ನೀನು ತಿಳಿಯಾ !!!

ನೀನು ತಿಳಿಯಾ !!!

ಕವನ

ನವಿಲೇ, ಒಮ್ಮೆ ನಿನ್ನ ಗರಿಯ ಹರಡುವೆಯಾ!
ನನ್ನ ಒಲವಿನ ಕಣ್ಣು ಅದುವೇ, ನೀನು ತಿಳಿಯಾ !!

ಹಂಸವೇ, ಒಮ್ಮೆ ನಿನ್ನ ನಡಿಗೆಯ ತೋರುವೆಯಾ !
ನನ್ನ ಒಲವ ಹೆಜ್ಜೆ ಅದುವೇ, ನೀನು ತಿಳಿಯಾ !!

ಮುಗಿಲೇ, ಒಮ್ಮೆ ಮಂಜು ಹನಿಯ ಸುರಿಸುವೆಯಾ !
ಅದರ ಹೊಳಪು ನನ್ನ ಒಲವು , ನೀನು ತಿಳಿಯಾ !!

ಕಾಮನಬಿಲ್ಲೇ, ಒಮ್ಮೆ ಹಾಗೆ ಮೊಡಿ ಬರುವೆಯಾ !
ಆ ಸಪ್ತವರ್ಣ ನನ್ನ ಒಲವು, ನೀನು ತಿಳಿಯಾ !!

ತಂಗಾಳಿಯೇ, ಒಮ್ಮೆ ನೀನು ಮೆಲ್ಲಗೆ ಬೀಸುವೆಯಾ !
ಆ ತಂಪ ಸ್ಪರ್ಶ ನನ್ನ ಒಲವು, ನೀನು ತಿಳಿಯಾ !!

ನನ್ನ ಕಣ್ಣ ತುಂಬಾ ಅವಳ ಹೊಳಪು,
ಹೆಜ್ಜೆ-ಹೆಜ್ಜೆಗೂ ಆಕೆಯ ನೆನಪು
ಹೀಗೆ ನನ್ನ ಕಾಡದಿರು ಒಲವೇ,
ಕೊನೆ ಉಸಿರಿನಲ್ಲೂ ನಿನ್ನ ಮರೆಯಲಾರೆನು
ನೀನು ತಿಳಿಯಾ !!

Comments