ನೀನು ಯಾರು?
ನೀನು ಯಾರು? ಎಂಬ ಪ್ರಶ್ನೆಗೆ ಉತ್ತರವೇನು? ನಿನ್ನನ್ನು ಏನೆಂದು ಗುರ್ತಿಸಿಕೊಳ್ಳುವೆ ಎಂಬ ಪ್ರಶ್ನೆಗೆ ಅನುಭವೀ ಹಿರಿಯರೊಬ್ಬರು ಹೇಳುತ್ತಾರೆ. ತಾಯಿಯ ಗರ್ಭದಲ್ಲಿದ್ದಾಗ ನಿನ್ನನ್ನು ಪಿಂಡ ಎಂದು ಕರೆದರು, ಜನನದ ನಂತರ ನಾನು 'ಶಿಶು'ವಾದೆ. ನಂತರ ಕಿಶೋರ, ಯುವಕ, ಗೃಹಸ್ಥ, ಮುದುಕ, ಎಂಬಂತೆ ಅನೇಕಾನೇಕ ಬಿರುದುಗಳಿಂದ ನನ್ನ ಕರೆಯುತ್ತಾ ಹೋದರು. ನಾನು ಈಗಲೋಆಗಲೋ ಎಂಬಂತೆ ಮೃತ್ಯುವಿನ ಹಾದಿಯನ್ನು ಕಾಯುತ್ತಿದ್ದೇನೆ. ಆ ನಂತರದಲ್ಲಿ ನನ್ನನ್ನು 'ಹೆಣ' ಎಂದು ಕರೆವರು. ಇದು ನನ್ನ ಜೀವನದ ಅನೇಕಾನೇಕ ಘಟ್ಟಗಳು ಹಾಗೂ ನನ್ನನ್ನು ಜನರು ಕರೆಯುವ ಹೆಸರುಗಳು ಎಂದು.
ಮಗುವಾಗಿದ್ದಾಗ ಹೆದರಿಕೆ ಏನೆಂದು ತಿಳಿದಿರಲಿಲ್ಲ. ಪ್ರೀತಿ, ಮುಗ್ಧತೆ ಎಲ್ಲರೂ ನನ್ನವರೆಂಬ ಭಾವನೆಯಿಂದ ಭೂಮಿಯ ಮೇಲೆ ಜನ್ಮತಾಳಲು ಕಾರಣನಾದ ಆ ಸೃಷ್ಟಿಕರ್ತನ ಜೊತೆ ಬಾಂಧವ್ಯ ಬೆಳೆಸಿದ್ದೆ.
ಈಗ ಜನರನ್ನು ಗುರ್ತಿಸುವುದು ಅವರಿಗೆ ತಗುಲಿಸಿರುವ ಪದದ ಗುರ್ತಿನಿಂದ, ಅವರ ಜಾತಿ, ಮತ, ಹಣಬಲದಿಂದ! ಇದನ್ನು ಕೇಳುತ್ತಿದ್ದ ನನಗೆ, ಇತ್ತೀಚಿನ ಘಟನೆ ನೆನಪಿಗೆ ಬಂದಿತ್ತು. ಸಮಾರಂಭವೂಂದಕ್ಕೆ ಕರೆಯಲು ನನ್ನ ಶಿಷ್ಯ ನನ್ನನ್ನು ಹುಡುಕಿಕೊಂಡು ಬಂದಿದ್ದು, ಬಹಳ ಸಂತೋಷ ತಂದಿತ್ತು. ಎಲ್ಲರಿಗೂ ದೂರವಾಣಿ ಹಾಗೂ ಮೆಸೇಜ್ ಮೂಲಕ ಆಹ್ವಾನ ನೀಡುತ್ತಿದ್ದ ಆತ ನನ್ನಡೆಗೆ ಬಂದದ್ದು, ನಾನು ಒಂದು ಉನ್ನತ ಹುದ್ದೆಯನ್ನು ಅಲಂಕರಿಸಿದ್ದರಿಂದ ಎಂದು ತಿಳಿಸಿದ.
ಓಹ್, ಕುರ್ಚಿಗೆ ಬೆಲೆ ಬೇಡ. ಈ ಕುರ್ಚಿ ಇಂದು ನನಗೆ, ನಂತರ ಬೇರೆ ಯಾರಿಗೋ? ವ್ಯಕ್ತಿಗೆ ಕೊಡುವ ಬೆಲೆ ಮುಖ್ಯ ಎಂದು ಆತನಿಗೆ ತಿಳಿಹೇಳಿದ್ದೆ ಆ ದಿನ!.
Comments
;(((