ನೀವು ಕೇಳಿದಿರಿ - ೧ . ೪

ನೀವು ಕೇಳಿದಿರಿ - ೧ . ೪

ಬರಹ

*ಮಹಾಚುನಾವಣೆ ,ಈ ಬಾರಿ ಮಹಿಳೆಯರ ಕೈ ಅಲ್ಲಿ ಆಡಳಿತ .

-ಅಯ್ಯೋ ಬೆಪ್ಪೆ ಇದುವರೆಗೂ ಇದ್ದದ್ದು ಅವರ 'ಕೈ' ಅಲ್ಲೇ ಅಲ್ಲವೇ ?
++++
*ಜೈ ಹೋ ಅನ್ನಬೇಕೋ ಅಥ್ವಾ ಜಯ ಪೋ ಎನ್ನಬೇಕೋ ಎಂದು ಮೇ ೧೬ ನಂತರ ಹೇಳುತ್ತೇನೆ ಅಂದ್ರಂತೆ 'ಕಪಿ'ಲ್ ಸಿಬ್ಬಲ್ .

-ಆ 'ಕಪಿ'ಲ್ ಗೆನು ಗೊತ್ತು ನನ್ನ ತೂಕ ಅಂದ್ರಂತೆ ಜಯಕ್ಕ . ಹಿ ಹೀ :D :D
+++++
*ಅವರನ್ನ ಬಿಟ್ಟ ಇವರನ್ನ ಬಿಟ್ಟು ಅವ್ರ್ಯಾರು?

ಅವಲಕ್ಕಿ ಪವಲಕ್ಕಿ ಕಾನ್ಚಿಣಿ ಮಿಣಿ ಮಿಣಿ 'ಬಿಜಿಪಿ ' ಠುಸ್, ಯುಪಿಎ ಖುಷ್ . :D :D
+++++
*ಮನೆಯಿಂದ ಸೊಳ್ಳೆಗಳನ್ನು ದೂರವಿಡುವುದು ಹೇಗೆ ?

-ಸರಳ , ಅವುಗಳಿಗೊಂದು ಪ್ರತ್ಯೇಕ ಮನೆ ಕಟ್ಟಿಸಿಕೊಟ್ಟರಾಯಿತು. ಹಿ ಹೀ . :D D
+++++
*ಗಣೇಶ್ ಜೊತೆ 'ಇಲಿ'ಯಾನಾ !

-ಕ್ಷಮಿಸಿ ಮತ್ತೆ ತಪ್ಪು ಮುದ್ರಿಸಿದ್ದಾರೆ ಈ ಪತ್ರಿಕೆಯವರು ,ಅದು ಇಲಿ ಮೇಲೆ ಗಣೇಶನ ಆಗಮನ ಆಗಬೇಕಿತ್ತು ಅನ್ಸುತ್ತೆ .ಹಿ ಹೀ :D
++++
*ಬದಲಾಗಲಿದೆ ಬೆಬೋ ಲುಕ್ !

-ಕೃಷ್ಣಾ ನಾ ಇನ್ನು ನೋಡಲಾರೆ , ನಾ ಇನ್ನು ತಾಳಲಾರೆ ಅನ್ನುತ್ತಿರಬಹುದೇ ಸೈಫ್ .
++++
*ಉಪಾಂತ್ಯ ಪ್ರವೇಶಕ್ಕೆ ಇಂದೇ ಶುಭದಿನವೆಂದ ಧೋನಿ .

-ನಮ್ಮ ಕೋಡಿ ಮಠದ ಸ್ವಾಮಿಗಳನೊಮ್ಮೆ ಕೇಳಿದರೆ ಚೆನ್ನಾಗಿತ್ತೇನೋ .
++++
*ಇಂದೇ ದೇಶದ ಭವಿಷ್ಯ ಹೊರಬಿಳುವುದಂತೆ !

-ನಿನ್ನೆಯೇ ಹೇಳಿದೆನಲ್ಲ ಅದು 'ತ್ರಿ'ಶಂಕು ಎಂದು .
+++++