ನೀನೇ ನಮ್ಮ ಒಡೆಯ‌

ನೀನೇ ನಮ್ಮ ಒಡೆಯ‌

ಕವನ

ನೀರು  ಹಬೆಯಾಗಿ,  ಮೊಡ  ತೇಲಿಸಿ

ಮಳೆಯಾಗಿ   ಇಳೆ  ತುಂಬ  ಸುರಿಸಿ,

ಹಗಲು  ರಾತ್ರಿಗಳಪಥದಲ್ಲಿ   ಬೆಳಕಿನೊಂದಿಗೆ,

ಕತ್ತಲ  ಪೋಣಿಸುವ   ನೀನೇ    ನಮ್ಮ  ಒಡೆಯ.............

ತಣಿದ  ಇಳೆಯ ಗರ್ಭ ದಲ್ಲಿ  ನಿರ್ಜೀವ

ಕಾಳಿಗೆ ಚೇತನ   ತುಂಬಿ,

ಕುಡಿಒಡೆದು  ಬೆಳೆದ  ಹಸಿರು,

ಚಿಗುರಿನ   ಬೆಳೆಯ  ಪಾಲಕ  ನೀನು...................................

ಒಂದು ಕಾಳಿಗೆ  ಒಂದು ಚಿಗುರು

ಬೆಳೆದು  ನೂರು ಕಾಳಿನ  ಗೋಂಚಲು,

ಅಲ್ಲಿ   ಹಾರಾಡುವ     ನೂರುದುಂಬಿಗಳ   ಮಜಲು,

 ಹಸಿವಿಗೆ   ಕವಳ ಉಣಿಸುವ   ಅನ್ನಧಾತ ನಿನು......................

ಹುಟ್ಟುವ  ಕೋಟಿ  ಕೋಟಿ    ಜೀವ  ಜಂತಿಗೆ,

 ಬದುಕುವ  ದಾರಿ  ನೂರಾರು  ಉಂಟು,

ಅಣು  ಅಣುವಿಗೂ   ನಿನ್ನ  ನಿಯಮದ  ಅಂಟು,

ಸಾವಿಗಂಟ   ಸಲುಹುವ  ಶಕ್ತಿ ಶಾಲಿ   ವಿಭು ನೀನು........................

ನವಮಾಸದ   ಗರ್ಭಕಾಲದ  ಅಂತರದಲ್ಲಿ,

ಅಂಡ  ಪಿಂಡ  ಭ್ರೂಣಕ್ರಿಯೆಯ   ಚಕ್ರದ

ಋತುಮಾನ  ನಡುವಿನ  ಏಳುಬೀಳುಗಳಲ್ಲಿ

ಜೀವತುಂಬಿ    ಜನ್ಮ ನೀಡುವ   ಜನ್ಮಧಾತನೀನು................................

ಹುಟ್ಟಿಲ್ಲ    ಸಾವಿಲ್ಲ  ಉಸಿರಾಟಬೇಕಿಲ್ಲದ

ಚಿರ   ನಿರಂತರ   ಅಂತರ್ಯಾಮಿ  ನೀನು

ನಿರಾಕಾರಿ, ನಿರಾಹಾರಿ   ಮೃತ್ಯುಂಜಯ

ನೀನೇ    ವಿಶ್ವಪಾಲಕ   ಸಕಲರ  ರಕ್ಷಕ   ನೀನು

.                ೦೦೦೦೦೦೦೦೦

 

 

Comments