ನಿರ್ಲಿಪ್ತ

ನಿರ್ಲಿಪ್ತ

ಕವನ

ಒಂದು ತೊಟ್ಟು ಮಸಿ

ಬರೆಯಲೊಂದು ಕಾಗದ

ಭಾವನೆಗಳಿಗೆ ಭಾಷೆಯ ಬಂಧ

ಕಾಗದದ ಚತುರ್ಗಡಿಯಲ್ಲಿ ನಲಿಯಲು

ಬರೆದವನಿಗಾದರೋ

ಮನದಲ್ಲಿ ಮಮಕಾರ

ಆದರೀ ಕರ್ಮಯೋಗಿಗೆ

ತನ್ನೊಡಲ ಕುಡಿಯಲ್ಲಿ

ಯಾಕೀ ನಿರಾಸಕ್ತಿ?