ನೀವು ಬರೆದದ್ದು ಸಾಕಿನ್ನು..
ಕವನ
ನೆತ್ತರಲಿ ಬರೆದು
ರೂಡಿಯನು ಪದದಲ್ಲಿ ಹಿಡಿದು
ಎಸೆದಿದ್ದು ಸಾಕಿನ್ನು ನೆಮ್ಮದಿಗೆ ಕಲ್ಲು,
ಕಲ್ಪನೆಯೆ ಸಿಹಿಯಾಗಿತ್ತು,
ಕನಸುಗಳೆ ರುಚಿಸಿತ್ತು,
ವಾಸ್ತವಕೆ ಎಳೆತಂದು
ಅನಾಥರಾಗಿ ಮಾಡಿದಿರಿ
ನೀವು ಬರೆದದ್ದು ಸಾಕು..
ಹಸಿದ ಹೊಟ್ಟೆ, ಹಗಲುಗನಸು
ಹಗಲಿಗೊಂದು ಮುಖ, ರಾತ್ರಿಗೊಂದು
ಹಸಿವಿತ್ತು, ಸಿಟ್ಟಿತ್ತು,
ಅವರಂತೆ ನಾವಿರುವ ಆಸೆ ಇತ್ತು..
ಜೀವ ದೇವರಾಟ ಎನುವ ಮಾತಿತ್ತು,
ಮತ್ತದರ ನಂಬುಗೆಯ ಒಲವಿತ್ತು..
ಅದರಲೆ ದಿನ ಉರುಳಿ ಹೋಗುತ್ತಿತ್ತು..
ವಾಸ್ತವಕೆ ಎಳೆ ತಂದು
ಅನಾಥರಾಗಿ ಮಾಡಿದಿರಿ
ನೀವು ಬರೆದದ್ದು ಸಾಕಿನ್ನು..
ಶಿವಪ್ರಸಾದ್ ಎಸ್.ಪಿ.ಎಸ್
Comments
ಉ: ನೀವು ಬರೆದದ್ದು ಸಾಕಿನ್ನು..
In reply to ಉ: ನೀವು ಬರೆದದ್ದು ಸಾಕಿನ್ನು.. by spsshivaprasad
ಉ: ನೀವು ಬರೆದದ್ದು ಸಾಕಿನ್ನು..
In reply to ಉ: ನೀವು ಬರೆದದ್ದು ಸಾಕಿನ್ನು.. by venkatb83
ಉ: ನೀವು ಬರೆದದ್ದು ಸಾಕಿನ್ನು..