ನೀತಿ ಕಥೆ - ಕೋಗಿಲೆ ಮತ್ತು ಕಾಗೆ

ನೀತಿ ಕಥೆ - ಕೋಗಿಲೆ ಮತ್ತು ಕಾಗೆ

ಕೋಗಿಲೆಯೊಂದು ಮಧುರವಾಗಿ ಹಾಡುತ್ತಿತ್ತು. ಕಾಗೆ ಕೋಗಿಲೆಯ ಮಧುರ ಕಂಠವನ್ನು ಕೇಳಿ ತನ್ನ ಧ್ವನಿ ಮಧುರವಾಗಿಲ್ಲವೆಂದು ಮನದಲ್ಲೇ ನೊಂದಿತು. ಕಾಗೆಯ ದುಃಖವನ್ನರಿತ ಕೋಗಿಲೆ ಕಾಗೆಯ ಬಳಿ ತೆರಳಿ "ಗೆಳೆಯ ನೀನು ಗೂಡು ಕಟ್ಟಬಲ್ಲೆ ಆದರೆ ಆ ಕಲೆ ನನಗೆ ಒಲಿದಿಲ್ಲ. ಒಂದು ಅಗಳ ಕಂಡರೆ ಇಡಿಯ ಬಳಗವ ಕರೆಯುವ ಬುದ್ಧಿ ನಮ್ಮ ಮಂದಿಗಿಲ್ಲ. ಎಲ್ಲರಿಗೂ ಅವರದೇ ಆದ ವಿಶೇಷ ಗುಣಗಳಿರುತ್ತವೆ. ನಾವು ಬೇರೆಯವರ ವಿಶೇಷ ಗುಣಗಳನ್ನು ಕಂಡು ದುಃಖಿಸದೇ ಪ್ರಶಂಸಿಸೋಣ. ಜೊತೆಗೆ ನಮ್ಮ ವಿಶೇಷತೆಯ ಬಗ್ಗೆ  ನಮಗೆ ಹೆಮ್ಮೆಯಿರಲಿ " ಎಂದು ಸಮಾಧಾನದ ಮಾತುಗಳನ್ನಾಡಿತು. ಕೋಗಿಲೆಯ ಮಾತನ್ನು ಕೇಳಿ ಕಾಗೆಗೆ ತನ್ನ ವಿಶೇಷ ಗುಣಗಳ ಬಗ್ಗೆ ಹಮ್ಮೆಯಾಯಿತು. ಕಾಗೆಯು ತನ್ನ ಕಣ್ಣುತೆರೆಸಿದ ಕೋಗಿಲೆಯ ಮಧುರ ಕಂಠವನ್ನು ಮೆಚ್ಚಿ ಹೊಗಳಿತು.

ನೀತಿ - ನಮ್ಮ ಬಗ್ಗೆ ನಮಗೆ ಹೆಮ್ಮೆಯಿರಲಿ. ಇರದ ಭಾಗ್ಯದ ಕುರಿತು ಚಿಂತಿಸಿ ಫಲವಿಲ್ಲ. ಪರರ ಒಳ್ಳೆಯ ಗುಣವನ್ನು ಮೆಚ್ಚಿ ಪ್ರಶಂಸಿಸೋಣ.

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ