ನೀಗಿಸಬೇಕು ನಮ್ಮಲ್ಲಿರುವ ’ಅಹಂ’...

ನೀಗಿಸಬೇಕು ನಮ್ಮಲ್ಲಿರುವ ’ಅಹಂ’...

ಬರಹ

ಇದನ್ನು ಓದುವುದಕ್ಕೆ ನಿಮ್ಮ ಅತ್ಯಮೂಲ್ಯವಾದ ಸಮಯದಲ್ಲಿ ಎರಡೇ ಎರಡು ನಿಮಿಷದ ಕಾಲವನ್ನು ದಯವಿಟ್ಟು ವ್ಯಯ ಮಾಡಿ...

ಈ ಸಂಕ್ಷಿಪ್ತ ಕತೆಯನ್ನು ಓದಿ ಹಾಗೇ ಸುಮ್ಮನೆ ಒಂದು ಊಹೆ ಮಾಡಿ...

ಇಂಥವರನ್ನು ನೀವೂ ಸಹ ನಿಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ನೋಡಿರುತ್ತೀರಿ...

ಇಂಥವರು ಎಲ್ಲಾ ಕಡೆಯೂ ಇರುತ್ತಾರೆ. ಇಂಥವರದ್ದು ’ನ’ಕಾರಾತ್ಮಕ ಮನೋಭಾವ ಹಾಗೂ ಇಂಥವರಿಗೆ ಸಿಕ್ಕಾಪಟ್ಟೆ ’ಅಹಂ’ ಭಾವ ಇರುತ್ತದೆ. ಒಟ್ಟಾರೆ ಹೇಳಬೇಕಂದರೆ, (ದುರ್‍)’ಅಹಂಕಾರ’ ತುಂಬಿದ ಅಹಂ ಭಾವ.
ಈ ಸ್ವಭಾವದಿಂದ ಇವರು ತಮ್ಮ ಉಜ್ವಲ ಭವಿಷ್ಯವನ್ನು ಸರಿಯಾಗಿ ರೂಪಿಸಿಕೊಳ್ಳುವುದಿಲ್ಲ. :-(

ಈಗ ಈ ಕತೆ(ಥೆ)ಯನ್ನು ಓದಿ...

ಒಮ್ಮೆ, ಬಹಳಷ್ಟು ಮಂದಿ ಒಂದು ವಿಮಾನದಲ್ಲಿ ಪ್ರಯಾಣವನ್ನು ಮಾಡುತ್ತಿರುತ್ತಾರೆ. ಅದರಲ್ಲಿ ಒಬ್ಬನಿಗೆ ’ಅಹಂ’ ಭಾವ, ’ನ’ಕಾರಾತ್ಮಕ ಮನೋಭಾವ, ಜೊತೆಗೆ ’ಕುಟಿಲ’ ಸ್ವಭಾವ ಇರುತ್ತದೆ. ಅವನಿಗೆ ತನ್ನ ಜ್ಞಾನ ಮತ್ತು ತನ್ನ ನಡುವಳಿಕೆಯ ಬಗ್ಗೆ ಅಪಾರವಾದ (ದುರ್‍)ಅಭಿಮಾನ. ಇತರರ ಕಾಲೆಳೆಯುವುದು, ಇತರರನ್ನು ಹೀಯಾಳಿಸುವುದು, ಆಕ್ಷೇಪಿಸುವುದು ಅವನ ಮಾತ್ತೊಂದು ದುರಭ್ಯಾಸವಾಗಿರುತ್ತದೆ.

ಆಕಸ್ಮಿಕವಾಗಿ, ತಾಂತ್ರಿಕ ದೋಷದಿಂದ ವಿಮಾನಕ್ಕೆ ಬೆಂಕಿ ಹತ್ತಿಕೊಳ್ಳುತ್ತದೆ. ಎಲ್ಲಾ ಪ್ರಯಾಣಿಕರು ಭಯಭೀತರಾಗುತ್ತಾರೆ. ಕೆಲವು ಪ್ರಯಾಣಿಕರು ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಹಾರಿ ತಮ್ಮ ಜೀವವನ್ನು ಉಳಿಸಿಕೊಳ್ಳುತ್ತಾರೆ. ಆ ಕುಟಿಲ ಬುದ್ಧಿಯ ವ್ಯಕ್ತಿ ಉಳಿದವರನ್ನು ವಿಮಾನದಿಂದ ತಳ್ಳಿಬಿಡುತ್ತಾನೆ. ಕೊನೆಯಲ್ಲಿ ವಿಮಾನ ಚಾಲಕರೂ ಕೂಡ ತಮ್ಮ ಜೀವ ಉಳಿಸಿಕೊಳ್ಳಲು ವಿಮಾನದಿಂದ ಜಿಗಿಯುತ್ತಾರೆ. ಆ ಕುಟಿಲ ಬುದ್ಧಿಯ ವ್ಯಕ್ತಿ ಮಾತ್ರ ತನ್ನ ಪ್ಯಾರಾಚೂಟ್ ಬಳಿಯಲ್ಲಿದರೂ ಸಹ ವಿಮಾನದಿಂದ ಜಿಗಿಯದೇ ವಿಮಾನದಲ್ಲೇ ಕುಳಿತಿರುತ್ತಾನೆ.

ಏಕೆ ಎಂದು ಊಹಿಸಿ???

ನಿಮ್ಮ ಉತ್ತರ ಸರಿಯಾಗಿದ್ದಲ್ಲಿ ನೀವೂ ಸಹ ಇಂಥವರಲ್ಲಿ ಒಬ್ಬರು ಎಂದರ್ಥ.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
ಆ ವ್ಯಕ್ತಿಯು ಈ ರೀತಿ ಯೋಚಿಸುತ್ತಾನೆ: ’ನಾನೊಬ್ಬನೇ ವಿಮಾನದಲ್ಲಿ ಭೂಮಿಯನ್ನು ತಲುಪಿಬಿಟ್ಟರೆ ಎಷ್ಟು ಚೆನ್ನಾಗಿರುತ್ತದೆ. ಪೈಲಟ್ ಗಳ ಸಹಾಯವಿಲ್ಲದೆಯೇ ನಾನು ಭೂಮಿಗೆ ಬಂದು ತಲುಪಿದೆಯೆಂದು ನಾನು ಎಲ್ಲರಿಗೆ ಜಂಭದಿಂದ ಹೇಳಬಹುದು. ಜನ ನನ್ನನ್ನು ನೋಡುವ ರೀತಿಯೇ ಬೇರೆ ಆಗುತ್ತದೆ. ನನಗೆ ಆಗ ಹೆಚ್ಚು ಗೌರವ ಸಿಗುತ್ತದೆ.’

ಇಲ್ಲಿ ಆ ವ್ಯಕ್ತಿಯು ತನ್ನ ಜೀವದ ಬಗ್ಗೆ ಯೋಚಿಸದೇ, ತನ್ನ so called ’ಅಹಂ’ ಗೆಲ್ಲಬೇಕು ಅಂತ ಸುಮ್ಮನೆ ತನ್ನ ಪ್ರಾಣವನ್ನು ಕೊಡುತ್ತಾನೆ.

’ಅಹಂ’ ಭಾವ ಇದ್ದವರಿಗೆ ತಮ್ಮ ಭವಿಷ್ಯದ ಬಗ್ಗೆ ಯೋಚನೆಯೇ ಇರುವುದಿಲ್ಲ. ಬುದ್ಧಿಗೇಡಿಗಳಾಗಿರುತ್ತಾರೆ.
ಬರೀ ದುರಾಲೋಚನೆ ಮಾಡಿ, ಒಳ್ಳೇ ಯೋಚನೆಗಳು ಇಂಥವರ ಬುದ್ಧಿಗೆ ಹೊಳೆಯುವುದೇ ಇಲ್ಲ...

ಈ ರೀತಿಯ ಮನೋಭಾವ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬೇಡ ಅಲ್ವ?
ಒಂದು ವೇಳೆ ಈ ಮನೋಭಾವ ನಮ್ಮಲ್ಲಿ ಇದ್ದರೆ, ಅದನ್ನು ತೊರೆದು ನಾವೂ ಬದಲಾಗೋಣ.
ನಾವು ಮೊದಲು ಬದಲಾಗಿ ನಂತರ ಬೇರೆಯವರಲ್ಲಿ ಬದಲಾವಣೆಯನ್ನು ನಿರೀಕ್ಷಿಸೋಣ...

ಪ್ರಯತ್ನಪಡೋಣ ಅಲ್ವ??? ಏನಂತೀರಾ???