ನೀರ ನೆಮ್ಮದಿಗಾಗಿ ನೀರ ಯೋಧರು.

ನೀರ ನೆಮ್ಮದಿಗಾಗಿ ನೀರ ಯೋಧರು.

ಬರಹ

ನೀವೀಗ ಕಾಣುತ್ತಿರುವ ಚಿತ್ರ ,ಮಧುಗಿರಿಯ ಐತಿಹಾಸಿಕ ಚೋಳೇನಹಳ್ಳಿ ಕೆರೆಯ ತಲಪರಿಗೆಯ ಹೂಳು ತೆಗೆಯುತ್ತಿರುವ ಚಿತ್ರ.ಪ್ರತಿ ಬಾರಿ ಕೆರೆ ತುಂಬಿದಾಗ ಅಪಾರ ಪ್ರಮಾಣದ ಹೂಳು ತಲಪರಿಗೆ ಕಾಲುವೆಯಲ್ಲಿ ತುಂಬಿಕೊಂಡು ಬೇಸಿಗೆಯಲ್ಲಿ ಹೆಫ್ಪುಗಟ್ಟುತ್ತದೆ.ಹೆಪ್ಪು ಕದಲದೇ ಇದ್ದರೆ ಒಳಗಿನ ನೀರಸೆಲೆ ಈಚೆ ಬರದು.ಇದೇ ತಲಪರಿಗೆಯ ನೀರ ಸೆಲೆಯ ಮೇಲೆ ಕೆರೆಯ ಕೆಳಗಿನ ತೋಟಗಳು ಅವಲಂಬಿಸಿರುವ ಕಾರಣ ಬೇಸಿಗೆಯಲ್ಲಿ ತಲಪರಿಗೆಯ ಹೂಳು ತೆಗೆಯುವುದು ಅನಿವಾರ್ಯ.ಸದರಿ ಕೆರೆಯಲ್ಲಿನ ತಲಪರಿಗೆಯ ನೀರಿನ ಹಕ್ಕು ಕೆರೆಯ ಕೆಳಗಿನ ಪಣ್ಣೆ ರೈತರಿಗೆ ಮಾತ್ರ ಸೀಮಿತವಾಗಿದೆ.
ತೋಟಗಳ ಮಾಲೀಕರ ಬಳಿ ಕೆಲಸ ಮಾಡುವ ರೈತರ ಗುಂಪು ಕೆರೆಯಲ್ಲಿ ನೀರಿಲ್ಲದಿದ್ದಾಗ
ಈ ನೀರ ಕಾಯಕಕ್ಕೆ ಕೈ ಹಾಕುತ್ತಾರೆ.ಬೆಳಗಿನ ನಸುಕಿನಲ್ಲೇ ಬಿಸಿಲೇರುವ ಮುನ್ನ ಕಾಲುವೆ ಕೆಲಸಕ್ಕೆ ಇಳಿಯುವ ಇವರು ಸೂರ್ಯ ನೆತ್ತಿಗೇರಿ ಬಿಸಿಲು ಬಲಿತಾಗ ಕೆಲಸ ನಿಲ್ಲಿಸಿ ಅಲ್ಲಿಯೇ ಸಾಮೂಹಿಕವಾಗಿ ಬುತ್ತಿ ತಿನ್ನುವ ಪರಿಪಾಟ ನಿಜಕ್ಕೂ ಇಣ್ದಿನ ದಿನಗಳಲ್ಲಿ ಅಪರೂಪವೇ ಸರಿ.ಇವರು ಕುಡಿಯುವ ನೀರ್ ತಲಪರಿಗೆ(ನೀರು ಕುಡಿಯುತ್ತಿರುವ ಚಿತ್ರವನ್ನು ಚಿತ್ರಪುಟದಲ್ಲಿ ಹಾಕಿದ್ದೇನೆ)
ಒಂದು ಕಡೆ ನೀರಿಗೆ ಇಂತಹ ಬವಣೆಯಿದ್ದರೆ,ಬಕೇಟ್ ಗಟ್ಟಲೆ ಅಜ್ನಾನಿಗಳಂತೆ ಶೌಚಕ್ಕೆ,ಸ್ನಾನಕ್ಕೆ ನೀರಿನ ಮೇಲೆ ದೌರ್ಜನ್ಯ ಮಾದೂವ ನಗರಿಗರಿಗೆ ಇಂತಹ ನೀರ್ಚಿಂತಕರು ಮಾದರಿಯಲ್ಲವೇ??????.......