ನೀಲಿ ಆಕಾಶದೊಟ್ಟಿಂಗೆ ( ಹವಿಗವನ)
ನೀಲಿ ಆಕಾಶಲ್ಲಿಂದು
ಹೊಳೆವ ನಕ್ಷತ್ರ ನೀನೆ
ತಾರೆಯ ಹಾಂಗೇ ಇಂದು
ಹತ್ತರೆ ಬಾಯೆನ್ನ ಕೂಸೆ
ಜೇನಿನ ಪರಿಮಳದಾಂಗೆ
ಸುತ್ತಲೂ ಹರಡಿರೆ ಹೇಂಗೆ
ನೀ ಹೀಂಗೆ ತಿರುಗುತ್ತಿದ್ದರೆ
ಆನೇಂಗೆ ತಡೆಯಲಿ ಕೂಸೆ
ಕಂಡರೆಯಿಂದೂ ಎನ್ನ
ನೋಡದ್ದೆ ತಿರುಗಿ ಓಡ್ತೆ
ಪ್ರೀತಿ ಹೇಳಿರೇಯೆಂತ
ಗೊಂತಿದ್ದ ನಿನಗೆ ಕೂಸೆ
ಪ್ರೇಮದಾ ಸವಿಯಿಲ್ಲೆನಗೆ
ಪ್ರೀತಿಯಾ ರುಚಿಯಿಲ್ಲೆನಗೆ
ಕೈಯ ಹಿಡ್ಕೊಂಡು ಹೋಪ
ಒಂದಾರಿ ಬಳಿ ಬಾ ಕೂಸೆ
ನೀನು ಮುಡ್ಕೊಂಡಾ ಹೂಗು
ನೋಡ್ತಿತ್ತು ಎನ್ನನ್ನೆ
ಅದರೊಳ ಸೇರಿದ ಕೂಡಲೆ
ಮತ್ತೀಲಿ ತೇಲಿದೆ ಕೂಸೆ
ಸಾಕಿನ್ನು ಹೊಗಳ್ವುದ ನಿಲ್ಸು
ಆನು ಬಂದೆ ನೋಡಿಲ್ಲಿ
ಕೊರಳಿಂಗೆ ತಾಳಿಯ ಕಟ್ಟು
ಒಟ್ಟಿಂಗೆ ಹೋಪ ಮಾಣಿ
***
ಗಝಲ್-೧
ಹುಟ್ಟುವುದೇ ಬದುಕಲೆಂದು ಗೆಳತಿ
ಸಾಯುವುದೇ ಜನಿಸಲೆಂದು ಗೆಳತಿ
ತೃಪ್ತಿಯಿರುವುದೇ ಬಾಳಲೆಂದು ಗೆಳತಿ
ಸಾಕ್ಷಿಯಿರುವುದೇ ನೆಲದಲೆಂದು ಗೆಳತಿ
ಮನವಿರುವುದೇ ಪಡೆಯಲೆಂದು ಗೆಳತಿ
ತನುವಿರುವುದೇ ಕೊಡಲೆಂದು ಗೆಳತಿ
ಚೆಲುವಿರುವುದೇ ಸವಿಯಲೆಂದು ಗೆಳತಿ
ಛಲವಿರುವುದೇ ಸಾಧಿಸಲೆಂದು ಗೆಳತಿ
ಈಶನಿರುವುದೇ ಬೆಸೆಯಲೆಂದು ಗೆಳತಿ
ಮನೆಯಿರುವುದೇ ವಾಸಿಸಲೆಂದು ಗೆಳತಿ
***
ಗಝಲ್-೨
ಮನವು ಹೊಳೆದು ಸವಿಯ ರೂಪ ಪಡೆದೆಯಿಂದು ಗೆಳತಿಯೆ
ತನುವಿನೊಳಗೆ ಪ್ರೀತಿಯುಕ್ಕಿ ನಲಿದೆಯಿಂದು ಗೆಳತಿಯೆ
ಕನಸನೊಡೆದು ಹಾಡ ಹೇಳಿ ಮುಂದೆ ಹೋಗಿ ಹಂಚಲು
ಚಿತ್ರ ಪಟದ ರೂಪದೆದುರು ನಿಂತೆಯಿಂದು ಗೆಳತಿಯೆ
ಜೀವದುಸಿರು ನೆಲದ ಮೇಲೆ ಕುಳಿತು ಮಾತು ಸಾಗಲು
ಬಿಟ್ಟು ಹೋದ ಮನೆಯ ಒಳಗೆ ಸೇಲೆಯಿಂದು ಗೆಳತಿಯೆ
ಮೌನ ಕಳೆದು ಹೋದ ಸಮಯ ಎಲ್ಲಿಯಿದ್ದೆ ಹೃದಯವೆ
ಮಾತು ಚಿಮ್ಮಿ ಪ್ರೀತಿಯನ್ನು ಸುರಿದೆಯಿಂದು ಗೆಳತಿಯೆ
ಹೊಸತು ಭಾವ ಹೊಮ್ಮಿದಾಗ ಕನಸು ಬಂತು ಈಶಾ
ಸ್ನೇಹ ಪುಟಿದ ರೀತಿಯೊಳಗೆ ಸವಿದೆಯಿಂದು ಗೆಳತಿಯೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ