ನಿಶೆ
ಕವನ
ನನ್ನನ್ನು ನಿದ್ರಾದೇವಿಯ
ಮಡಿಲಿಗೆ ಹಾಕಲು
ಬಂದಳು ಎಂದಿನಂತೆ
ನಿಶೆ ತಾನು...
ನಾ ಮಲಗಲಿಲ್ಲ,
ಕಣ್ಮುಚ್ಚಿದಳು ನಶೆಯೇರಿದಂತೆ
ನಿಶೆ ತಾನು...
ಏಕೆ ಹೀಗೆಂದರುಹಿದಾಗ
ಮರುನುಡಿಯಿತು ಎನ್ನ ಹೃದಯ
ಮೆಲುಕಿಸು ಇಂದು ನಿನ್ನ ನೆನಪುಗಳನ್ನು
ನಿತ್ಯವೂ ಬರುವಳು ತಪ್ಪದೆ
ನಿಶೆ ತಾನು...
ನನ್ನನ್ನು ನಿದ್ರಾದೇವಿಯ
ಮಡಿಲಿಗೆ ಹಾಕಲು
ಬಂದಳು ಎಂದಿನಂತೆ
ಸುಂದರ ನಿಶೆ ..
ನಾ ಮಲಗಲಿಲ್ಲ,
ಕಣ್ಮುಚ್ಚಿದಳು ನಿಶೆ
ಏರಿದಂತೆ ನಶೆ..
ಏಕೆ ಹೀಗೆಂದರುಹಿದಾಗ
ಮರುನುಡಿಯಿತು ಎನ್ನ ಹೃದಯ
ಮೆಲುಕಿಸು ಇಂದು ನಿನ್ನ ನೆನಪುಗಳನ್ನು
ನಿತ್ಯವೂ ಬರುವಳು ತಪ್ಪದೆ
ನಿಶೆ, ಈ ದಿಶೆ...