ನೀಲ ಮತ್ತು ಚೆನ್ನಿ

ನೀಲ ಮತ್ತು ಚೆನ್ನಿ

ಕವನ

ನೀಲ ಗಗನದೊಳಗಿಂದ ಚಂದಿರನು

ಹಾಲ್ ಬೆಳದಿಂಗಳನು

ಸುರಿಸಿದನು ಕಡಲಿಗೆ !

ಕಡಲಾಯ್ತು ನೀಲಿಯದು

ಹೊಳೆ ಹೊಳೆವ ಜಲರಾಶಿ

ನಡುವೆ, ಹಾಲಿನಂದದ ನೆರಳು

ಕೊಡೆಯರಳಿದಂತರಳಿ

ಚೆಲುವನು ಸೂಸಿ,

ಮನ ತಣಿಸಿತು ತನು ಕುಣಿಯಿತು

 

ಸೊಬಗಿನಲಿ ನಲ್ಲೆಯೆನ್ನನು ತಬ್ಬುತ

ಸರಸವಾಡಿದಳು ನುಲಿದಳು

ಚಂದ್ರಲೋಕಕೆ ನಡೆದು

ಎಲ್ಲವನು ಪಡೆದು,

ಮನ್ಮಥನ ಚೆಲುವಿನೊಳು ಬೆರೆತು

ಸುಖಿಸಿದವಳಿವಳು ನನ್ನವಳು

ಒಲವಿನ ತಾರೆ ಚೆನ್ನಿಗಳು !!

***

ಗಝಲ್

 

ಹಣ್ಣುಗಳು ಸಿಹಿಯಾಗಿದ್ದರು ಒಳಗೆ ಹುಳಗಳೂ ಇರಬಹುದು ಗೆಳತಿ

ಕಣ್ಣುಗಳು ಸುಂದರವಾಗಿದ್ದರು ಸುತ್ತಲು ಕಲೆಗಳೂ ಮೂಡಬಹುದು ಗೆಳತಿ

 

ಓಡುತ್ತಲೇ ಅವನೊಮ್ಮೆ ಗಟ್ಟಿಯಾಗಿ ಅವಳನ್ನು ತಬ್ಬಿ ಹಿಡಿದ ಯಾಕೋ ಕಾಣೆ

ಮನದೆನ್ನೆಯ ಕಂಪಿನ ಸುವಾಸನೆಯ ಅಲೆಗಳೂ ಏಳಬಹುದು ಗೆಳತಿ

 

ಒಳ್ಳೆಯ ಮನುಷ್ಯರು ಬರುವವರೆಗೂ ಪ್ರೀತಿಯ ದಾರಿಯನ್ನು ಕಾಯೋಣ

ಕೆಟ್ಟವರ ಜಗತ್ತಿನಲ್ಲಿ ಕೆಲವೊಂದು ಚಿಗುರಿದ ಮರಗಳೂ ಕಾಣಬಹುದು ಗೆಳತಿ

 

ಹಸಿವು ಎಲ್ಲರಲ್ಲೂ ಇದೆ ಹಾಗೆಂದು ಯಾರೂ ಹೇಳಿಕೊಳ್ಳುವುದ ನಾನು ಕಾಣೆ

ಜೀವನದ ಸಂಜೆಯಲಿ ನಮ್ಮ ಜೊತೆಗೆ ಬೇರೆ ಆತ್ಮಗಳೂ ಇರಬಹುದು ಗೆಳತಿ

 

ಕವಿತೆಗೆ ಬಣ್ಣವನು ಕಟ್ಟಿ ಹಾಡಿದಂತೆ ನಮ್ಮ ಹೃದಯದೊಳಗೆ ಇಹನು ಈಶಾ

ಹಳತು ವಿಷಯಗಳ ಬದಿಗಿಟ್ಟು ಇಂದಲ್ಲ ನಾಳೆ ನನ್ನವಳೂ ಸೇರಬಹುದು ಗೆಳತಿ

 

-ಹಾ ಮ ಸತೀಶ, ಬೆಂಗಳೂರು

 

ಚಿತ್ರ್