ನಿಸರ್ಗದಾಟ
ಕವನ
ಮುಂಜಾವಿನ ಮಂಜದು ಮುಸುಕಿರಲು
ರಂಗಿನ ಓಕುಳಿಯದು ಹರಡಿರಲು...
ಬಾನು- ಭುವಿಯ ಸಂಗಮದಲ್ಲಿ
ನಲಿದವು ಮರಗಳು ಹರುಷದಲಿ.!
ಕಣ್ಮನ ತಣಿಸುವ ಸುಂದರ ಚಿತ್ರ
ಸೃಷ್ಟಿಯ ಸೊಬಗಿನ ಬಹು ಪಾತ್ರ
ವರ್ಣ ವೈಭವವು ಕಣ್ಮನದಲ್ಲಿ...
ಮುಗಿಲಿಗೆ ಹಾಸಿದ ಚಪ್ಪರವಲ್ಲಿ. !
ಮುಗಿಲನು ಮುಟ್ಟುವ ಬಯಕೆಯಲಿ
ಮರಗಳು ಚಾಚಿತು ಕೊಂಬೆಗಳನಲ್ಲಿ
ಬಾನೆತ್ತರಕೆ ಹಸಿರಿನ ತೋರಣವು...
ಬಾನಂಗಳದ ತುಂಬಾ ರಂಗಿನಾಟವು.!
ಚುಮು,ಚುಮು,ಚುಮು ಚಳಿಯಲ್ಲಿ
ಮಸುಕಲಿ ಮರಗಳು ಮರೆಯಲ್ಲಿ....
ನಿಸರ್ಗದ ಮನೋಹರ ಚಿತ್ತಾರವು
ಕವಿ ಮನಸಿಗದು ರಸದೌತಣವು. !!
ಬಾನು- ಭುವಿಯ ನಿತ್ಯದ ಕಾಯಕವು
ಅನುದಿನ ನಡೆಯುವ ರೂಪಕವು...
ಹಗಲಿಗಿರುವ ಹಲವು ಬಣ್ಣ ಬಣ್ಣವು
ಇರುಳಿಗಲ್ಲಿಹ ಒಂದೇ ಕರಿ ವರ್ಣವು.!
-ವೀಣಾ ಕೃಷ್ಣಮೂರ್ತಿ ದಾವಣಗೆರೆ.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್