ನಿಸರ್ಗದ ಸಮತೆ
ಕವನ
ಸಮತೆ ಅಡಗಿದೆ ಹೂವ ದಳಗಳ ಅಳತೆಯಲಿ
ನಿಸರ್ಗದ ಸಹಜತೆಯ ನೈಜ ಸೊಬಗಲಿ
ರವಿ ಚಾಚುವ ತನ್ನ ಕಿರಣಗಳ ಸೊಬಗ
ಬಡವನಿಗೂ ಚಾಚುವ ಬೆಳಕ ಬೆಡಗ.
ಜಲ ತಣಿಸುವುದು ದಣಿದವರ ದಾಹ
ಸಲಹುವುದೆಲ್ಲರ ಕಾಣು ಬೇಧವಿರದ ನೇಹ
ನೆರಳಾಗುವ ಮರವು ಅಸಮತೆ ಅರಿತಿಲ್ಲ
ಮೇಲು-ಕೀಳೆನ್ನುವ ಭಾವವ ತೋರಿಲ್ಲ.
ಮಣ್ಣು ಉತ್ತಿದವನ ಕುಲವ ಕೇಳಿಲ್ಲ
ಬೆವರ ಹನಿಗೆ ಫಲವ ನೀಡದೇ ಉಳಿದಿಲ್ಲ
ಕೊನೆಗೆ ಸಾವೂ ಯಾರನ್ನೂ ಬಿಟ್ಟಿಲ್ಲ
ರಾಜನೆಂದು ದೂರ ಸರಿದು ನಿಂತಿಲ್ಲ.
-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
