ನೀನು ಮಾಡಿದ್ದು, ಪುನಃ ನಿನಗೆ ಬರುತ್ತದೆ.

ನೀನು ಮಾಡಿದ್ದು, ಪುನಃ ನಿನಗೆ ಬರುತ್ತದೆ.

ಬರಹ

ಒಂದು ದಿನ ರಾಮಣ್ಣ ತಾನು ಬೆಳೆದ ತರಕಾರಿಗಳನ್ನ ಮಾರಿ ಮನೆಗೆ ಹಿಂದಿರುಗುತ್ತಿದ್ದ. ಬರುತ್ತಿರುವಾಗ ದಾರಿಯಲ್ಲಿ ಒಬ್ಬ ವಯಸ್ಸಾದ ಸಾಹುಕಾರ ಹೊಂಡದಲ್ಲಿ ಸಿಕ್ಕಿಕೆೊಂಡಿರುವ ಕಾರಿನ ಚಕ್ರವನ್ನ ಬಿಡಿಸಲಾಗದೆ ಬಳಲುತ್ತಿದ್ದ.

ಇದನ್ನು ನೋಡಿದ ರಾಮಣ್ಣ, ಹೋಗಿ ಕಷ್ಟಪಟ್ಟು ಕಾರಿನ ಚಕ್ರವನ್ನು ಹೊಂಡದಿಂದ ಬಿಡಿಸಿದ. ಸಾಹುಕಾರನಿಗೆ ಖುಷಿಯಾಗಿ ನೂರು ರುಪಾಯಿಗಳನ್ನು ಕೆೊಡಲು ಬಂದ. ಅದನ್ನು ರಾಮಣ್ಣ ನಿರಾಕರಿಸಿ : "ಸ್ವಾಮಿ, ನಾನು ಹಣಕ್ಕಾಗಿ ನಿಮಗೆ ಸಹಾಯ ಮಾಡಲಿಲ್ಲ. ನೀವು ಕಷ್ಟದಲ್ಲಿದ್ದಿರಿ ನೋಡಲಾಗಲಿಲ್ಲ ಹಾಗಾಗಿ ಸಹಾಯ ಮಾಡಿದೆ. ಇದರ ಬದಲು ಮತ್ತೋಬ್ಬರ ಕಷ್ಚಕ್ಕೆ ನೀವು ಸಹಾಯ ಮಾಡಿದರೆ ನನಗೆ ಅಷ್ಟೇ ಸಂತೋಷವಾಗುತ್ತದೆ" ಎಂದ.

ಸಾಹುಕಾರನಿಗೆ ಬಹಳ ಖಷಿಯಾಯಿತು. ಪ್ರಯಾಣವನ್ನು ಮುಂದುವರೆಸಿದ. ನಡುವೆ ದಾರಿಯಲ್ಲಿ ಒಬ್ಬಳು ತುಂಬು ಬಸುರಿ, ಮಡಿಕೆಯಲ್ಲಿ ಮಜ್ಜಿಗೆ ಮಾರುತ್ತಿದ್ದಳು. ಕಾರನ್ನ ನಿಲ್ಲಿಸಿದ ಸಾಹುಕಾರ, ಮಜ್ಜಿಗೆ ಕುಡಿದು. ರಾಮಣ್ಣನ ನೆನಪಾಗಿ ಅವಳಿಗೆ 2000 ರುಪಾಯಿಗಳನ್ನು ಕೊಟ್ಟು ಮಗುವನ್ನು ಚೆನ್ನಾಗಿ ಸಾಕಲೆಂದು ಹೇಳಿ ಮುಂದೆ ಸಾಗಿದ.

ಅವಳಿಗೆ ಬಹಳ ಸಂತೋಷವಾಯಿತು. ಅಂದು ರಾತ್ರಿ ತನ್ನ ಗಂಡನಿಗೆ ಹಣವನ್ನು ಕೊಟ್ಟು ನೆಡೆದ್ದದ್ದೆಲ್ಲವನ್ನು ಹೇಳಿದಳು.

ಅವಳ ಗಂಡನು ಮತ್ತ್ಯಾರು ಅಲ್ಲದೆ, ರಾಮಣ್ಣನಾಗಿದ್ದ.