ನಿವೃತಿ ಜೀವನದ ನೋವು Part I

ನಿವೃತಿ ಜೀವನದ ನೋವು Part I

ಬರಹ

ನನ್ನ ಗೆಳತಿ ತಂದೆ ಆಟೋ ಓಡಿಸಿ ಜೀವನ ಸಾಗಿಸ್ತಾ ಇದ್ರು. ಆಟೋ ಜೀವನದ ಬಂಡವಾಳ, ಅದ್ರಲ್ಲಿ ಸಂಪಾದಿಸಿದ ಸಂಭಾವನೆ ಇಂದ ಇಬ್ಬರು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟು, ದೊಡ್ಡವರನ್ನಾಗಿ ಮಾಡಿದರೆ. ಇದ್ದಕ್ಕಿಂದ ಹಾಗೆ 2 ವರ್ಷಗಳ ಹಿಂದೆ ಅವರಿಗೆ ಹಾರ್ಟ್ ಅಟ್ಯಾಕ್ ಆಯ್ತು. ಓಪನ್ ಹಾರ್ಟ್ ಸರ್ಜರೀ ಮಾಡಿಸ್‌ಬೇಕಾಗಿ ಬಂತು. ನನ್ನ ಗೆಳತಿ ಕಛೇರಿನಲ್ಲಿ ಇನ್ಶುರೆನ್ಸ್ ಸೌಲಬ್ಯ ಇರೋದ್ರಿಂದ ಆಪರೇಶನ್ ಕರ್ಚ್ ಸಂಪೂರ್ಣವಾಗಿ ಇನ್ಶುರೆನ್ಸ್ ಕಂಪನೀ ವಹಿಸ್‌ಕೊಳ್ತು. ಆದ್ರೆ, ಡಾಕ್ಟರ್ ಒಂದು ಶಾಕ್ ನ್ಯೂಸ್ ಹೇಳ್ತಾರೆ, ಆಪರೇಶನ್ ಆಗಿರೋದ್ರಿಂದ ಅವರು ಇನ್ನೂ ಮುಂದೆ ಆಟೋ ಓದಿಸ್ಬಾರ್ದೂ ಅಂತ.. ಆದ್ರೆ ಅಂಕಲ್ ಗೆ ಆಟೋ ಬಿಟ್ರೆ ಬೇರೆ ಕೆಲ್ಸಾ ಗೊತಿಲ್ಲ, ಅವರಿಗೆ ಈಗಾಗ್ಲೇ 50 ವರ್ಷ, ಈಗ ಯಾವ್ ಕಂಪನೀ ತಾನೆ ಅವರಿಗೆ ಉದ್ಯೋಗ ಕೊಡತ್ತೆ ಹೇಳಿ. ಸ್ವಲ್ಪ ದಿನ ಮನೆನಲ್ಲಿ ವಿಶ್ರಾಂತಿ ತೊಗೊಂದು ಮುಂದೆ ಯೋಚ್ನೆ ಮಾಡೋಣ ಅಂತ ಅಂದುಕೊಳ್ಳೋ ಅಷ್ಟರಲ್ಲಿ, ಒಂದು ದಿನ ಅವರ 2ನೇ ಮಗಳ ಅಂದರೆ ನನ್ನ ಗೆಳತಿಯ ತಂಗಿ ಬಾಗ್ ನಲ್ಲಿ ಒಂದು ಮಂಗಳಸೂತ್ರ ಸಿಗತ್ತೆ, ಮನೆಯವರೆಲ್ಲ ಗಾಬರಿ ಆಗಿ ತಂಗಿನ ಕೂರ್ಸಿ ಕೇಳಿದ್ರೆ, ಅವಳು ತನಗೆ ಮದುವೆ ಆಗಿರೋ ವಿಷಯಾನಾ ತಿಳಿಸ್ಥಳೆ

ಮುಂದುವರೆಯುವುದು....