ನೀವು ನಂಬುವಿರಾ..............?
WD
ದೀರ್ಘಕಾಲದಿಂದ ಕೈನೋವಿನಿಂದ ಬಳಲುತ್ತಿದ್ದ ವಿಜಯ್ ಎಂಬಾತ ಇಲ್ಲಿಗೆ ಬಂದಿದ್ದಾನೆ. ಬಬಿತಾ ಬಗ್ಗೆ ಜನ ಹೇಳುತ್ತಿರುವುದನ್ನು ಕೇಳಿ ಆತ ಚಿಕಿತ್ಸೆಗಾಗಿ ಇಲ್ಲಿಗೆ ಬಂದಿದ್ದ. ಇಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಕೈನೋವು ಸಾಕಷ್ಟು ಗುಣ ಕಂಡಿದೆ ಎನ್ನುತ್ತಾನೆ ವಿಜಯ್. ಆ ಪ್ರತಿದಿನ ಕೈ ಮಸಾಜಿಗೋಸ್ಕರ ಇಲ್ಲಿ ಬರುತ್ತಿದ್ದಾನೆ.
ಮನಾಸಾ ನಿವಾಸಿಯೇ ಆಗಿರುವ ಸಂತೋಷ್ ಪ್ರಜಾಪತ್ ಎಂಬಾತನಿಗೆ ದೇಹ ಕಿವುಚುವಷ್ಟು ಬೆನ್ನು ನೋವು. ಇದೀಗ ಆತನೂ ಇಲ್ಲಿಗೆ ಚಿಕಿತ್ಸೆಗಾಗಿ ಬರುತ್ತಿದ್ದಾನೆ. ಬಬಿತಾ ನೀಡುತ್ತಿರುವ ಮಸಾಜು ಚಿಕಿತ್ಸೆಯಿಂದ ನೋವು ಶಮನವಾಗುತ್ತಿದೆ ಎನ್ನುತ್ತಾನೆ ಆತ. ಮಸಾಜಿಗೋಸ್ಕರ ಸಮೀಪದ ಸ್ಥಳಗಳಿಂದಲೂ ಜನರು ಇಲ್ಲಿಗೆ ಬರುತ್ತಿದ್ದಾರೆ.
ಬಬಿತಾಗೆ ಈ ಹಿಂದೆ ತಾನು ಇದ್ದಲ್ಲಿಂದ ಏಳುವುದು ಸಾಧ್ಯವಿರಲಿಲ್ಲ ಎಂದು ನೆನಪಿಸಿಕೊಂಡಿದ್ದಾಳೆ ಸ್ಥಳೀಯ ಮಹಿಳೆಯೊಬ್ಬಳು. ಆದರೆ, ಬಾಬಾ ರಾಮದೇವ್ ಕನಸಿನಲ್ಲಿ ಕಾಣಿಸಿಕೊಂಡಂದಿನಿಂದ ಆಕೆ ಎದ್ದು ನಡೆದಾಡುತ್ತಿದ್ದಾಳಂತೆ.
ಈಗ ಆಕೆ ಪಾತ್ರೆ ತೊಳೆಯುವುದು, ಗೋಧಿ ಕ್ಲೀನ್ ಮಾಡುವುದು, ಗುಡಿಸುವುದು... ಹೀಗೆ ಎಲ್ಲವನ್ನೂ ಮಾಡುತ್ತಾಳೆ. ಇದೊಂದು ಪವಾಡವೇ ಸರಿ. ಈ ಪವಾಡದ ಕನಸಿನ ನಂತರ ಗ್ರಾಮದ ಜನರು ಆಕೆಯ ಬಳಿ ಚಿಕಿತ್ಸೆಗಾಗಿ ಆಗಮಿಸಲಾರಂಭಿಸಿದರು.
ನಮ್ಮ ಗುರಿ ಸಾಧಿಸುವಲ್ಲಿ ಕನಸುಗಳು ಸ್ಫೂರ್ತಿ ನೀಡುತ್ತವೆ ಎಂದು ಹೇಳಲಾಗುತ್ತದೆ. ಆದರೆ ಬಬಿತಾಳ ಕನಸು ಆಕೆಯ ಜೀವನವನ್ನೂ ಸಂಪೂರ್ಣವಾಗಿ ಬದಲಿಸಿಬಿಟ್ಟಿದೆ. ಬಬಿ ತಾ ರೂಪದಲ್ಲಿ ಸತ್ಯ ನಿಮ್ಮೆದುರಿಗಿದೆ. ನಂಬುವುದು ಅಸಾಧ್ಯವಲ್ಲವೇ? ಇದು ಕೇವಲ ಭ್ರಮೆಯೇ, ಅಂಧವಿಶ್ವಾಸವೇ ಅಥವಾ ಭಕ್ತಿಯ ಪ್ರತೀಕವೇ? ನೀವೇನಂತೀರಿ ?