ನೀನಗೇನೂ ಅನಿಸಲೇ ಇಲ್ಲವೆ... - ಒಂದು ಗಝಲ್
ನೀನು ಕುಳಿತಿರುವಲ್ಲಿಗೆ ನನ್ನ ಕಣ್ಣುಗಳು ಹೊರಳಿದವು ಸವಿಯುತ್ತಿರುವೆ ನೀನಗೇನೂ ಅನಿಸಲೇ ಇಲ್ಲವೆ
ಬಾನಿನಿಂದ ಹೂವಿನ ಮಳೆಯಂತೆ ನೀರ ಹನಿಗಳ ಸುರಿಸುತ್ತಿರುವೆ ನೀನಗೇನೂ ಅನಿಸಲೇ ಇಲ್ಲವೆ
ಚಳಿಯಾಗಿರಬೇಕು ಮೆಲ್ಲನೆ ನನ್ನನ್ನೇ ಓರೆಗಣ್ಣಿನಿಂದ ಲಜ್ಜಿತಳಾಗಿ ಮುಗುಳು ನಕ್ಕೆ ಮೈಮನ ಬಿಸಿಯೇರಿತೆ
ಸುತ್ತಲೂ ನನ್ನಂತೆ ನೂರಾರು ಯೌವನದ ಹುಡುಗರಿದ್ದರೂ ನೋಡುತ್ತಿರುವೆ ನಿನಗೇನೂ ಅನಿಸಲೇ ಇಲ್ಲವೆ
ಮೊನ್ನೆಯ ಸಂತೆಯಲ್ಲಿ ನಾ ಹಾದು ಹೋಗುವಾಗ ಪಕ್ಕದಲ್ಲೆ ನಿನ್ನ ಇರುವಿಕೆಯ ಗುರುತು ಪತ್ತೆ ಹಚ್ಚಿದ್ದೆ
ಹಾಲಿನಂತಹ ನಗುವೊಂದನ್ನು ನನ್ನೆಡೆಗೆ ಎಸೆದ ನೀನು ಮತ್ತೆ ಅಡಗುತ್ತಿರುವೆ ನಿನಗೇನೂ ಅನಿಸಲೇ ಇಲ್ಲವೆ
ಬೆಸುಗೆಯ ಬಂಧನದ ಸರಪಳಿಲಿ ಇನ್ನೇನು ಬಂಧಿಸಬೇಕು ಅನ್ನುವ ಹೊತ್ತಲಿ ತಪ್ಪಿಸಿಕೊಂಡು ಹೋದೆಯಲ್ಲೆ
ಇರುವಿಕೆಯ ನಡುವೆಯೂ ತಾರೆ ಹೊಳೆದಂತೆ ನನ್ನೆದುರು ಕಾಣುತ್ತಿರುವೆ ನಿನಗೇನೂ ಅನಿಸಲೇ ಇಲ್ಲವೆ
ಗುಡಿ ಗೋಪುರಗಳ ಒಳಗೊಳಗೆ ಈಶನ ಆಗಮನಕ್ಕಾಗಿ ಕಾದಿರುವ ಹಂಸದಂತೆ ಕಂಡಿರುವೆ
ಮದನನ ಬಾಣದ ಹೊಡೆತಕ್ಕೆ ಸಿಲುಕಿದ ನವಿಲಿನಂತೆ ಕುಣಿಯುತ್ತಿರುವೆ ನಿನಗೇನೂ ಅನಿಸಲೇ ಇಲ್ಲವೆ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
