ನೀರುಳ್ಳಿ ಪಕೋಡಾ
ಬೇಕಿರುವ ಸಾಮಗ್ರಿ
ನೀರುಳ್ಳಿ ೪, ಕಡಲೇ ಹಿಟ್ಟು, ರುಚಿಗೆ ಉಪ್ಪು, ಕರಿಬೇವು ೨-೩ ಎಸಳು, ಕರಿಯಲು ಎಣ್ಣೆ, ಖಾರಕ್ಕೆ ಬೇಕಾದಷ್ಟು ಮೆಣಸಿನ ಹುಡಿ, ಜೀರಿಗೆ ೧ ಚಮಚ
ತಯಾರಿಸುವ ವಿಧಾನ
ಮೊದಲಿಗೆ ನೀರುಳ್ಳಿಯನ್ನು ಉದ್ದಕ್ಕೆ ಸಪೂರವಾಗಿ ಕತ್ತರಿಸಬೇಕು. ಅದಕ್ಕೆ ಉಪ್ಪುಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಗ ಅದು ನೀರು ಬಿಟ್ಟು ಕೊಳ್ಳುತ್ತೆ. ಆಗ ಅದಕ್ಕೆ ಮೆಣಸಿನ ಹುಡಿ, ಜೀರಿಗೆ, ಕರಿಬೇವು ಹಾಕಿ ಚೆನ್ನಾಗಿ ಬೆರೆಸಿ ನಂತರ ಅದಕ್ಕೆ ಹಿಡಿಯುವಷ್ಟು ಕಡಲೇ ಹಿಟ್ಟು ಬೆರೆಸಿ. ಅಗತ್ಯ ಇದ್ದಲ್ಲಿ ಮಾತ್ರ ಸ್ವಲ್ಪ ನೀರು ಹಾಕಬಹುದು. ಒಂದು ಬಾಣಲೆಗೆ ಎಣ್ಣೆ ಹಾಕಿ ಒಲೆಯಲ್ಲಿ ಕಾಯಲು ಇಡಿ. ಎಣ್ಣೆ ಕಾದ ನಂತರ ಮಿಶ್ರಣವನ್ನು ಚೂರು ಚೂರೇ ಪಕೋಡಾ ಗಾತ್ರಕ್ಕೆ ಮಾಡಿ ಎಣ್ಣೆಗೆ ಹಾಕಿ. ಸರಿಯಾಗಿ ಹುರಿದ ಪಕೋಡವನ್ನು ಬಾಣಲೆಯಿಂದ ತೆಗೆಯಿರಿ. ಮಳೆಗಾಲಕ್ಕೆ ಬಿಸಿ ಬಿಸಿಯಾಗಿ ತಿನ್ನಲು ರುಚಿಕರ.