ನಿರ್ಧಾರಸೂಚಿ !

ನಿರ್ಧಾರಸೂಚಿ !

ದೈನಂದಿನ ಜೀವನದಲ್ಲಿ ಕೆಲವು ಸಣ್ಣ ಘಟನೆಗಳು ನಮ್ಮ ಮುಂದಿನ ದಾರಿಯನ್ನು ಆಯ್ದುಕೊಳ್ಳಲು ಸಹಾಯ ಮಾಡುತ್ತವೆ .ದೇವರು ಕೆಲವು ಸಲ ಉದ್ದೇಶಪೂರ್ವಕವಾಗಿ ಘಟನೆಗಳ ಮೂಲಕ ಸಂದೇಶಗಳನ್ನು ನಮಗೆ ರವಾನಿಸುತ್ತಾನೋ…?!!

ನನ್ನ ಪ್ರಕಾರ ಪ್ರತಿ ಘಟನೆಗೂ ನಂಟು ಹೆಣೆಯುತ್ತಾ ಕೂರುವುದು ತಪ್ಪು. ಒಮ್ಮೊಮ್ಮೆ ಜೀವನದಲ್ಲಿ ಕೆಲವು ನಿರ್ಧಾರಗಳನ್ನು ಮಾಡುವುದು ಸುಲಭವಲ್ಲ. ನಮ್ಮವರ ಅಭಿಪ್ರಾಯ, ಸನ್ನಿವೇಶ, ತಕ್ಷಣದ ಭವಿಷ್ಯ ಇನ್ನಿತರ ಅಂಶಗಳು 'ನಿರ್ಧಾರ' ತೆಗೆದುಕೊಳ್ಳಲು ನಮ್ಮನ್ನು ಶಕ್ತಗೊಳಿಸುತ್ತದೆ - ಕೆಲವೊಮ್ಮೆ ನಿರ್ಧರಿಸುವುದು ಕಷ್ಟ, ಹಗಲು-ರಾತ್ರಿ ಅಲೋಚನೆಗಳೆಲ್ಲಾ ಆ ನಿರ್ಧಾರದ ಹಾದಿಯಲ್ಲೇ ತಿರುಗುತ್ತಿರುತ್ತದೆ, - ಕೆಲವು ವಿಷಯಗಳೇ ಹಾಗೆ ನಿರ್ಧರಿಸುವುದು ಕಠಿಣ…!

ಇಂತಹ ಪರಿಸ್ಥಿತಿಗಳಲ್ಲಿ  ದಣಿದ ಮನಸ್ಸು ಅದೇ ಯೋಚನೆಯ ಹಾದಿಗಳಲ್ಲಿ ತಿರುಗಿ ತಿರುಗಿ ಸೋತಿರುವಾಗಲೇ - ಭಗವಂತನ ಸಹಾಯವಾಣಿ ಮಾರ್ಗಸೂಚಿಯಾಗುತ್ತದೆ. ಸಣ್ಣ ಪುಟ್ಟ ಘಟನೆಯ ಮೂಲಕ ಬಂದಿರುತ್ತದೆ ಆ ಮಾರ್ಗಸೂಚನೆ…!

ಇದು ನನ್ನ ಸ್ವಂತ ಆನುಭವದ ಮೇಲೆ ಬರೆದದ್ದು,

ಯಾರಿಗಾದರು ಇದೇ ರೀತಿಯ ಅನುಭವ ಆಗಿದ್ದಲ್ಲಿ ತಿಳಿಸಿ....