ನೀವಿಬ್ಬರೂ ಒಂದೆ...!
ಕವನ
ಜಗಮಳ್ಳಿ, ಕಳ್ಳಿ, ನಿನ್ನ ಮೈ ಕೈ ಬಿಳಿ
ದುಂಡಗೆ ಸಣ್ಣಗೆ ನುಣ್ಣಗೆ, ಹಾಲು
ಗೋಣಿಗೆ ನನ್ನ ತುಟಿಯೆಂಜಲು
ದಿನ ಸವಿದೆ ಮೃದು ಅಧರ ಕಮಾಲು
ಹೊರ ಚಾಚಿದಗ್ನಿ ಹೊಳೆವ ಸೌಷ್ಠವಾಂಗ
ಒಳ ಇಣುಕಿದರೆ ಬರೀ ಇದ್ದಲು ಬೂದಿ
ಹೊಗೆ ಗೂಡಿಗೆ ಗೂರಲು ಕೆಮ್ಮು
ಕೆಮ್ಮಿ ಕೆಮ್ಮಿದರೆದೆನೋವು ಏನೋ ವ್ಯಾಧಿ!
ಮೊದ ಮೊದಲು ಮುಟ್ಟಲು ಹೆದರಿದ್ದೆ
ಜಗ್ಗಿತ್ತು ಕುಗ್ಗಿತ್ತು ದೇಹ ನಡುಗಿ
ಈಗೀಗ ನೀ ಸುಟ್ಟರೂ ನಿನ್ನದೇ ನೆನಪು
ಚಟವೋ ಹಠವೋ ತೊಲಗೆ ಬೆಡಗಿ!
ಮಳೆ ರೈಲುಕಂಬಿ ಕೊಳೆ ಗೋಡೆಯ
ನಕ್ಕಪ್ಪನ ಫೋಟೋ ಅಣಕಿಸಿತ್ತು
ಮುಟ್ಟಿ ಮೈ ಮಾಟಕ್ಕೆ ಬಣ್ಣಕ್ಕೆ ಸ್ಪರ್ಶಕ್ಕೆ
ತುಟಿ ಸುಟ್ಟುಕೊಳ್ಳಬೇಡ ಎನ್ನುತ್ತಿತ್ತು!
ಚಂದ್ರಾಂಬರವಣಕಿಸಲು ನಕ್ಷತ್ರ ನೆನಹು
ಸುಟ್ಟು ಸುಟ್ಟು ಮೂಲೆಗೆಸೆಯುತ್ತೇನೆ
ಧೂಮಪಾನ-ಮತ್ತು ನೀನು, ಇಬ್ಬರೂ
ಹಾನಿಕಾರಕವೆಂಬುದನ್ನೇ ಮರೆಯುತ್ತೇನೆ!
Comments
ಮೋಹನ ಕೊಳ್ಳೆಗಾಲ ರವರಿಗೆ
ಮೋಹನ ಕೊಳ್ಳೆಗಾಲ ರವರಿಗೆ ವಂದನೆಗಳು
" ನೀವಿಬ್ಬರೂ ಒಂದೇ..! " ಒಂದು ಸುಂದರ ಚತುಷ್ಪದಿಯ ರಚೆನೆ, ಭಾಷೆಯಲ್ಲಿ ಒಂದು ರೀತಿಯ ಹೊತನವಿದೆ, ಲಯವಿದೆ, ಸೊಗಸಾದ ಕವನ ಧನ್ಯವಾದಗಳು. .
ಧನ್ಯವಾದಗಳು...
ಧನ್ಯವಾದಗಳು...
ನೀವಿಬ್ಬರು ಒಂದೆ
ನೀವಿಬ್ಬರು ಒಂದೆ
ಸಿಗರೇಟಿನ ಬಗ್ಗೆಯೆ ಕವನ ಎಂದುಕೊಂಡೆ ಮುಗಿಸುವಾಗ ಕಡೆಯ ಸಾಲುಗಳಲ್ಲಿ ಪೂರ್ತಿ ಕವನಕ್ಕೆ ದುತ್ತನೆ ಮತ್ತೇನೊ ಆಯಾಮ ಸಿಕ್ಕಿಬಿಡುತ್ತಿದೆ
ಕವನ ಇಷ್ಟವಾಯಿತು
In reply to ನೀವಿಬ್ಬರು ಒಂದೆ by partha1059
ಧನ್ಯವಾದಗಳು...
ಧನ್ಯವಾದಗಳು...