ನೀನಿಲ್ಲದೇನೆ...
ಬರಹ
ನೀನೆಂದು ಬರುವೆ ಜೊತೆಗೆ
ಮಳೆಯಲ್ಲಿ ನೆನೆಯಲು.
ಪ್ರತಿ ಮಳೆಯಲ್ಲು ನಾ
ನಿನಗಾಗಿ ಕಾದೆನು.
ನೀನಿಲ್ಲದೇನೆ, ನೀನಿಲ್ಲದೇನೆ,
ಪ್ರತಿಹನಿಯು ಹೃದಯ ಸುಡುತಿಹುದು....
ಎದೆಯ ಒಡಲ ಕಡಲಲಿ
ನೀನು ಸಾಗೊ ಅಲೆಗಳು.
ನೀನೆ ಅಗಲಿ ಹೋದರೆ
ಆರದು ಕಣ್ಣ ಹನಿಗಳು.
ನೀನಿಲ್ಲದೇನೆ, ನೀನಿಲ್ಲದೇನೆ,
ತಂಗಾಳಿಯು ನನ್ನ ಅಣಕಿಸಿದೆ....
ನನ್ನ ಪ್ರೇಮ ಬಂಡಿಯ
ತಿರುಗಾಲಿಯೆ....
ನಿನ್ನ ಉಸಿರು ಇಲ್ಲದೆ
ನಾ ಮುಂದೆ ಹೋಗೇನೆ????
ನನ್ನ ನಿವೇದನೆ, ಒಲವ ಆಲಾಪನೆ.
ನೀನೆ ಇರದೆ ನಂಗಿರದು ನಾಳೆ.
ನೀನೆಂದು ಬರುವೆ ಜೊತೆಗೆ
ಮಳೆಯಲ್ಲಿ ನೆನೆಯಲು.
ಪ್ರತಿ ಮಳೆಯಲ್ಲು ನಾ
ನಿನಗಾಗಿ ಕಾದೆನು.
ನೀನಿಲ್ಲದೇನೆ, ನೀನಿಲ್ಲದೇನೆ,
ಪ್ರತಿಹನಿಯು ಹೃದಯ ಸುಡುತಿಹುದು....
ಎದೆಯ ಒಡಲ ಕಡಲಲಿ
ನೀನು ಸಾಗೊ ಅಲೆಗಳು.
ನೀನೆ ಅಗಲಿ ಹೋದರೆ
ಆರದು ಕಣ್ಣ ಹನಿಗಳು.
ನೀನಿಲ್ಲದೇನೆ, ನೀನಿಲ್ಲದೇನೆ,
ತಂಗಾಳಿಯು ನನ್ನ ಅಣಕಿಸಿದೆ....
ನನ್ನ ಪ್ರೇಮ ಬಂಡಿಯತಿರುಗಾಲಿಯೆ....
ನಿನ್ನ ಉಸಿರು ಇಲ್ಲದೆನಾ ಮುಂದೆ ಹೋಗೇನೆ????
ನನ್ನ ನಿವೇದನೆ, ಒಲವ ಆಲಾಪನೆ. ನೀನೆ ಇರದೆ ನಂಗಿರದು ನಾಳೆ.