ನೀನು ನೀನಾಗು

ನೀನು ನೀನಾಗು

ಕವನ

ನೀನು ನೀನಾಗು

ಈ ಜಗದೊಳಗೆ ಮೊದಲು

ಈ ಜಗವೆಲ್ಲ ನಿನ್ನ ಕೊಂಡಾಡುವುದು

ಮನುಷ್ಯನಾಗು ನೀನು ಮೊದಲು

 

ನೀನು ನೀನಾಗು ಮೊದಲು

ಈ ನಾಡಿನ ಪ್ರಜೆಯಾಗು

ಸದ್ಗುಣಗಳ ಸಂಪನ್ನನಾಗು

ನೀನು ಮೊದಲು ಮಾನವನಾಗು

 

ನೀನು ನೀನಾಗು

ಕೆಡುಕನಾಗಬೇಡ

ಹೆಂಡ ಸಾರಾಯಿ ಕುಡಿಯಬೇಡ

ಹೆಂಡ್ತಿ ಮಕ್ಕಳ ದಿಕ್ಕಾಪಾಲು ಮಾಡಬೇಡ

 

ಓ ಮನುಜ ನೀನು ನೀನಾಗು ಮೊದಲು

ನಿನ್ನೊಳಗಿನಿಂದ ನೀನು ನೀನಾಗು

ತಪ್ಪುಗಳ ತಿದ್ದಿಕೊಂಡು ನಡೆ

ಅರಿತು ಬಾಳು ಓ ಮನುಜ ನೀನು

 

ನೀನು ನೀನಾಗು ಓ ಮನುಜ

ಮನಸ್ಸುಗಳ ಸ್ವಾರ್ಥದಿಂದ ಕಲ್ಮಶವಾಗಿರುವವು

ಆ ಸ್ವಾರ್ಥ ಕಲ್ಮಶದಿಂದ ನೀನು  ಹೊರಗೆ ಎದ್ದು ಬಾ

ನಿನ್ನೊಳಗಿನಿಂದ ನೀನಾಗಿ ಬಾ ಓ ಮನುಜ ಮನುಜನಾಗಿ ಬಾ

 

                                                                   - ಹೆಚ್.ವಿರುಪಾಕ್ಷಪ್ಪ ತಾವರಗೊಂದಿ

 

 

Comments

Submitted by venkatb83 Mon, 10/22/2012 - 18:35

ವಿರುಪಾಕ್ಷಪ್ಪ ಅವ್ರೆ

ಕವನದ ಆಶಯ ಚೆನ್ನಾಗಿದೆ..
ಇದು ನನಗೆ ಎನಾದ್ರಾಗು ನೀ ಮೊದಲು ಮಾನವನಾಗು ಎಂಬ ಸಾಲುಗಳನ್ನು ನೆನಪಿಸಿತು...
ಶುಭವಾಗಲಿ

ನಾಡ ಹಬ್ಬ ದಸರಾದ ಶುಭಾಶಯಗಳು..

\|

Submitted by Maalu Wed, 10/24/2012 - 22:08

In reply to by venkatb83

ನಿಮ್ಮ ಕವಿತೆಯು ಚೆನ್ನಿದೆ.
'ಓದಿ ಬ್ರಾಹ್ಮಣನಾಗು ಕಾದು ಕ್ಷತ್ರಿಯನಾಗು
ಏನಾದರು ಆಗು ಏನಾದರು ಇರಲಿ
ಮೊದಲು ಮಾನವನಾಗು...'
ಇದು ಡಾ. ಜಿ.ಎಸ್. ಶಿವರುದ್ರಪ್ಪನವರು ಬರೆದಿರುವ ಕವಿತೆ.