ನಿರುತ್ತರ

ನಿರುತ್ತರ

ಕವನ

ನಿರುತ್ತರ

ನನ್ನಲ್ಲಿ ಭಾವನೆಗಳಿಲ್ಲ

ಎಂದು ಅರ್ಥವಲ್ಲ

ನಿಮ್ಮ ಹಾಗೆ ನನಗೆ

ನಟಿಸಲು ಬರುವುದಿಲ್ಲ ಅಷ್ಟೇ...

 

ನನಗೆ ಸಂತಸವಾಗುವುದಿಲ್ಲ

ಎಂದು ಅರ್ಥವಲ್ಲ

ನಿಮ್ಮ ಹಾಗೆ ನನಗೆ

ನಗುವುದು ತಿಳಿದಿಲ್ಲ ಅಷ್ಟೇ...

 

ನನ್ನಲ್ಲಿ ಪ್ರೀತಿಯ ಪಸೆ

ಇಲ್ಲ ಎಂದಲ್ಲ

ನಿಮಗೆ ಬೇಕಾದ ಹಾಗೆ ನನಗೆ

ವ್ಯಕ್ತಪಡಿಸುವುದು ಗೊತ್ತಿಲ್ಲ ಅಷ್ಟೇ...

 

ನನಗೆ ನೋವಾಗುವುದಿಲ್ಲ

ಎಂದು‌ ಅರ್ಥವಲ್ಲ

ನಿಮ್ಮ ಹಾಗೆ ನನಗೆ

ಅಳುವುದಕ್ಕೆ ಬರುವುದಿಲ್ಲ ಅಷ್ಟೇ...

 

ನನಗೆ ಅರ್ಥವಾಗುವುದಿಲ್ಲ

ಎಂದಲ್ಲ ಆದರೆ

ಕೂದಲು ಸೀಳುವ ನಿಮ್ಮ

ತರ್ಕದ ಮಾತುಗಳಿಗೆ ನನ್ನಲ್ಲಿ

ಉತ್ತರ ಇಲ್ಲ ಅಷ್ಟೇ...

                                    :-  ಕಾಂತರಾಜು ಕನಕಪುರ