ನಿಲ್ಲುವುದು ಹೃದಯ ಆ ನಿನ್ನ ಕಣ್ಣಲ್ಲಿ ಕಣ್ಣೀರ ಕಂಡು
ಕವನ
ಸುಂದರ ಅತಿ ಸುಂದರ ನಿನ್ನ ಆ ನಯನಗಳು..
ಮುಚ್ಚಬೇಡ ನೀ ಆ ನಯನವ ರೆಪ್ಪೆಯೆಂಬ ಪರದೆಯಿಂದ..
ನಿನ್ನ ನಯನದ ಅಂದದ ಅರಿವು ನಿನಗೇ ಇಲ್ಲ ಗೆಳತಿ..
ನಯನ ಮನೋಹರವಾಗಿದೆ ಆ ನಿನ್ನ ನಯನಗಳು..
ಮರೆತರೂ ಮರೆಯಲಾಗದ ಆ ನಿನ್ನ ನಯನಗಳು
ಬೇಡವೆಂದರೂ ಬಿಡದೆ ಕಾಡುತಿವೆ ಹಗಲಿರುಳು
ಅದೇನು ಮಾಯೆಯಿರುವುದೋ ಆ ನಿನ್ನ ಕಂಗಳಲಿ..
ಸೋತು ಮರುಳಾದೆನು ಆ ನಿನ್ನ ಕಂಗಳ ಕಾಂತಿಗೆ
ಕಣ್ಣಿನ ಮಾತುಗಳು ನಿನ್ನ ಮಾತಿಗಿಂತಲೂ ಸೊಗಸು
ಸಾವಿರ ಸಾವಿರ ಭಾವಗಳ ಸೂಸುವ ಆ ನಿನ್ನ ನಯನಗಳು..
ನಿಲ್ಲುವವು ಮಾತುಗಳು ಆ ನಿನ್ನ ನಯನಗಳ ಕಂಡು..
ನಿಲ್ಲುವುದು ಹೃದಯ ಆ ನಿನ್ನ ಕಣ್ಣಲ್ಲಿ ಕಣ್ಣೀರ ಕಂಡು...
Comments
ಉ: ನಿಲ್ಲುವುದು ಹೃದಯ ಆ ನಿನ್ನ ಕಣ್ಣಲ್ಲಿ ಕಣ್ಣೀರ ಕಂಡು
In reply to ಉ: ನಿಲ್ಲುವುದು ಹೃದಯ ಆ ನಿನ್ನ ಕಣ್ಣಲ್ಲಿ ಕಣ್ಣೀರ ಕಂಡು by gopaljsr
ಉ: ನಿಲ್ಲುವುದು ಹೃದಯ ಆ ನಿನ್ನ ಕಣ್ಣಲ್ಲಿ ಕಣ್ಣೀರ ಕಂಡು