋಗು ಅನ್ನಲ್ಲ. so dont worry ಒಳ್ಳೆ frnd ಆಗಿ ಚೆನ್ನಾಗಿರಿ ಅಂದೆ. ನಾನು phn ಎತ್ತಿಲ್ಲ ಅಂದ್ರೆ bsy ಇದ್ದೀನಿ ಅಂದ್ಕೋಳಿ ಅಷ್ಟೇ .ನಾನು free ಆದಾಕ್ಷಣ call ಮಾಡೇ ಮಾಡ್ತೀನಿ. ಒಂದು ವೇಳೆ ಯಾವತ್ತು ಮಾಡಿಲ್ಲ. ಅಂದ್ರೆ ಮರೆತು ಬಿಟ್ಟೆ ಅಂದ್ಕೋಬೇಡಿ, ಸತ್ತಹೋದೆ ಅಂತ ತಿಳಿದುಕೊಳ್ಳಿ ಯಾಕೆಂದರೆ ಯಾರನ್ನು ಮರೆಯುವ ಜಾಯಮಾನ ನನ್ನದಲ್ಲ ಅಂತ ಆವನಿಗೆ ಹೇಳ್ಬೇಕಿತ್ತು.

ಹೀಗೆ ದಿನಗಳು ಸಾಗುತ್ತಿದ್ದವು, free time ಇದ್ದಾಗ ಮಾತಾಡುತ್ತಿದ್ದೇ officeಲ್ಲಿ ಮಾತಾಡೋದಕ್ಕೆ ಆಗದೇ ಇದ್ದಾಗ video exchange ಮಾಡಿ ಮುಖ ಮುಖ ನೋಡಿ ನಗ್ತಿದ್ದೆವು video call ಮಾಡಿದಾಗ ನನ್ಗೆ ಮಾತಾಡೋಕೆ ಆಗಲ್ಲ ಇಲ್ಲಿ ಎಲ್ಲಾ ಇದ್ದಾರೆ ಅಂತ message ಮಾಡಿದ್ರೆ. ನಾನೆಲ್ಲಿ ಮಾತಾಡು ಅಂದೆ. call rcv ಮಾಡು ಅಂತ ಮಾತ್ರ ಹೇಳಿದ್ದು ಅಂತಾನೆ rcv ಮಾಡಿ ಸುಮ್ನೆ ಕೂತ್ರೆ, ಡುಮ್ಮಿ ತರ ಕಾಣ್ತಿಯಾ ಅಂತ ನಗಿಸ್ತಾನೆ ,ಜೊತೆ ಕೆಲಸ ಮಾಡುವವರು ಯಾಕೆ ಒಬ್ಬಳೇ ನಗ್ತೀಯಾ ಹುಚ್ಚ ಹಿಡಿದಿದ್ಯಾ ಅಂತ ಕೇಳಿದ್ರೆ ಆಚೆ ಕಡೆ ಅವನಿಗೆ ನಗುವೋ ನಗು. ಆ ನಗು ನೋಡೋದಿಕ್ಕೆ ತುಂಬಾ ಖುಷಿಯಾಗುತ್ತೆ, ಅದನ್ನ ನೋಡೊದಕ್ಕಾಗಿ ಕೆಲವೊಂದು ಸಲ ಸುಮ್ನೆ ನಾನೇ ಏನೇನೋ ಮಾಡ್ತೀನಿ. ಪಾರ್ವತಮ್ಮ ರಾಜಾಕುಮಾರ ತರ ದೊಡ್ಡ ಬಿಂಧಿ ಇಡೋದು ಕಣ್ಹೊಡಿಯೋದು ಮೂತಿ ಸೊಟ್ಟಗೆ ಮಾಡೋದು ಇದೆಲ್ಲಾ. ನನ್ನನ್ನು ಸತಾಯಿಸಿದಷ್ಟು ಖುಷಿಯೋ ಖುಷಿ ಎಲ್ಲರೂ ಬಂಗಾರ ಚಿನ್ನ ಅಂದ್ರೆ ನನ್ನನ್ನು ಮಾತ್ರ ನೀನು ನನ್ನ ಕಬ್ಬಿಣ ಅಂತಾನೇ. ಎಲ್ಲರೂ ಬೆಳಕಿನ ತರ ಅದ್ರೆ ನೀನೇ ಮಾತ್ರ ಕತ್ತೆ ಅಂತಾನೆ. ಏಯ್ ಕಣ್ಣ್ ಹೊಡೆಯೇ ಅಂತ ಪೀಡಿಸುತ್ತಾನೆ. ok ಅಂತ ಕಣ್ಣ್ ಹೊಡೆದರೆ ಏಯ್ ಏನೇ ಹುಡುಗನಿಗೇ ಯಾವುದಾದ್ರೂ ಹುಡ್ಗಿ ಕಣ್ಣ ಹೊಡೆಯೋದು ಎಲ್ಲದ್ರೂ ನೋಡಿದ್ದೀಯಾ. ಛೀ...ಅಂತಾನೆ.

ಒಂದಿನ ರಾತ್ರಿ phone ಮಾತಾಡ್ಕೊಂಡ ಒಬ್ರನ್ನೊಬ್ಬರು ಕಾಲೆಳೆದ್ಕೊಂಡಿರಬೇಕಾದ್ರೆ ok ನಿದ್ದೆ ಬರ್ತಿದೆ ಮಲಗ್ತೀನಿ ಅಂದೆ. ಇಲ್ಲಿಯೂ ಸ್ವಲ್ಪ ಜಾಗ ಇದೆ ಅಂದ. ಹಾಂ ತಲೆದಿಂಬಿಲ್ಲಅಂದ್ರೆ ನನ್ನ ಕೈಯಿ ಇದೆಯಲ್ವಾ ಸಾಕಾಗಲ್ವ ಎಂದು ಅವನ ಕೈಯನ್ನೂ ತೋರಿಸಿದ ಆದರೆ ಯಾಕೋ ಸ್ವಲ್ಪ್ ನನಗೆ ಮುಜುಗರ ಅನ್ನಿಸಿತು ನೇರವಾಗಿ ಆತನನ್ನೇ ನೋಡಿದೆ.ಆ ಮುಖದಲ್ಲಿ ಯಾವುದೇ ಕಲ್ಮಶ ಕಾಣಿಸಿಲ್ಲ ,ಯಾವುದೇ ಕೆಟ್ಟ ಭಾವನೆ ಇಲ್ಲ ಒಳಾರ್ಥಗಳಿಲ್ಲ.ಏನು ಹಾಗೆ ನೋಡೋದು ಬರೋದಾದ್ರೆ ಬಾ ಇಲ್ಲಾಂದ್ರೆ ಯಾವಳಾದ್ರೂ ಬರಬಹುದು ಅಂದ, ಬರತ್ತೀನಿ ಅಂದೆ ಆಮೇಲಿಂದ ರಾತ್ರಿ ಕೊನೆ ಮಾತು good night ಬೇಗ ಬಂದು ಬಿಡು ಇಲ್ಲಾಂದ್ರೆ ಬೇರೆಯವರನ್ನು ಕರಿತೀನಿ ಅಂತಾ ರೇಗಿಸ್ತಾನೆ ನಾನು ಕೊಂದುಬಿಡ್ತೀನಿ ಅಂತೀನಿ. ಆದ್ರೆ ಯಾವುದೇ ಅಪಾರ್ಥಗಳಿಲ್ಲದ ಮಾತುಗಳಿವು ಮತ್ತೆ ಮರುದಿನ ಅಯ್ಯೋ ಕೈ ನೋವು ಅಂತಾನೆ ಯಾಕೆ ಏನಾಯ್ತು ಅಂತ ಕೇಳಿದ್ರೆ ನಿನ್ನೆ ಹಂದಿ ತರ ಕೈ ಮೇಲೆ ಮಲಗಿದ್ಯಯಲ್ಲ ಅದಕ್ಕೆ ಕೈ ನೋವು ಅಂತ ನಗ್ತಾನೆ ,ಓ ಸಾಕು ಸಾಕು ಅಂತ ನಾನೂ ನಗ್ತಿನಿ. ಕೆಲಸ ಮುಗಿಸಿ ಬರೋವಾಗ ಸ್ವಲ್ಪ late ಆಯ್ತು ಅಂದ್ರೆ sorry ಕಣೆ ಸ್ವಲ್ಪ್ late ಆಯ್ತು ಊಟ ಮಾಡಿದ್ಯಾ ಅಂತ ಮಾತು ಶುರುಮಾಡ್ತಾನೆ. ಮೈಲಿ ಮೈಲಿ ದೂರ ಇದ್ರೂ ಕೂಡಾ ಇಲ್ಲೇ ಎಲ್ಲೋ ಹತ್ರದಲ್ಲಿ ಇದ್ದೀವೇನೋ ಅನ್ನಿಸತ್ತೆ, ನಾವು ಯಾವತ್ತೂ ಸಿಗೋದಿಕ್ಕೆ ಆಗೋದೇ ಇಲ್ವಾ ಅಂತ ಕೇಳಿದ್ರೆ worry ಮಾಡ್ಕೋಬೇಡ ಒಂದಿನ ನಾನೇ ಅಲ್ಲಿಗೆ ನಿನ್ನ meet ಮಾಡೋದಿಕೆ ಬರ್ತೀನಿ, ಆವಾಗ meet ಆಗೋಕೆ ನಿನ್ನ ಬರತ್ತೀಯಾ ತಾನೇ ಎಂದು ಮರು ಪ್ರಶ್ನೆ ಹಾಕ್ತಾನೆ. ಸುಮ್ಮೆ ಹೂಂ ಅಂತೀನಿ. ಆವಾಗ ಇಷ್ಟು ದಿನ ನನಗೆ ಸತಾಯಿಸ್ತಿದ್ದೆಯಲ್ಲ ನೀನು ಬಂದು ನನ್ನ ಮುಂದೆ ನಿಲ್ಲು ಇದೆ ನಿನಗೆ ಮಾರಿಹಬ್ಬ ಅಂತ ನಗ್ತೀನಿ, ಏನೇ ಮಾಡ್ತಿಯಾ ಅಂತ ಪ್ರಶ್ನೆ ಹಾಕಿದವನಿಗೆ ಮೂಗು ಕಚ್ತಿನಿ ಅಂತೀನಿ ಹೋಗೆ ಆಗಲ್ಲ ಬಿಡು ಅಂತಾನೆ challenge ಮಾಡ್ತಾನೆ ನಗ್ತಾ ನಗಿಸ್ತಾ ಒಬ್ಬರೊನ್ನೊಬ್ಬರು ರೇಗಿಸ್ತಾ ಇರುವ ನಮಗೆ ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ತಿಂಗಳೊಳಗೆ ಆತ್ಮೀಯನಾಗಿ ಬಿಟ್ಟಿದ್ದ.

ಆದರೆ ಇವೆಲ್ಲವೂ ಕನಸೋ ಎಂಬಂತೆ ಭಾಸವಾಗಿ ಬಿಟ್ಟಿದೆ. ಯಾಕೆಂದರೆ ಈ ನಗು ,ಈ ಜಗಳ, ಈ ಮುನಿಸು ಇವ್ಯಾವೂ ಈಗ ಇಲ್ಲ ಎಲ್ಲಾ ಮುಗಿದು ಹೋದ ಕಥೆ ಕೆಲವೊಂದು ಸಲ ನಾನೇನದ್ದು ನೋಡಿದೆಲ್ಲಾ ಕನಸೇನೋ ಅನ್ನುವಷ್ಟು ಬದಲಾಗಿ ಬಿಟ್ಟ ನನ್ನ ಗೆಳೆಯಾ .ದಿನದ 24 ಗಂಟೆ ಒಬ್ಬರನ್ನೊಬ್ಬರು ನಗಿಸುತ್ತಿದ್ದವರು ಈಗ ಒಂದೇ ಒಂದ್ ಮಾತು ಆಡ್ತಿಲ್ಲ. ಅಂದ್ರೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಆಲ್ವಾ. ಆದ್ರೆ ಇದು ನಿಜ ನಾವು ಮಾತಾಡ್ತಿಲ್ಲ , ಒಂದೇ ಒಂದು ಫೋನ್ ಕಾಲ್ , ವಿಡಿಯೋ ಕಾಲ್ ಮೆಸೇಜ್ ಆಗಲಿ ಏನು ಇಲ್ಲ ,ನಗುವು ಇಲ್ಲ ಎಲ್ಲಾ ಶೂನ್ಯ ಏನಾಯ್ತು ಯಾಕಾಯ್ತು ಏನು ತಿಳಿಯುದಿಲ್ಲ .ಯಾವುದೇ ಒಂದೊಳ್ಳೆ ಕಾರಣವಿಲ್ಲ . ಹಿಂದಿನದೆಲ್ಲಾ ಯೋಚಿಸಿದಾಗ ಕೇವಲ ನಿಟ್ಟುಸಿರೊಂದನ್ನು ಬಿಟ್ಟರೆ ಬೇರೇನೂ ಇಲ್ಲ. ಒಂದು ತಿಂಗಳಿಂದ ಬರೀ ಶೂನ್ಯ ಯಾಕೆ ?ಏನಾಯ್ತು ಅಂದರೆ ಅವನಲ್ಲಿ ಉತ್ತರವಿಲ್ಲ. ನಿನ್ನ ಜೊತೆ ಇಡೀ ದಿನ ಮಾತಾಡಿ ಕೂರೋದಿಕ್ಕೆ ಆಗುತ್ತಾ ಬೇರೆ ಕೆಲಸ ಇಲ್ವ ಅಂತಾನೆ. ಓಕೆ ದಿನಕ್ಕೆ ಒಮ್ಮೆಯಾದ್ರು call ಮಾಡಿ ಮಾತಾಡಬಹುದಲ್ಲ ಅಂದ್ರೆ busy ಇದ್ದೀನಿ free ಆದಾಗ ಮಾಡ್ತೀನಿ ಅಂತಾನೆ .ಆದ್ರೆ ಈ free ಅನ್ನೋದು ಯಾವತ್ತೂ ಆಗೋದೇ ಇಲ್ಲ. ಹಾಗೋ ಹೀಗೋ ಕಾಡಿಬೇಡಿ ಮಾತಾಡಿಸಿದ್ರೆ ಸ್ವಲ್ಪ್ ಮಾತಾಡ್ತಾನೆ. ಯಾಕೆ? ಈ ತರ ಇದ್ದೀಯಾ ಮಾತಾಡಲ್ವಾ ಅಂದ್ರೆ, ಮಾತಾಡ್ತಿದ್ದೀನಲ್ಲ ಅಂತಾನೆ ಮೊದಲಿನ ನನ್ನ ಗೆಳೆಯನ ತರ ಇಲ್ಲ ಅಂದ್ರೆ, ಆ ತರ ಇರೋದಿಕ್ಕೆ ಆಗಲ್ಲ ಅಂತಾನೆ. ಯಾಕೆ ಅಂದ್ರೆ ನನಗೆ tension ಇದೆ. ಮನೆಕಡೆ ಗಮನ ಕೊಡ್ಬೇಕು ಅಂತಾನೆ. ನಾನು ಪದೇ ಪದೇ ಮೆಸೇಜ್ ಹಾಕ್ತಿನಿ ಆಳ್ತಿನಿ voice ಮೆಸೇಜ್ ಹಾಕ್ತಿನಿ. ಆದರೆ ಇದ್ಯಾವುದಕ್ಕೂ ಅವನಿಂದ ಪ್ರತಿಕಿಯ್ರೆ ಇಲ್ಲ. ಅವನ್ ಈ ವರ್ತನೆ ಸತ್ತು ಹೋಗುವಷ್ಟು ಬೇಸರ ತರಿಸಿತ್ತು . ಕೆಲವೊಮ್ಮೆ ಮುಖಕ್ಕೆ ಹೊಡೆದಷ್ಟು ಬೈತಾನೆ .ಕಾಲ್ ಮೆಸೇಜ್ ಮಾಡ್ಬೇಡ ಅಂದ್ರೂ ಮಾಡತ್ತಿಯಲ್ಲ ,ನಿನಗೆ ಹೇಳಿದ್ರೆ ಅರ್ಥ ಆಗಲ್ವ ,ಎಷ್ಟ ಹೇಳಿದ್ರೂ ಗೊತ್ತಾಗಲ್ವಾ ಎಷ್ಟೇ ಕಿರಿಕಿರಿ ಮಾಡ್ತೀಯಾ ,ಅಂತಾ ರೇಗ್ತಾನೆ. ತುಂಬಾ ಸಲ ಅವನನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದೆ .ನನ್ನನ್ನು ಬಿಟ್ಟು ಹೋಗಬೇಡ ಬೇಕಾದ್ರೆ ನಿನ್ನ ಕಾಲ ಹಿಡಿತೀನಿ ಅಂದೆ ಅದಕ್ಕವನು ಕೇಳಿದ ಒಂದೇ ಒಂದು ಪ್ರಶ್ನೆ. ಇಷ್ಟೆಲ್ಲ ಯಾಕೆ? ಹಚ್ಕೊಂಡೆ ! ನಾನು ನಿನಗೆ ಮೊದಲೇ ಹೇಳಿದ್ನಲ್ಲ ನನ್ನ ಹಚ್ಕೋಬೇಡ ಅಂತ ಅಂದ. ಹೌದು ಅವನಂದಿದ್ದು ನಿಜಾನೆ ಒಂದಿನ ಮಾತಾಡ್ತಾ ಹೇಳಿದ್ದ, ನೋಡು ಒಂದು ಮಾತ ಹೇಳತ್ತಿನಿ.ಯಾವತ್ತೂ ಯಾರನ್ನೂ ತುಂಬಾ ಹಚ್ಕೊಳ್ಳೋದಿಕ್ಕೆ ಹೋಗ್ಬೇಡಾ ನನ್ನನ್ನು ಕೂಡಾ ,ನಾನು ತಮಾಶೆಯಾಗಿ ನೀನು ನನ್ನನ್ನು ಹಚ್ಕೊಂಡಿಲ್ವಾ ಅಂದೆ, ಹೇಳಿದ್ದು ಕೇಳಿಸ್ತಾ ಅಂದ ಅದು ಸರಿ ನೀನು ಹಚ್ಕೊಂಡಿಲ್ವಾ ಅಂತ ಮತ್ತೆ ಪ್ರಶ್ನಿಸಿದೆ. ಹಾಂ ಹಚ್ಕೊಂಡಿದೀನಿ ಅದಕ್ಕೆ ಈಗ ಕಷ್ಟ ಆಗ್ತಿರೋದು so ಯಾರನ್ನು ಹಚ್ಕೋಬಾರದು ಯಾಕೆಂದ್ರೆ ಯಾವತ್ತಾದ್ರೂ ಅವರೀಲ್ನಂದ್ರೆ ತುಂಬಾ ನೋವಾಗುತ್ತೆ ಬದುಕೋದೆ ಬೇಡ ಅನ್ಸುತ್ತೆ .ಅದಕ್ಕೆ ಹಾಗಾಗ್ಬಾದ್ರೂ ಅಂದ್ರೆ ಲೈಫ್ ಲ್ಲಿ ಯಾವತ್ತೂ ಯಾರನ್ನು ಹಚ್ಕೋಬಾರದು ok ನಾ ಅಂದಿದ್ದ ,ಆವತ್ತು ಅವನ ಮಾತಿಗೆ ಓಕೆ, ನಾನು ಯಾರನ್ನು ಹಚ್ಕೋಳಲ್ಲ ಅಂದಿದೆ. ಆದ್ರೆ ನಾವು ಯಾರನ್ನು ಹಚ್ಕೊಳದೆ ಬದುಕೋಕೆ ಸಾಧ್ಯನಾ ಎಷ್ಟು ಸುಲಭವಾಗಿ ನಮ್ಮ ಮನಸ್ಸು ನಮ್ಮವರನ್ನು ಹಚ್ಕೊಂಡು ಬಿಡುತ್ತೆ. ನಾಳೆ ಆಗೋ ನೋವಿಗಾಗಿ ಇವತ್ತೇ ಯಾರಾದ್ರೂ ಅಳ್ತಾ ಕೂರೋಕೆ ಆಗತ್ತಾ, ಹಚ್ಕೊಳ್ಬೇಡಿ ಅಂತ ಹೇಳೋದಕ್ಕಿಂತ ನನ್ನನ್ನು ಹಚ್ಕೊಂಡವರನ್ನು ನಾನ್ಯಾವತ್ತೂ ನೋಯಿಸಲ್ಲ .ಅಂತಹ ನಿರ್ಧಾರ ಮಾಡಿದ್ರೆ ಯಾರಿಗೂ ನೋವಾಗೋ ಮಾತೇ ಇಲ್ಲ ಅನ್ಸುತ್ತೆ .ನನ್ನ ಉತ್ತರಕ್ಕೂ ಕಾಯದೆ ಮತ್ತೊಂದು ಪ್ರಶ್ನೆ ಕೇಳಿದ, ಅಷ್ಟಕ್ಕೂ ನಾಗ್ಬೇಕು ನಿನಗೆ? ಅವತ್ತಿನವರೆಗೆ ನಾನು ಯೋಚನೆ ಮಾಡದೇ ಇರೋ ಪ್ರಶ್ನೆ ಅಂದ್ರೆ ಅವನೇನಾಗ್ಬೇಕು ನನಗೆ ಅಂತ ಈ ಒಂದು ಪ್ರಶ್ನೆಗೆ ಇವತ್ತಿನವರೆಗೆ ಉತ್ತರ ಹುಡುಕುತ್ತಿದ್ದೀನಿ. ಇನ್ನೂ ಸಿಕ್ಕಿಲ್ಲ.

ಯಾವುದೇ ಉದ್ದೇಶ ಇಟ್ಟುಕೊಂಡು ಅವನ ಗೆಳೆತನ ಮಾಡಿಲ್ಲ. ನಾನು simply friend ಆದ . ಮಾಡಿದ ಒಂದೇ ಒಂದು ತಪ್ಪು ಅಂದ್ರೆ ಅವನನ್ನು ತುಂಬಾ ಹಚ್ಕೊಂಡೆ. ಇಷ್ಟೆಲ್ಲಾ ಬೈದ ಮೇಲೂ ಅವನಿಗೆ call ಮಾಡೋದು ಮೆಸೇಜ್ ಮಾಡೋದು ಬಿಡಲಿಲ್ಲ ಇದರ ನಡುವೆ ನನ್ನ ಆರೋಗ್ಯನು ಸ್ವಲ್ಪ್ ಹದಗೆಟ್ಟಿತು. ಆವಾಗಲು ಮೆಸೇಜ್ ಮಾಡಿ ತಿಳಿಸಿದೆ ನೋಡು ನೀನು ಹೀಗೆ ಇದ್ರೆ ನಾನು ಸಾಯ್ತಿನಿ ಅಂದೆ .ಆವಾಗಲೂ ಆತ ಪ್ರತಿಕ್ರಿಯಿಸಲಿಲ್ಲ ಅವನ ಮೌನ ನನಗೆ ಹಿಂಸೆ ಅನಿಸಿತ್ತು ಎಲ್ಲಾದ್ರೂ ಹೋಗಿ ಸತ್ತೂ ಬಿಡ್ಬೇಕು ಅನಿಸಿತ್ತು, ಆದರೆ ಮನೆಯಲ್ಲಿ ನನ್ನನ್ನು ನಂಬಿರೋ ಜೀವಗಳಿವೆ ಅವರನ್ಯಾರು ನೋಡ್ಕೊಳೋರು ಅಂತ ಸುಮ್ಮನಾದೆ, ಮತ್ತೆ ಮತ್ತೆ phone ಮಾಡಿದೆ ಬಾರದೆ ಇರುವ ಕರೆಗಾಗಿ ದಿನ ರಾತ್ರಿ ಅಂತ ಕಾದು ಕುಳಿತು ಇವತ್ತಾದ್ರು ಒಂದು call ಬರಬಹುದು ಅಂತ ಕಾಯ್ತಾ ಇದ್ದೆ, ಬಾರದೇ ಇದ್ದಾಗ ಹತಾಶಳಾದೆ ಮತ್ತೆ ಅವನಿಗೆ ಕಾಲ್ ಮಾಡಿದೆ plz ಹೀಗೆಲ್ಲ ಮಾಡ್ಬೇಡ ತುಂಬಾ ಕಷ್ಟ ಆಗತ್ತೆ. ನೀನು ಹೇಳಿದ ಹಾಗೆ ಕೇಳ್ತೀನಿ plz ಅಂದೆ. call ಮಾಡಿದಾಗಲೆಲ್ಲ ಇವತ್ತಾದ್ರು ನಮ್ಮ ನಡುವಿನ ಅಂತರ ಕಮ್ಮಿ ಮಾಡಪ್ಪ ದೇವರೇ ಅಂತ ಬೇಡ್ಕೊಳ್ತಿದೆ. ಅವನ ಸ್ವರ ಕೇಳಿದಾಕ್ಷಣ ಅಳು ಉಕ್ಕಿ ಬರೋದು, ಕೇವಲ ಉಪಚಾರದ ಮಾತುಗಳು ಅವುಗಳು ಕೂಡಾ ಅತೀ ಕಷ್ಟದಿಂದ ಅವನಲ್ಲಿ ಮಾತೇ ಮುಗಿದಿವೆ ಏನೋ ಅನ್ನೋ ಭಾವ. ನನ್ನಲ್ಲಿ ಮಾತಾಡೋ ಮೊದಲೇ ಕಣ್ಣೀರು ನನ್ನಲ್ಲಿ ಮೊದಲೆಲ್ಲಾ ಮಾತಾಡ್ತಿದ್ದವನು ಇವನೇನಾ ಅನ್ನೋ ತರ ಆಗುತ್ತೆ ಯಾಕೆ? ನನ್ನ ತಪ್ಪೇನು? ಯಾವ ವಿಷ ಘಳಿಗೆಯಲ್ಲಿ ಇದೆಲ್ಲ ಆಯ್ತೋ ಕಾಣಿ ಆದ್ರೆ ಇನ್ಯಾವತ್ತೂ call ಮಾಡ್ಬಾದ್ರೂ ಅನ್ನೊ ನನ್ನ ಗಟ್ಟಿ ನಿರ್ಧಾರ ಯಾವತ್ತೂ ಫಲಿಸುವುದೇ ಇಲ್ಲ ಯಾವತ್ತು ಚೆನ್ನಾಗಿರ್ಲಿ ಅಂತ ಹಾರೈಸೋ ನಾನೇ ಅವನ ಮನಸ್ಸಿನ ಕಿರಿಕಿರಿಗೆ ಕಾರಣವಾಗುತ್ತಿದ್ದೇನ್ನೋ ಏನೋ.

ಆವತ್ತು ಅವನು ಹೇಳಿದ ಒಂದು ಮಾತು ನನ್ನ ಎಲ್ಲಾ ನೋವಿಗಿಂತ ಜಾಸ್ತಿಯಾಗಿತ್ತು, plz plz ಅಂತ ಅಳುತ್ತಿದ್ದ ನನ್ನ ಭಾವನೆಗಳಿಗೆ ಒಂದು ದೊಡ್ಡ ಪೆಟ್ಟು. ಕೆಲವೊಂದು ಸಲ ನನ್ನನ್ನು ಕೊಂದರೂ ನೋವಾಗುದಿಲ್ಲ. ಆದ್ರೆ ಅವನ ಕೆಲವೊಂದು ಮಾತುಗಳು ತುಂಬಾ ನೋಯಿಸುತ್ತವೆ. ಅವ್ನು ಇಷ್ಟು ದಿನ ಏನೆಲ್ಲ ಅಂದ್ರೂ ಏನೋ ಸಿಟ್ಟಲ್ಲಿ ಹೇಳ್ತಿದ್ದಾನೆ ಅಂದ್ಕೊಂಡು ಸಮ್ಮನಾಗಿದ್ದೆ. ಆದ್ರೆ ಈಗ ಹೇಳಿದ ಮಾತು ನನ್ನ ಉಸಿರಿರೋ ತನಕ ಮರೆಯಲ್ಲ ಅನ್ಸುತ್ತೆ ಅವನು ಅಯ್ಯೋ ನೀನು ಇಷ್ಟ ಸತಾಯಿಸ್ತೀಯಾ ಅಂತ ಗೊತ್ತಿದ್ರೆ ನಿನ್ನ friendship ಮಾಡ್ತಿರಲಿಲ್ಲ, ನಿನಗೆ ನಂಬರ್ ಕೊಟ್ಟಿದ್ದು ನನ್ನ ದೊಡ್ಡ ತಪ್ಪು ಎಷ್ಟೋ friends ಇದ್ದಾರೆ. ಆದ್ರೆ ಈ ರೀತಿ ನನಗೆ ತೊಂದರೆ ಕೊಡೋರು ಯಾರು ಇಲ್ಲ. ನೀನು ಈ ರೀತಿ ಇರಿಟೇಟ್ ಮಾಡ್ತಿಯಾ ಅಂತ ಗೊತ್ತಿದ್ರೆ ನಿನ್ನ ಸುದ್ದಿಗೆ ಬರ್ತಿರಿರಲಿಲ್ಲ ಏಯ್ ನೋಡು ನನಗೆ ಇದೆಲ್ಲ ಇಷ್ಟ ಆಗಲ್ಲ ನಾನು ಚೆನ್ನಾಗಿಬೇಕು ಅಂದ್ರೆ ,ನಾನ್ ಹೇಳಿದಾಗೆ ಕೇಳು ನಾನಾಗಿ phone ಮಾಡೋತನಕ ನನ್ನನ್ನು ನನ್ನಷ್ಟಕ್ಕೆ ಬಿಟ್ಟಬಿಡು. ಅದನ್ನು ಕೇಳಿದ ನನಗೆ ನನ್ನ ಕಿವಿಯನ್ನೇ ನಂಬೋಕಾಗಿಲ್ಲ .ನನಗೆ number ಕೊಟ್ಟಿದ್ದೆ ತಪ್ಪು ಅನ್ನುವಷ್ಟು ದೊಡ್ಡ ತಪ್ಪು ನಾನೇನು ಮಾಡಿದೆ ಅಂತ ಇವತ್ತಿಗೂ ನನ್ಗೆ ಗೊತ್ತಾಗಿಲ್ಲ. ಆದರೂ ಒಂದು ಕೊನೆ ಪ್ರಯತ್ನ ಎಂಬಂತೆ ಪ್ಲೀಸ್ ಹಾಗೇಳೋದಿಕ್ಕೆ ನಾನೇನ್ಮಾಡಿದೆ? ಹೀಗೆಲ್ಲ ಹಿಂಸೆ ಕೊಡ್ಬೇಡ. ನಾನು ನಿನಗೆ ಇರಿಟೇಟ್ ಮಾಡಬೇಕಂತ ಹೀಗೆಲ್ಲ ಮಾಡ್ತಿಲ್ಲ ನೀನೊಂದು ಸಲ ನನ್ನ ಮೊದಲಿನ ಗೆಳೆಯನಾಗು ಇನ್ಯಾವತ್ತೂ ನೋಯಿಸಲ್ಲ. ಯಾವತ್ತಿಗೂ ನೀನೇ ಹೇಳಿದ್ದನ್ನು ಕೇಳ್ತೀನಿ ಪ್ಲೀಸ್ ಒಂದೇ ಸಲ ಸಮಾಧಾನವಾಗು ಅಷ್ಟೆ. ಊಹುಂ ಯಾವುದೇ ಫಲವಿಲ್ಲ ನನ್ನೆಲ್ಲ ನೋವು ಕಣ್ಣೀರಾಗಿ ಹರಿಯುತ್ತಿದೆ ವಿನಹ ಆತನಿಗೆ ಒಂದಿಷ್ಟು ಅರ್ಥವಾಗಲೇ ಇಲ್ಲ . ಫೋನ್ ಇಟ್ಟ ಎಷ್ಟೋ ಹೊತ್ತು ನಾನು ನಾನಾಗಿರಲಿಲ್ಲ.

ಎಲ್ಲಾ ಯಾವತ್ತೋ ಮುಗಿದು ಹೋಗಿತ್ತು ನಾನು ಮಾತ್ರ ಒಡೆದು ಹೋದ ನಂಬಿಕೆಯ ಚೂರುಗಳನ್ನು ಮತ್ತೆ ಜೋಡಿಸುವಲ್ಲಿ ಮಗ್ನಳಾಗಿದ್ದೆ .ಕೊನೆಗೂ ಆತ ನನಗೊಂದು ಪ್ರಶ್ನೆಯಾಗಿಯೇ ಉಳಿದ ಇವತ್ತಿಗೂ ತಿಂಗಳು ಕಳೆದ ಮೇಲೂ ನೋವು ಯಾವುದೋ ಮೂಲೆಯಲ್ಲಿ ಕುಳಿತು ಬೊಬ್ಬಿಡುತ್ತಿದೆ. ಪ್ರೀತಿ ನಂಬಿಕೆ ಗೆಳೆತನ ಅಂತ ಕಟ್ಟಿದ ಮುಷ್ಠಿ ತೆರೆದು ನೋಡಿದರೆ ಕಾಣುವುದು ಬರೀ ಭ್ರಮೆ. ನನ್ನನ್ನು ಮರೆತು ಬಿಟ್ಟೆ ಅಂತ ಅಂದ್ಕೊಂಡೆ ಅಂತ ಒಂದಿನ ಸಪ್ಪೆ ಮೊರೆ ಹಾಕಿದವನ್ನು ನನ್ನನ್ನೇ ಮರೆತು ಬಿಟ್ಟ ಹೇಳದೆ ಕೇಳದೆ ಬಂದವನು ಉಪಚಾರಕ್ಕಾದ್ರೂ ಒಂದು ಮಾತು ಹೇಳಿ ಹೋಗಬಹುದಿತ್ತು. ಆದ್ರೆ ಇಲ್ಲೇ ಉಳಿದವಳ ಮನಸ್ಸಲ್ಲಿ ತನ್ನ ಹೆಜ್ಜೆ ಗುರುತು ಅಳಿಸಲು ಮರೆತು ಹೋದ. ಏನಾದ್ರೂ ನನ್ನ ಜೊತೆ ಚೆನ್ನಾಗೇ ಇರು ಅಂದವನನ್ನು ಉಳಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ತಿಸಿದೆ. ಆದ್ರೆ ಇರೋ ಮನಸ್ಸು ಅವನಿಗೆ ಇಲ್ಲ ಅಂದ್ಮೇಲೆ ನನ್ನ ಪ್ರಯತ್ನಕ್ಕೆ ಫಲ ಎಲ್ಲಿ? ಬಿಟ್ಟೋಗ್ಬೇಡಾ ಅಂದವನತ್ರ ನನ್ನನ್ನು ಬಿಟ್ಟು ಹೋಗ್ಬೇಡಾ ಅಂದ ಮಾತು ಮಾತಾಗೇ ಉಳಿಯಿತು. ಅವನ್ಯಾವತ್ತು ಹಿಂತಿರುಗಿ ಬರಲಾರ ಅಂತ ಗೊತ್ತಿದ್ರೂ, ಮನಸ್ಸು ಮತ್ತೆ ಅವನ್ನ ನೆನಪಿಸುತ್ತೆ. ನೆನಪಾದಾಗಲೆಲ್ಲ ನಗಿಸುತ್ತಿದ್ದವನು ಈಗ ಬೇಡ ಬೇಡ ಅಂದರು ಕಣ್ಣಂಚು ತುಂಬುತ್ತೆ ಯಾಕಾದ್ರೂ ನಂಬರ್ ಕೊಟ್ಟ ಅಂದಾಗಿಂದ ನಾನ್ಯಾವತ್ತೂ ಅವನನ್ನು ಪೀಡಿಸಲಿಕ್ಕೆ ಹೋಗಿಲ್ಲ. ನಾನಿಲ್ಲದೆ ತುಂಬಾ ಖುಷಿಯಾಗಿರೋ ಅವನ್ನ ಯಾಕೆ ಪೀಡಿಸ್ಲಿ. ಅವನು ಖುಷಿಯಾಗಿದ್ರೆ ಅಷ್ಟು ಸಾಕು. ನನ್ನ ಅಗಲುವಿಕೆ ಅವನ ಸಂತೋಷ ಅಂತಾದರೆ ಅದೇ ಆಗ್ಲಿ. ಎಲ್ಲಾದ್ರೂ ಚೆನ್ನಾಗಿರ್ಲಿ ಎಂದು ಹಾರೈಸಿ ಬಿಟ್ಟು ಬಿಟ್ಟೆ. ಆವತ್ತಿನಿಂದ ಇವತ್ತಿನವರೆಗೆ ಒಂದೇ ಒಂದು ಕಾಲ್ ಆಗ್ಲಿ ಮೆಸೇಜ್ ಆಗ್ಲಿ ಮಾಡೋದಿಕ್ಕೆ ಹೋಗಿಲ್ಲ ಎಲ್ಲಾ ಮುಗಿದ ಮೇಲೆ ಕೊನೆಯದಾಗಿ ಒಂದು ಮೆಸೇಜ್ ಹಾಕಿದ್ದೆ "ನೋಡು ನನಗೆ ನನ್ನ ಮೊದಲಿನ ಗೆಳೆಯ ಬೇಕು ವಿನಃ ಇವನನಲ್ಲ ಈಗ ಇರುವವನನ್ನು ನಾನ್ಯಾವತ್ತೂ ಕನಸಲ್ಲೂ ಫ್ರೆಂಡ್ ಅಂತ ಅಂದ್ಕೊಳಿಲ್ಲ.ನನ್ನ ಗೆಳೆಯ ಹೀಗೆಲ್ಲ ನನ್ನನ್ನು ಪೀಡಿಸಿಲ್ಲ ಇಷ್ಟೊಂದು ಕಲ್ಲು ಹೃದಯದ ಅವನಿಗಿಲ್ಲ. ಅವನದು ಏನಿದ್ರೂ ಮೃದು ಸ್ವಭಾವ ಮೊದಲಿನ ಹಾಗೇ ಅಂದ್ರೆ ಹೇಗೆ ಎಂದು ಕೇಳಿದ್ದೆಯಲ್ಲ ಅದನ್ನೂ ಹೇಳ್ತೇನೆ ಬಿಡು. ಹಾಗಂದ್ರೆ ಈ ತರ ಮುಖ ಗಂಟಿಕ್ಕಿ ಮಾತಾಡೋ ಮನುಷ್ಯ ಅಲ್ಲ. ಯಾವತ್ತೂ ನಗಿಸುವ ನನ್ನೆಲ್ಲ ಬೇಸರವನ್ನು ತಕ್ಷಣವೇ ಬಗೆಹರಿಸುವ ಗೆಳೆಯಾ. ಯಾವುದೇ ಘಳಿಗೆಲಿ ನಾನು cl ಮಾಡಿದಾಕ್ಷಣ ನನ್ನ cl rcv ಮಾಡುವವನು ನನ್ನ ಗೆಳೆಯ. ನನ್ನ ಸ್ವರದಲ್ಲಿ ಸ್ವಲ್ಪ್ ಬದಲಾವಣೆ ಆದರೂ ಯಾಕೋ ಸಪ್ಪಗಿದ್ದಿಯಾ ಅನ್ನೋ ಗೆಳೆಯಾ. ಅರೆ ಇವನಿಗೆ ಹೇಗೆ ಗೊತ್ತಾಯಿತು ಅಂತ ಯೋಚಿಸ್ತಿರಬೇಕಾದರೆ .ನನ್ನ ನಗುವನ್ನು ಹುಡುಕಿ ತರೋ ಗೆಳೆಯಾ. ಬೆಳಿಗ್ಗೆ ಬೇಗ ಎಬ್ಬಿಸು 6.30 ಮೊದ್ಲು,ಇಲ್ಲಾಂದ್ರೆ ನೋಡು ಅಂತ ಅಧಿಕಾರ ಚಲಾಯಿಸೋನು ನನ್ನ ಗೆಳೆಯಾ. ದಿನಾ ರಾತ್ರಿ 10.00 ಗಂಟೆಯೊಳಗೆ ನಂಗೆ cl ಮಾಡೋ ಗೆಳೆಯಾ.. ರೂಮ್ ಗೆ ಬರೋದು ಒಂದತ್ತು ನಿಮಿಷ ಲೇಟ್ ಆದ್ರೂ sorry ಕಣೆ ಸ್ವಲ್ಪ ಹೊತ್ತಾಯಿತು. ಊಟ ಮಾಡಿದ್ಯಾ ಅಂತ ಮರುಗೋ ಗೆಳೆಯಾ. ನಂಗೆಲ್ಲೋ ಸ್ವಲ್ಪ ತಾಗಿದಾಕ್ಷಣ ತನಗೇ ತಾಗಿತೇನೋ ಅನ್ನೋಷ್ಟು ನೊಂದು ಕೊಳ್ಳೋನು ನನ್ನ ಗೆಳೆಯಾ. ಏನಾದ್ರು ಮಾಡ್ಕೊ ಆದ್ರೆ ಹಣೆಗೊಂದು ಬಿಂದಿ ಇಡೋದನ್ನ ಮಾತ್ರ ತಪ್ಪಿಸಬೇಡ ಅಂತ ಕೇಳ್ಕೊಳ್ಳೋ ಗೆಳೆಯಾ. ನನ್ನ ಡುಮ್ಮಿ ನನ್ನ ಕಬ್ಬಿಣ ಅಂತ ಸತಾಯಿಸೋ ಗೆಳೆಯಾ.ಮಾತಾಡ್ತಾ ಮಾತಾಡ್ತಾ ಅಬ್ಬಾ ಎಷ್ಟು ಮಾತಾಡ್ತಿಯೇ ಅಂತ ರೇಗಿಸೋ ಗೆಳೆಯಾ.. ಇನ್ನೂ ಎಷ್ಟಂತ ಹೇಳಲಿ? ಯಾಕೆ ನಿಂಗೆ ಒಂದೂ ನೆನಪಿಲ್ವಾ? Ok ನನ್ನಿಂದ ದೂರಾಗಿ ಖುಷಿಯಾಗಿರ್ತಿಯ ಅಂತಾದರೆ ಅದುನೂ ಸರಿ. ಆದ್ರೆ ಒಂದ್ಮಾತು ಯಾವತ್ತಾದ್ರೂ ನೆನಪಾದ್ರೆ ನನ್ನ ಆ ಗೆಳೆಯನಾಗಿ ಬಾ. ಅವನಿಗೋಸ್ಕರ ಉಸಿರು ಇರೋ ತನಕ ಕಾಯಿತಿನಿ. ಆದ್ರೆ ಈಗ ಇರುವವನು ಅವನಲ್ಲ. ಇವನ ಪಾಲಿಗೆ ನಾನು ಸತ್ಹೋದೆ ಅಂತ ಅಂದ್ಕೊ. ಇನ್ನು ನಿನ್ನನ್ನ disturb ಮಾಡಲ್ಲ.. ಕೊನೆಯದಾಗಿ ನನ್ನ ಹಳೇ ಗೆಳೆಯನನ್ನು ನಂನ್ಗೆ ವಾಪಸ್ ತಂದು ಕೊಡು pls..

ಇವತ್ತಿಗೂ ಅವನು ಅದನ್ನು ಓದಿದ್ದಾನೋ ಇಲ್ಲೋ ಗೊತ್ತಿಲ್ಲ ಆದ್ರೆ ನನ್ನ ಕರ್ತವ್ಯ ನಾನ್ ಮಾಡಿದೆ ಅಷ್ಟೇ ಇವತ್ತಿಗೂ ತುಂಬಾನೇ ನೋವಾಗುತ್ತೆ ನಾನೇನೇ ಅಂದ್ಕೊಡಿದ್ದೆ ಏನಾಗಿ ಹೋಯ್ತು ಮನುಷ್ಯ ಯಾವತ್ತಿದ್ದರೂ ಅರ್ಥ ಮಾಡಿಕೊಳ್ಳೋದಕ್ಕೆ ಆಗೋದೇ ಇಲ್ವೇನ್ನೋ ಹೆಣ್ಣಿನ ಮನಸ್ಸಲೇನಿದೆ ಅಂತ ಓದೋಕೆ ಕಷ್ಟ ಅಂತಾರೆ. ಆದರೆ ಗಂಡು ಕೂಡಾ ಇದಕ್ಕೆ ಹೊರತಾಗಿಲ್ಲ. ಯಾವ ಮನುಷ್ಯನನ್ನು ಮಗುತರ ನಿಷ್ಕಲ್ಮಶ ಅಂತ ತಿಳಿದುಕೊಂಡಿದ್ನೋ ಅದೇ ಮನುಷ್ಯ ಅತ್ಯಂತ ಕಠಿಣ ರೀತಿಯಲ್ಲಿ ನನ್ನನ್ನು ನೋವಿಸಿದ ಯಾರ ನಗುವಿಗಾಗಿ ನಾನು ಏನೆಲ್ಲ ಆಟ ಆಡ್ತಿದ್ನೋ ಅದೇ ಮನುಷ್ಯ ನನ್ನ ನಗುವ ಕಸಿದುಕೊಂಡು ಬಿಟ್ಟ. ಯಾರು ನನ್ನ ಬಿಟ್ಟುಹೋಗ್ಬೇಡ ಅಂದುಕೊಂಡಿದ್ನೋ ಅವನೇ ನನ್ನಿಂದ ದೂರವಾಗಿಬಿಟ್ಟ ನಾನು ಒಂದೇ ಒಂದು ಸಲ call ಎತ್ತಲಿಲ್ಲ ಅಂತ ಯಾವ ವ್ಯಕ್ತಿ ತೀರಾ ಬೇಸರಗೊಳ್ಳುತ್ತಿದ್ದವನ್ನು ಇವತ್ತು ನನಗೆ ಯಾಕೆ ನಂಬರ್ ಕೊಟ್ಟೆ ಅಂತ ಅನ್ನಿಸ್ತಿದೆ ಅನ್ನೊ ಮಾತು ಅಂದುಬಿಟ್ಟ , ನನಗೆ ಸ್ವಲ್ಪ ಏಟಾದಾಗ ಯಾವ ಮನಸ್ಸು ತಲ್ಲಣಿಸಿ ಹೋಗುತ್ತಿತ್ತೋ ಅದೇ ಮನಸ್ಸು ಇವತ್ತು ನಾನು ಸಾಯೋ ಸ್ಥಿತಿ ಬಂದರೂ ನನಗಾಗಿ ಅವನ ಹೃದಯ ಮಿಡಿಯುತ್ತಿಲ್ಲ, ಯಾರಿಗಾಗಿ ನಿಸ್ವಾರ್ಥ ತುಂಬಿದ ಪ್ರೀತಿನ ಕಾಳಜಿನ ಮಮತೆಯನ್ನು ಧಾರೆ ಎರೆದೆನೋ ಅವನು ಅದನ್ನೆಲ್ಲಾ ತುಳಿದು ನಡೆದೇ ಬಿಟ್ಟ. ಯಾರತ್ರ ಹೇಳೋದು? ಯಾರಿದ್ದಾರೆ? ಕೇಳೋದಿಕ್ಕೆ ಹೇಳೋದಿಕ್ಕೆ ಯಾರಾದ್ರೂ ಸಿಕ್ಕಿದ್ರೂ ಅವರಿಗದು ಅರ್ಥವಾಗುತ್ತಿಲ್ಲ. ಪ್ರೀತಿ ಕಾಳಜಿ ತೋರಿಸೋದಕ್ಕೆ ಯಾವುದಾದರೂ ಒಂದು ಹೆಸರಿನ ಸಂಬಂಧ ಬೇಕಾ ? ನನ್ನೆಲ್ಲಾ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿದಿದೆ. ಇವತ್ತಿಗೂ ನನ್ನಿಂದಾದ ತಪ್ಪಾದರೂ ಏನು ಎಂದು ಕೇಳೋದಿಕ್ಕೆ ಸಾಧ್ಯವಾದರೂ ಉತ್ತರ ಮಾತ್ರ ಶೂನ್ಯ.

ಆತ ಅಂದೂ ಪೀಡಿಸುತ್ತಿದ್ದ ಇವತ್ತೂ ಪೀಡಿಸುತ್ತಾನೆ ವ್ಯತ್ಯಾಸವಿಷ್ಟೇ ಅಂದು ಪೀಡಿಸಿ ನಗಿಸ್ತಿದ್ದ ಇವತ್ತು ಪೀಡಿಸಿ ಅಳಸ್ತಾನೆ. ಬೆಳಿಗ್ಗೆ ನಾನು ಎದ್ದೆಳೋ ಮೊದ್ಲೆ ಅವನು ನನ್ನ ಕಣ್ಣೊಳಗೆ ಬರ್ತನೆ. ನನ್ನನ್ನು ನಾನು ಎಷ್ಟೇ bsy ಮಾಡಿಕೊಂಡರೂ ಕಣ್ಣ ಮುಂದೆ ಅದೇ ನಗು ಮುಖ ಕಾಣುತ್ತೆ. ರಾತ್ರಿ ಗಡಿಯಾರ 10.00 ಗಂಟೆ ತೋರಿಸಿದ ಕ್ಷಣ ಬೇಡವೆಂದರೂ ಕೈ mbl ನ್ನು ಹಿಡಿಯುತ್ತದೆ. ಇವತ್ತಾದರೂ ಆತ ಮರಳಬಹುದು ಅಂತ ರಾತ್ರಿ 11.00 ಗಂಟೆ ತನಕ ಕಣ್ಣು ಆತನ ದಾರಿ ಕಾಯುತ್ತೆ.ಎಲ್ಲಾ ಮುಗಿದ ಮೇಲೂ ಆತನನ್ನು ಯಾಕೆ ಕಾಯ್ತಿಯೇ ಅಂತ ಮನಸ್ಸು ಕೇಳಿದ್ರೆ. ಕಣ್ಣು ಮೂಕವಾಗಿ ಕಣ್ಣೀರು ಸುರಿಸುತ್ತದೆ. PLS COME BACK ಅಂತ ದಿನದ ಪ್ರತೀ ಕ್ಷಣ ಮನಸ್ಸು ತುಡಿಯುತ್ತದೆ. ನಿದ್ದೆ ಬರೋ ಕೊನೆ ಕ್ಷಣದಲ್ಲೂ ಅವನಿರುತ್ತಾನೆ. ಎದ್ದೆಳೋ ಕ್ಷಣದಲ್ಲೂ ಅವನಿರುತ್ತಾನೆ. ಕೊನೆಗೆ ನಂಗೆ ನಿದ್ದೆ ಬಂದರೂ ,ಆತ ನನ್ನೊಳಗೆ ಮಲಗೋದೇ ಇಲ್ಲ ಅನ್ಸುತ್ತೆ.. ಕೈ ಬಿಡಿಸಿಕೊಂಡು ಹೊರಟು ಹೋದ ಅವನ ನೆನಪುಗಳನ್ನೆಲ್ಲಾ ಗಂಟು ಕಟ್ಟಿ ಅಟ್ಟಕ್ಕೇರಿಸಿದರೂ ಅವುಗಳು ಅಲ್ಲಿಂದಲೂ ನನ್ನ ನೋಡಿ ನಗ್ತಿವೆ . ಆನ್ಸೋತೆ ಇಷ್ಟೊಂದು ಪ್ರೀತಿ ತೋರಿಸಿದ ನಾನು ಅವನಿಗ್ ಯಾವತ್ತಾದ್ರೂ ನೆನಪಾಗಬಹುದೇ? ಒಂದು ಜೀವ ನನಗೋಸ್ಕರ ಮಿಡಿಯುತ್ತಿದೆ, ಅಂತ ಯಾವತ್ತಾದ್ರೂ ಅನ್ನಿಸ್ಬಹುದಾ? ಮೊದಲೆಲ್ಲಾಏನೋ ಸಣ್ಣ ಪುಟ್ಟ ಜಗಳವಾದಾಗ i am sorry, miss u ಅಂತಿದ್ದ ಯಾಕೆ? ಹೀಗಾಡ್ತಿದ್ದೀಯಾ ಅಂತ ಸಾವಿರ ಬಾರಿ ಕೇಳಿದರೂ ಉತ್ತರ ಸಿಗದ ಪ್ರಶ್ನೆಗೆ ಏನನ್ನಲಿ? ಏನೋ ಸಿಟ್ಟಲ್ಲಿ ಹಾಗೆಲ್ಲ ಆಡಿದೆ ಕಣೆ ,ಬಿಟ್ಟು ಬಿಡೆ ಅಂತ ಯಾವತ್ತಾದ್ರು ಆತ ಬೇಡಿಕೊಳ್ಳಬಹುದಾ? ಇನ್ಯಾವತ್ತೂ ನಿನ್ನ ನೋಯಿಸಲ್ಲ ಕಣೆ ಡುಮ್ಮಿ ಅಂತ ನನ್ನ ನಗಿಸಬಹುದಾ. ಹಳೆಯ ಗೆಳೆಯ ಮತ್ತೆ ಯಾವತ್ತಾದ್ರೂ ಒಂದಿನ ಮರಳಿ ಬರಬಹುದಾ?

ಒಂದೇ ಸಮನೆ ಆರ್ಭಟಿಸಿದ ಗುಡುಗಿಗೆ ನನ್ನೆಲ್ಲ ಆಲೋಚನೆಗಳು ಚೆಲ್ಲಾಪಿಲ್ಲಿಯಾದವು ಎಷ್ಟೋತ್ತಿನಿಂದ ಹೀಗೆ ಕುಳಿತಿದ್ನೋ ಏನೋ.ಭೂಮಿಗೆ ಕತ್ತಲಾವರಿಸಲು ಪ್ರಾರಂಭಿಸಿತ್ತು ಒಳಹೋಗಿ ಲೈಟ್ on ಮಾಡಿದಾಗ ನನ್ನ ಜೀವನದಲ್ಲಿ ಒಂದಿನ ಬೆಳಕು ಬರಬಹುದೇನೋ ಅಂತ ಅನಿಸಿತು.

ಕಂಡಾಗ ನಿನ್ನ ಮೊದಲ ಸಲ
ಹೊಸದೆನಿಸಿದರೂ ಮಾತು ಬಲು ಅಪರೂಪ!
ಇದ್ದ ಹೂದೋಟದ ಮುಗ್ಧ ಗುಲಾಬಿ
ಆ ನಿನ್ನ ನಿಶ್ಕಲ್ಮಶ ನಗು, ಮಾತು
ಎಲ್ಲ ಎಲ್ಲವೂ ಮಾತಿಗೆ ನಿಲುಕದ್ದು!!
ಇಟ್ಟ ಹೆಸರಿನ ಜೀವಂತ ಕನ್ನಡಿ ನೀನು ರೇಷ್ಮಾ
ರೇಷ್ಮೆಗೂ ಸರಿಸಾಟಿಯಲ್ಲದ ಬೆಲೆ ಬಾಳುವ ಕುಸುಮ!!
ದಿನ ಕಳೆದಂತೆ ಹತ್ತಿರವಾಗಿದ್ದೆ ನೀನು
ಎಲ್ಲಾ ಮನ ಬಿಚ್ಚಿ ಮಾತಾಡುವಷ್ಟು
ಮರೆಮಾಚಲು ಹಿಂದೇಟು ಹಾಕುವಷ್ಟು!!
ಎಲ್ಲರ ಅಚ್ಚುಮೆಚ್ಚು ನೀನು!
ಕರೆದೊಯ್ಯಿತು ಕವಿತೆ ತುಂಬಿ ನನ್ನ ತನು!!
ನಿನ್ನ ಮುಗ್ಧ ನಗು, ಆ ಅಪರಂಜಿ ಮನಸು
ಆ ಅಕ್ಕರೆಯ ಸಕ್ಕರೆಯ ನುಡಿ
ಅದೇ ನಿನ್ನ ಬದುಕಿನ ಮುನ್ನುಡಿ!
ಇರುವಾಗ ಏಕೆ ಭಯ ಮುಖವೆಂಬ ಮನದ ಕನ್ನಡಿ!!!
ಕಂಡಾಗ ನೆನಪಾಗುವ ಪುಣ್ಯಕೋಟಿ ನೀನು!
ನಗುತಿರು ನೀನು ಸದಾ ಇನ್ನೂನು!!!
ಯಾಕೋ ಏನೋ ಅಕ್ಷರಗಳು ಸಂಕೋಚಪಡುತಿರಲು
ಮುಂದೆ ಬರೆಯಲು ನನ್ನ ಮನ ಪರಿತಪಿಸುತಿರಲು!!!
ಹೇಳ ಬಯಸಿದ್ದು ಬರೆಯಯಲಿಚ್ಚಿಸಿದ್ದು
ಎಲ್ಲವೂ ನನ್ನ ಕೈಗಳಿಗೆ ನಿಲುಕದ್ದು!!!
ಹಾರೈಸುವುದೊಂದೆ ಈ ಮನವು
ನೀನೊಂದು ನಗುವ ಪುಟ್ಟ ಕನಸಿನ ಹೂವು!
ಬಾಡದಿರಲಿ ,ಕಾಡದಿರಲಿ ನಿನಗಾವುದೇ ನೋವು!!!
ಮರೆಯದಿರು ನೀ ನಗುವ ರೀತಿ
ಚಿರಾಯುವಾಗಲಿ ಎಂದಿಗೂ
ನಾ ನಿನ್ನ ಸ್ನೇಹಲೋಕದ ಅತಿಥಿ!!!!
ಎಂದಿಗೂ ನಿನ್ನವಳು,

ಅನುಭವ ಕಥನ:- ನೀಮಾ ಲೊಬೋf!D_v@lue=97009,article,field_image

Comments