ನೀರ ನಿಶ್ಚಿಂತೆ - Behind the Scenes!!!

ನೀರ ನಿಶ್ಚಿಂತೆ - Behind the Scenes!!!

ಬರಹ

ನೀರ ನಿಶ್ಚಿಂತೆ - Behind the Scenes

ಶನಿವಾರ ಸಂಜೆ ಹರಿ ಫೋನ್ ಮಾಡಿದ. ಭಾನುವಾರದ ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆ ನನ್ನ ಕಾರಿನಲ್ಲಿ ಹೋಗುವ ನಿರ್ಧಾರ ಮಾಡಿದೆವು. ಭಾನುವಾರ ಬೆಳಿಗ್ಗೆ ಏಳು ಮೂವತ್ತಕ್ಕೆ ಹರಿಯ ಮನೆಯನ್ನು ತಲುಪುವೆನೆಂದು ಹರಿಗೆ ಹೇಳಿ ಫೋನ್ ಕಟ್ ಮಾಡಿದೆ. ನನ್ನ ಕಾರಿನಲ್ಲಿ ಹೋಗೋದೇನೋ ನಿರ್ಧಾರವಾಯ್ತು. ಆದರೆ ಕಾರನ್ನು ನೋಡಿದರೆ ಆರೀತಿ ಇರಲಿಲ್ಲ. :( ಕಾರಿನ ತುಂಬಾ ಧೂಳು ಮಯ. ಕೆಲವು ದಿನಗಳ ಹಿಂದೆ, ಮಳೆ ಬಂದ ಕಾರಣ ಕಾರು ಪೂರ್ತಿ ಗಬ್ಬಾಗಿತ್ತು. :( ಆದರೂ ಹರಿಗೆ ನನ್ನ ಕಾರಿನಲ್ಲಿ ಹೋಗೋಣವೆಂದು ಹೇಳಿದ್ದೆ.

ಇತ್ತ ಮನೆಯಲ್ಲಿ ದೈನಂದಿನ ಬಟ್ಟೆಗಳ ಜೊತೆಗೆ ಆಫೀಸಿಗೆ ಹಾಕಿಕೊಂದು ಹೋಗುವ ಬಟ್ಟೆಗಳನ್ನು ಕೂಡ ಅಮ್ಮ ಒಗೆದು ಕಪಾಟಿನಲ್ಲಿಟಿದ್ದರು. ಅವುಗಳನ್ನು ಇಸ್ತ್ರಿ ಮಾಡುವ ಕೆಲ್ಸ ಇದ್ದಿದ್ದರಿಂದ ಕಾರನ್ನು ರಾತ್ರಿ ತೊಳೆಯೋಣವೆಂದು ನಿರ್ಧರಿಸಿ ಇಸ್ತ್ರಿ ಮಾಡಲು ಅಣಿ ಮಾಡಿಕೊಂಡೆ. ಇಸ್ತ್ರಿ ಮಾಡಿಕೊಂಡ ನಂತರ ಉಳಿದಿದ್ದ ಕೆಲಸವೆಂದರೆ ಕಾರನ್ನು ತೊಳೆಯುವುದು. ಊಟ ಮಾಡಿ ಕಾರನ್ನು ತೊಳೆಯೋಣವೆಂದುಕೊಂಡು ಊಟ ಮಾಡುವವರೆಗೂ ಕಾದೆ. ಊತವಾದ ನಂತರ ಕೇಳಬೇಕೇ? ;) ನಿದ್ದೆ ಬರುವ ಹಾಗೆ ಆಯಿತು. ಆದರೂ ಕಾರನ್ನು ತೊಳೆಯಬೇಕೆಂದು ನಿರ್ಧಾರ ಮಾಡಿ ಒಂದು ಚಿಕ್ಕ ಬಕೆಟ್ ತೆಗೆದುಕೊಂಡು ಹೊರಗೆ ಬಂದೆ.

ಭಡ್ತಿ ಅವರ ನೀರು ನೆರಳು ಲೇಖನ ನೆನಪಾಯ್ತು. ಕಾರನ್ನು ತೊಳೆಯುವಾಗ ಒದ್ದೆ ಬಟ್ಟೆಯಿಂದ ಒರೆಸಿ ಅನ್ನುವ ವಾಕ್ಯ ನೆನಪಾಯ್ತು. :) ಒಂದು ಒರೆಸುವ ಬಟ್ಟೆಯನ್ನು ತೆಗೆದುಕೊಂದು ತೊಟ್ಟಿಯಿಂದ ನೀರು ತೆಗೆದೆ. ಬಟ್ಟೆಯನ್ನು ಅದ್ದಿ ಸ್ವಲ್ಪ ಹಿಂಡುಕೊಂದು ಕಾರನ್ನು ಒರೆಸೈದೆ. ಹದಿನೈದು ನಿಮಿಷಗಳಲ್ಲಿ ಕಾರು ಒರೆಸುವ ಕಾರ್ಯಕ್ರಮ ಮುಗಿಯಿತು. :)

ನಂತರ ಮೊಬೈಲಿನಲ್ಲಿ ಅಲಾರಮ್ ಸೆಟ್ ಭಾನುವಾರ ಬೆಳಿಗ್ಗೆ ಆರು ಘಂಟೆಗೆ ಸೆಟ್ ಮಾಡಿ ಮಲಗುವ ಹೊತ್ತಿಗೆ ಸಮಯ ರಾತ್ರಿ ೧೧ ಘಂಟೆ.

ಬೆಳಿಗ್ಗೆ ಆರು ಘಂಟೆಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸುವಷ್ಟರಲ್ಲಿ ಹರಿ ಮತ್ತೆ ಫೋನ್ ಮಾಡಿದ. ಅವನೊಂದಿಗೆ ಮಾತನಾಡಿ, ನಂತರ ಸ್ನಾನ ಮಾಡಿದೆ. ಅಮ್ಮ ಮಾಡಿಕೊಟ್ಟ ಹಾರ್ಲಿಕ್ಸ್ ಕುಡಿದು ದಿನಪತ್ರಿಕೆಯನ್ನು ಓದಿ ೭.೨೦ಕ್ಕೆ ಮನೆಯಿಂದ ಹೊರಟೆ. ಹರಿಯ ಮನೆ ತಲುಪುವ ಹೊತ್ತಿಗೆ ೭.೩೦ ಆಗಿತ್ತು.

ಸ್ವಲ್ಪ ಸಮಯದ ನಂತರ ಶಿವು, ವಸಂತ ಬಂದರು. ಮುರಳಿ ಸ್ವಲ್ಪ ತಡವಾಗಿ ಬಂದ.

ನಂತರ ೮.೩೦ಕ್ಕೆ ತುಮಕೂರಿನ ಕಡೆಗೆ ಪ್ರಯಾಣ ಬೆಳೆಸಿದೆವು. ಮಾಗಡಿ ರಸ್ತೆ ಮೂಲಕ ನೈಸ್ ರಸ್ತೆ ಮುಖಾಂತರ ರಾ.ಹೆ. ೪ ತಲುಪಿದೆವು. ಕಾರಿನಲ್ಲಿ ನಾವೆಲ್ಲಾ ಹರಟುತ್ತಾ ಇದ್ದಿದ್ದರಿಂದ ದಾರಿ ಸವೆದದ್ದೇ ಗೊತ್ತಾಗಲಿಲ್ಲ. ಅಲ್ಲಿಂದ ತಿಂಡಿ ತಿನ್ನಲು ಕಾಮತ್ ಹೊಟೆಲ್ಲಿನಲ್ಲಿ ಕಾರನ್ನು ನಿಲ್ಲಿಸಿದೆವು. ಇಡ್ಲಿ ವಡೆ ತಿಂದು, ಕಾಫಿ/ಚಹಾ ಕುಡಿದು ಮತ್ತೆ ತುಮಕೂರಿನಕಡೆಗೆ ಹೊರಟೆವು.

ನಾವು ನೀರ ನಿಶ್ಚಿಂತೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತಲುಪುವ ಹೊತ್ತಿಗೆ ಕಾರ್ಯಕ್ರಮ ಶುರುವಾಗಿತ್ತು.

ಕಾರ್ಯಕ್ರಮದ ಬಗ್ಗೆ ಹರಿ ಮತ್ತು ಮಲ್ಲಿಕಾರ್ಜುನ್ ಈಗಾಗಲೇ ಬರೆದಿದ್ದಾರೆ. :)

ಕಾರ್ಯಕ್ರಮ ಮುಗಿದ ಮೇಲೆ ಹೊಟೆಲ್ ಒಂದರಲ್ಲಿ ರಾಗಿ ಬಿಸ್ಕತ್ ತಿಂದು, ಚಹಾ ಕುಡಿದು, ಭೂಷಣ್ ಹಾಗೂ ಮಲ್ಲಿಕಾರ್ಜುನರನ್ನು ಬೀಳ್ಕೊಟ್ಟು ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು.

ತುಮಕೂರಿನ ಹೊರವಲಯಕ್ಕೆ ಬರುತ್ತಿದ್ದಂತೆ ಮಳೆ ಶುರುವಾಗಿತ್ತು. ನೆಲಮಂಗಲ ತಲುಪುತ್ತಿದ್ದಂತೆ ಕಾರಿನ ವೇಗ ಕಡಿಮೆ ಆಯಿತು (ಟ್ರ್ಯಾಫಿಕ್ ಹೆಚ್ಚಿದ್ದರಿಂದ). ನಂತರ ನೈಸ್ ರಸ್ತೆ ಮೂಲಕ ಮಾಗಡಿರಸ್ತೆಯನ್ನು ತಲುಪಿದೆವು. ತುಂಬಾ ಜೋರು ಮಳೆ.

ಹರಿಯ ಮನೆಗೆ ಬಂದಾಗ ಸಮಯ ರಾತ್ರಿ ಎಂಟು ಘಂಟೆ. ಹರಿಯ ಮನೆಯಲ್ಲಿ ಮೆಣಸಿನಕಾಯಿ ಬಜ್ಜಿ, ಕಲ್ಲಂಗಡಿ ಹಣ್ಣು ತಿಂದು ಮನೆಗೆ ಹೊರಟೆವು.

ಮುರಳಿ ನಮಗಿಂತ ಮುಂಚೆ ಮನೆಗೆ ಹೊರಟ. ನಂತರ ವಸಂತ, ಶಿವು ತಮ್ಮ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದ ಚಿತ್ರಗಳನ್ನು ಹರಿಯ ಸಿಸ್ಟಮ್ಮಿಗೆ ವರ್ಗಾಯಿಸಿದರು (ಚಿತ್ರಗಳನ್ನು ನೀವು ಈಗಾಗಲೇ ನೋಡಿರಬಹುದು).

ಆಮೇಲೆ ವಸಂತ, ಶಿವು ಮತ್ತು ನಾನು ಮನೆಗೆ ಹೊರಟೆವು.