ನೀನು ಹೋದ ದೂರ ಅದೆಷ್ಠೊe...........
ನೆನಪಿದೆಯಾ..?? ನಮ್ಮ ಮನೇ ಮುಂದೇನೇ ನಿನ್ಮನೆ ಇತ್ತು. ಬೆಳಗಿನ ಕಿರಣ ನೊಡೊ ಮೊದ್ಲು
ನಿನ್ನ ನೊಡೊ ನನ್ನಾಸೆ ನನ್ಗಷ್ಠೆ ಅಲ್ದೇ ನಿನ್ಗೂ ಇತ್ತು. ಹೂವು ಹರಿಯೋ ಸೋಗುಹಾಕಿ, ಕೈಲಿ
ಹೊಪಾತ್ರೆ ಹಿಡ್ದು ಈ (ಸೋ)ಮಾರಿ ದರ್ಶನಕ್ಕೆ ಕಾದ ದಿನಗಳ್ನೆಲ್ಲಾ ಮರ್ತ್ಬಿಟ್ಯಾ. ನಾನೊ ಫುಲ್ ಡೀಸೆಂಟ್
ಹುಡ್ಗನ್ ತರ ಎಲ್ಲರಿಗಿಂತ ಮೊದ್ಲೆ ಎದ್ದು, ಮುಖ ತೊಳ್ದು, ಪುಸ್ತಕ ಹಿಡ್ದು ಮಹಡಿ ಮೇಲೆ ಹತ್ಬಿಡ್ತಿದ್ದೆ.
ಒಂದಿನ ಸುಧಾನೋ, ತರಂಗಾನೋ ಹಿಡ್ದು ಮನೆಯವರೆಲ್ಲರ ಮುಂದೆ ತಮಾಷೆ ಚೆಂಡಾಗಿದ್ದೆ.
ಪಾಪ ನಿಮ್ಮಪ್ಪ, ಎರಡು ಎಕ್ಸ್ಟ್ರಾ ಕಣ್ಣು ಹಾಕ್ಕೊಂಡು , ಒಂದ್ ಕೈಯಲ್ಲಿ ಕಾಫೀ, ಇನ್ನೊಂದ್ ಕೈಲಿ
ಕನ್ನಡ ಪ್ರಭ ಹಿಡ್ಕೊಂಡು , ತಾನು ಹಿಡಿದ ಕಳ್ಳನ ವಿಷ್ಯ ಬಂತೋ ಇಲ್ವೋ ಅಂತಾ ನೋಡೋದ್ರಲ್ಲೇ
ಕಳೆದೊಗಿರ್ತಾ ಇದ್ರು. ಎದುರೇ ನಡೀತಿದ್ದ ಹೃದಯ ಗಳ್ಳರ ಲೂಟಿ-ದರೊಡೆ ಗೊತ್ತೇ ಆಗ್ತಿರ್ಲಿಲ್ವಲ್ಲಾ..!!!!
ನಿನ್ನಜ್ಜಿ ಎಡವಟ್ಟಾಗಿದ್ದೇ ಇನ್ನೊಂದ್ ದಿವ್ಸ. ತೀರಾ ಅಷ್ಟೊಂದು ಅಸೇನಾ ನನ್ನ ನೋಡೋಕೆ. ಹೂವು
ಹರಿಯೋಕೆ ಹೂವು ಪಾತ್ರೇನೇ ಮರಿಯೋದೇ..? ಕಿತ್ತ ಹೂವ್ಗಳನ್ನೆಲ್ಲ ಕೈಲಿರೋ ಪಾತ್ರೆಗೇ
ಹಾಕ್ತಾ ಇದೀನಿ ಅನ್ಕೊಂಡು ನೆಲದ ಮೇಲೆ ಹಾಕ್ತಾ ಇದ್ದೆ. ನನ್ಗೂ ಗೊತ್ತಾಗಿರ್ಲಿಲ್ಲ , ತುಂಬಾ ಹೊತ್ತು
ಕಣ್ಣಲ್ಲೇ ಮಾತು ನಡೀತಾಇತ್ತು. ನೆಲಕ್ಕೆ ಹಾಕಿದ್ ಹೂವ್ ನೋಡಿ ನಿಮ್ಮಪ್ಪ ನಿನ್ ಹಿಂದೇನೇ ಬಂದು ನಿಂತಿದ್ರು.
ನಂದೋ , ನಿನ್ನ ನೊಡ್ಲಾ.... ನಿಮ್ಮಪ್ಪನ್ನಾ... ಅನ್ನೋ ಪರಿಸ್ಥಿತಿ. ನಿಂಗೆ ಹೇಳಕ್ಕೂ ಆಗ್ದೇ ಬೀಡಕ್ಕೂ ಆಗ್ದೇ
ಆ ಬೆಳಗಿನ ಜಾವದಲ್ಲೇ ಬೆವತುಹೋಗಿದ್ದೆ. ಪ್ರತೀ ದಿನ ದೇವ್ರ ತಲೆ ಮೇಲೆ ಹೂವು ತಪ್ಪಿದ್ರೂ ನಮ್ಮೀ ಆಟ
ತಪ್ತಿರ್ಲಿಲ್ಲ. ಆದ್ರೆ ಅದಾದ ಎರಡು ದಿವಸ ಹಂಗೆ ನೋಡಕ್ಕೆ ಆಗ್ಲೇ ಇಲ್ಲ ಅಲ್ವಾ....
ನಿನ್ನ ಹೃದಯದ ತಳಮಳ ನಂಗೆ ಮುಟ್ಟಿತ್ತು. ಅರ್ಧ ರಾತ್ರೀಲೆ ನಿಮ್ಮನೇ ಕಿಟಕಿ ಹತ್ರ ಬಂದು ಮಲ್ಗಿರೊ
ನಿನ್ನ ಮಂದ ಬೆಳಕಲ್ಲೆ ನೋಡ್ಕೊಂಡು ಹೋಗ್ತಾ ಇರೋದು ನಿನಗೊತ್ತಾಗಿತ್ತು. ಆಗ್ಲೇ ಎದ್ದು ಹೊರಬಂದ ನೀನು
"ದೀಪು , ನಮ್ಮಪ್ಪ-ಅಮ್ಮನ ಸಹವಾಸ ಸಾಕಾಗಿದೆ, ಎಲ್ಲಾದ್ರೂ ತುಂಬಾ ದೂರ ನಾವಿಬ್ರೇ ಹೊಗ್ಬಿಡೊಣ" ಅಂದಿದ್ದೆ.
ಕೆಲವು ಸರಿ ಎದ್ರಿಗೆ ನಿಂತು ಮಾತಾಡಲು ಹೆದರಿ ನಡುಗುತ್ತಿದ್ದ ಆ ನಿನ್ನ ತುಟಿಗಳಿಂದ ಬಂದ ಮಾತು ಚಣಕಾಲ
ದ0ಗು ಬಡಿಸಿತ್ತು. "ಒಂದು ವಾರದ ವರೆಗೂ ಬೇಡ" ಎಂದಷ್ಟೆ ಹೇಳಿದ್ದೆ. ಅಲ್ಲಿ ಇಲ್ಲಿ ದುಡ್ಡು-ಕಾಸು ಗಳಿಸಿ ಕೂಡ
ಇಟ್ಟಿದ್ದೆ.
ನಿನ್ನಾಸೆಗಳೇ ಹಾಗೆ ,ಅದಾದ ಮರುದಿನವೇ ಸಂಜೆ ನೀನು ಸಿಕ್ಕಿದ್ದೆ. ಆಸೆ ಇಂದ ನೋಡಿದ ನನಗೆ
ಬೇಡ ಎಂದು ತಿರಸ್ಕರಿಸಿ "ಹಚ್ಚನೆ ಹಸಿರಿನ ಹುಲ್ಗಾವಲಲಿ ಬೆಚ್ಚನೆ ಸೇರ್ಬೇಕು...ತಂಪನೆ ತೀಡುವ ತಂಗಾಳಿಯಲಿ
ಬೆಂಕಿಯ ಹಚ್ಚಿದ ಹಾಗಿರ್ಬೇಕು ನಮ್ಮೊದಲ ಮಿಲನ" ಅಂತಾ ಹೇಳಿದ್ದೆ...ಕ್ಷಣ ಕಾಲ ತಿಳಿಯದೇ ಪೆದ್ಡು-ಪೆದ್ದಾಗಿ ನೊಡುತ್ತಿದ್ದರೆ,
ಬರಸೆಳೆದು ಬಿಗಿದಪ್ಪಿ ಮುತ್ತಿಕ್ಕಿ ಓಡಿಹೊಗಿದ್ದೆ. ಆ ನಿನ್ನ ಸಿಹಿ ಮುತ್ತಿನ ಮತ್ತಿಳಿಯುವುದರೊಳಗೆ ಬರಸಿಡಿಲೊಂದು ಬಡಿದಿತ್ತು. ನೀನು ತುಂಬಾನೇ ದೂರ ಹೊಗ್ಬಿಟ್ಟೆ ಅಂತ. ನೀನು ಹೋದ ದೂರ ಅದೆಷ್ಠೊe , ಹೋದೆ... ಹೋಗಿ ಬರಲೇ ಇಲ್ಲ.....
!ನೆನಪು... !!!!