ನೀವು ಸೇವಿಸುವ ಉಪ್ಪುಗಳಲ್ಲಿ ಪ್ಲಾಸ್ಟಿಕ್ ಇದೆಯೇ? (ಭಾಗ 1)

ನೀವು ಸೇವಿಸುವ ಉಪ್ಪುಗಳಲ್ಲಿ ಪ್ಲಾಸ್ಟಿಕ್ ಇದೆಯೇ? (ಭಾಗ 1)

ಈಗ ಕೇವಲ ಉಪ್ಪಿನ ಸೇವನೆಯಿಂದಲೇ ಹೃದಯಘಾತ, ಕ್ಯಾನ್ಸರ್ ನಂತಹ ಮರಣಾಂತಿಕ ಕಾಯಿಲೆಗಳು ಸಂಭವಿಸಿದರೆ ವ್ಯಕ್ತಿ ಎಲ್ಲಿಗೆ ಹೋಗಬೇಕು? ನಮ್ಮ ದೇಶದ ಮಾರುಕಟ್ಟೆಗಳಲ್ಲಿ ದೊರೆಯುವ ಉಪ್ಪುಗಳ ಅನೇಕ ಬ್ರಾಂಡ್ ಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಗಳ ಅಂಶಗಳು ಪಟ್ಟೆಯಾಗಿವೆ. ಪರಿಸರದ ಕಾಳಜಿ ವಹಿಸುವ 'ಟಾಕ್ಸಿಕ್ ಲಿಂಕ್' ನಾಮದಲ್ಲಿ ಸಂಸ್ಥೆಯೊಂದು ನಡೆಸಿದ ಅಧ್ಯಯನವೊಂದರಲ್ಲಿ ಉಪ್ಪು ಮತ್ತು ಸಕ್ಕರೆಗಳಲ್ಲಿ ಪ್ಲಾಸ್ಟಿಕ್ ನ ಸೂಕ್ಷ್ಮ ಕಣಗಳು ಪತ್ತೆಯಾಗಿವೆ ಎಂದು ವರದಿ ಬಂದಿದೆ. ಈ ಸಂಸ್ಥೆಯು ಮಾರುಕಟ್ಟೆಗಳಿಂದ ಹಲವು ಬ್ರಾಂಡ್ ಗಳ ಸಕ್ಕರೆ ಮತ್ತು ಉಪ್ಪುಗಳ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷಿಸಿತು; ಅವುಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಗಳ ಅಂಶಗಳು ಪತ್ತೆಯಾಗಿವೆ.

ಇಂತಹ ಉಪ್ಪು ಅಥವಾ ಸಕ್ಕರೆಯನ್ನು ನೀವು ಸೇವಿಸಿದರೆ ಮರಣಾಂತಿಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಈ ಅಧ್ಯಯನದಲ್ಲಿ ಹತ್ತು ಬಗೆಯ ಉಪ್ಪುಗಳನ್ನು ಪರೀಕ್ಷಿಸಲಾಗಿತ್ತು; ಅವುಗಳಲ್ಲಿ ಟೇಬಲ್ ಉಪ್ಪು, ಕಲ್ಲು ಉಪ್ಪು, ಸಮುದ್ರದ ಉಪ್ಪು, ಸ್ಥಳೀಯ ಕಚ್ಚಾ ಉಪ್ಪು ಒಳಗೊಂಡಿತ್ತು. ಈ ಉಪ್ಪುಗಳ ಮಾದರಿಗಳನ್ನು ಮಾರುಕಟ್ಟೆ ಹಾಗು ಆನ್ಲೈನ್ ಮೂಲಕ ಖರೀದಿಸಲಾಗಿತ್ತು. ಎರಡು ಬಗೆಯ ಉಪ್ಪು ಹಾಗು ಒಂದು ಬಗೆಯ ಸಕ್ಕರೆಯ ಮಾದರಿಯನ್ನು ಹೊರತುಪಡಿಸಿದರೆ, ಉಳಿದೆಲ್ಲವೂ ಬ್ರಾಂಡೆಡ್ ಗಳಾಗಿದ್ದವು. ಈ ಎಲ್ಲಾ ಉಪ್ಪು ಮತ್ತು ಸಕ್ಕರೆಯ ಮಾದರಿಗಳಲ್ಲಿ ವಿವಿಧ ಬಗೆಯ ಫೈಬರ್ ಗಳ ಅಂಶಗಳು ಪತ್ತೆಯಾದವು.

ಈ ಮೈಕ್ರೋ ಪ್ಲಾಸ್ಟಿಕ್ ಗಳ ಗಾತ್ರವು ಒಂದು ಮೈಕ್ರೋಕೋನ್ ದಿಂದ 5 ಮಿಮಿ ವರೆಗೆ ಕಂಡು ಬಂದವು. ಉಪ್ಪು ಮತ್ತು ಸಕ್ಕರೆಗಳ ರೂಪದಲ್ಲಿ ನೀವು ಪ್ಲಾಸ್ಟಿಕ್ ಅನ್ನು ಸೇವಿಸುತ್ತಿದ್ದಾರೆ. ಇದರ ಕುರಿತು ಸಂಸ್ಥೆ: *'ಟಾಕ್ಸಿಕ್ ಲಿಂಕ್'* ನ ಸಹಾಯಕ ನಿರ್ದೇಶಕರು ಸತೀಶ್ ಸಿನ್ಹ ಅವರು, "ನಮ್ಮ ಅಧ್ಯಯನದಲ್ಲಿ ಎಲ್ಲಾ ಮಾದರಿಯ ಉಪ್ಪು ಮತ್ತು ಸಕ್ಕರೆಗಳ ಮಾದರಿಗಳಲ್ಲಿ ಬಹಳ ಪ್ರಮಾಣದಲ್ಲಿ ಮೈಕ್ರೋಪ್ಲಾಸ್ಟಿಕ್ ಪತ್ತೆಯಾಗಿರುವುದು ಆತಂಕಕಾರಿಯಾಗಿದೆ ಮತ್ತು ಮನುಷ್ಯನ ಆರೋಗ್ಯದ ಮೇಲೆ ಮೈಕ್ರೋ ಪ್ಲಾಸ್ಟಿಕ್ ನ ದೀರ್ಘಕಾಲಿನ ಪರಿಣಾಮಗಳ ಕುರಿತು ತಕ್ಷಣ ಸಮಗ್ರ ಸಂಶೋಧನೆಯ ಅವಶ್ಯಕತೆಯಿದೆ" ಎಂದು ಹೇಳಿದರು.

ಮೈಕ್ರೋ ಪ್ಲಾಸ್ಟಿಕ್ ಎಂದರೇನು?: ಪ್ಲಾಸ್ಟಿಕ್ ನ ಸೂಕ್ಷ್ಮವಾದ ಕಣಗಳನ್ನು ಮೈಕ್ರೋ ಪ್ಲಾಸ್ಟಿಕ್ ಎಂದು ಕರೆಯುತ್ತಾರೆ. ಅವುಗಳ ಗಾತ್ರವು 5 ಮಿಲಿಮೀಟರ್ ಗಳಿಂದ 1 ಮೈಕ್ರೋ ಮೀಟರ್ ವರೆಗೆ ಇರುತ್ತದೆ. 1000 ಮೈಕ್ರೋಮೀಟರ್ ಅಂದರೆ 1 ಮಿಲಿಮೀಟರ್ ಆಗುತ್ತದೆ. ಇದರಿಂದ ಅವುಗಳ ಗಾತ್ರವನ್ನು ನೀವು ಊಹಿಸಬಹುದು. ಭಾರತದಲ್ಲಿ ಉತ್ಪಾದಿಸಲಾಗುವ ಉತ್ಪನ್ನಗಳಲ್ಲಿ ಇಂತಹ ರಾಸಾಯನಿಕಗಳು ಏಕೆ ಕಂಡು ಬರುತ್ತಿವೆ? ಟಾಕ್ಸಿಕ್ ಲಿಂಕ್ ನ ವರದಿಯಲ್ಲಿ ನಮ್ಮ ಶರೀರದ ವಿವಿಧ ಅಂಗಗಳಾದ ಕೂದಲು, ಎಂಜಲು, ಶ್ವಾಸಕೋಶಗಳು, ಮೂತ್ರಪಿಂಡಗಳು ಇತ್ಯಾದಿಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಣಗಳು ಕಂಡುಬಂದವು; ಇದರೊಂದಿಗೆ ಎದೆ ಹಾಲು, ನವಜಾತ ಶಿಶುಗಳು, ರಕ್ತ, ಮತ್ತು ವೀರ್ಯಗಳ ಮಾದರಿಗಳಲ್ಲಿ ಕಂಡುಬಂದವು.

ನಮ್ಮ ದೇಹದಲ್ಲಿ ಈ ಪ್ಲಾಸ್ಟಿಕ್ ಕಣಗಳು ಮೂರು ವಿಧಗಳಿಂದ ಪ್ರವೇಶಿಸಬಹುದು; ನುಂಗುವ ಮೂಲಕ, ಉಸಿರಾಡುವ ಮೂಲಕ, ಮತ್ತು ಚರ್ಮದ ಸಂಪರ್ಕದಿಂದ ಇವುಗಳು ನಮ್ಮ ದೇಹದಲ್ಲಿ ಪ್ರವೇಶಿಸಬಹುದು. ಈ ವರದಿಯಲ್ಲಿ ಸಮಗ್ರ ಮಾಹಿತಿಯನ್ನು ಯಾವ ಆಧಾರದ ಮೇಲೆ ವೈಜ್ಞಾನಿಕ ಸಂಶೋಧನೆಯನ್ನು ಮಾಡಲಾಗಿತ್ತು ಎಂದು ಸುವಿವರವಾಗಿ ನೀಡಲಾಗಿದೆ. ಫಲಿತಾಂಶವನ್ನು ಬಹಳ ಸರಳವಾಗಿ ಪ್ರಕಟಸಲಾಗಿದೆ. ಇದನ್ನು ಎಲ್ಲರು ನೋಡಬಹುದು ಮತ್ತು ಅರ್ಥೈಸಿಕೊಳ್ಳಬಹುದು; ಇನ್ನೂ ಸಂಶೋಧನೆ ಮುಂದುವರಿದರೆ, ಫಲಿತಾಂಶದಲ್ಲಿ ಬದಲಾವಣೆ ಬರಬಹುದು.

ವಿಜ್ಞಾನವು ಎಲ್ಲಾ ರೀತಿಯ ಅನಗತ್ಯ ತಾರತಮ್ಯಗಳಿಂದ ಮುಕ್ತವಾಗಿದೆ. ಈ ಸಂಶೋಧನೆಯ ಫಲಿತಾಂಶವನ್ನು ಪ್ರಕಟಿಸುವ ಮುಂಚೆಯೇ ಈ ಅಧ್ಯಯನದ ನ್ಯೂನತೆಗಳನ್ನು ಪ್ರಕಟಿಸಲಾಗಿತ್ತು; ಇದು ಸಹ ವೈಜ್ಞಾನಿಕ ಸಂಶೋಧನೆಯ ಭಾಗವಾಗಿದೆ. ಕೇವಲ 15 ಮಾದರಿಗಳ ಸಂಶೋಧನೆ ಬಹಳ ಕಡಿಮೆಯಾಗಿದೆ; ಈ ಕೊರತೆಯನ್ನು ಹೋಗಲಾಡಿಸಲು ಭವಿಷ್ಯದಲ್ಲಿ ಇನ್ನೂ ಅಧ್ಯಯನಗಳು ನಡೆಯಬಹುದು. 1 ಕೆಜಿ ಉಪ್ಪಿನಲ್ಲಿ 6ರಿಂದ 90 ಕಣಗಳು ಪತ್ತೆಯಾಗಿದ್ದವು; ಅದರಲ್ಲಿ ಗರಿಷ್ಟ ಮಟ್ಟದ 90 ಕಣಗಳು ಅಯೊಡಿನ ಹೊಂದಿರುವ ಉಪ್ಪಿನಲ್ಲಿ ಪತ್ತೆಯಾಗಿವೆ. ವರದಿಯ ಪ್ರಕಾರ ಹೆಚ್ಚು ಸಂಸ್ಕರಿಸಿದ ಉಪ್ಪುಗಳ ಮಾದರಿಯಲ್ಲಿ ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ.

ಉಪ್ಪು ಅಥವಾ ಸಕ್ಕರೆಯಲ್ಲಿ ಪ್ಲಾಸ್ಟಿಕ್ ಕಣಗಳು ಹೇಗೆ ಪ್ರವೇಶಿಸಿದವು?: ಹಸಿ ಉಪ್ಪು ಅಥವಾ ಕಲ್ಲು ಉಪ್ಪುಗಿಂತಲೂ ಅಯೊಡಿನ ಉಪ್ಪು ಹೆಚ್ಚು ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಅಯೋಡಿಕರಿಸುವಾಗ ಉಪ್ಪು ಅನೇಕ ರೀತಿಯ ಯಂತ್ರಗಳ ಮತ್ತು ಸಲಕರಣೆಗಳ ಸಂಪರ್ಕದಲ್ಲಿ ಬರುತ್ತವೆ. ಆಗ ಮೈಕ್ರೋ ಪ್ಲಾಸ್ಟಿಕ್ ಕಣಗಳು ಉಪ್ಪಿನ ಭಾಗವಾಗುತ್ತದೆ. ನಂತರ, ಈ ಉಪ್ಪುವನ್ನು ಪ್ಲಾಸ್ಟಿಸ್ ಪ್ಯಾಕೆಟ್ ಗಳಲ್ಲಿ ಹಲವು ತಿಂಗಳುಗಳ ಕಾಲ ಶೇಖರಿಸಲಾಗುತ್ತದೆ. ಇದರಿಂದಲೂ ಪ್ಲಾಸ್ಟಿಕ್ ಕಣಗಳು ಉಪ್ಪು ಸಕ್ಕರೆಯಲ್ಲಿ ಸೇರಿಕೊಳ್ಳುತ್ತವೆ.

ವರದಿಯ ಪ್ರಕಾರ ಪ್ಲಾಸ್ಟಿಕ್ ಕಣಗಳು ಗಾತ್ರದಲ್ಲಿ ಚಿಕ್ಕದಾಗಿದಷ್ಟು ಅವುಗಳು ನಮ್ಮ ದೇಹದಲ್ಲಿ ಪ್ರವೇಶಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ, ಅವುಗಳು ನಮಗೆ ಹಾನಿಕಾರಕವಾಗುವ ಸಾಧ್ಯತೆಗಳಿವೆ. ಈ ದಿನಗಳಲ್ಲಿ ಸಮುದ್ರದ ಉಪ್ಪು ಸಹ ಜನಪ್ರಿಯವಾಗಲು ಪ್ರಾರಂಭಿಸಿದೆ. ಅದರಲ್ಲೂ, ಮೈಕ್ರೋ ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ.

ಈ ನೀವು ಉಪ್ಪು ಮತ್ತು ಸಕ್ಕರೆಯನ್ನು ಶುದ್ಧ ರೂಪದಲ್ಲಿ ಸೇವಿಸಲು ಸಾಧ್ಯವಾಗದಿದ್ದರೆ, ನಿಮ್ಮ ಅರೋಗ್ಯ ಅಪಾಯದಲ್ಲಿದೆ. ಸೀಮಿತ ಪ್ರಮಾಣದಲ್ಲಿ ಆದರೂ ಸರಿ, ನಾವು ಉಪ್ಪುವನ್ನು ಬಳಸುತ್ತೇವೆ. ಹಾಗಾಗಿ, ಅನೇಕ ಬಾರಿ ನಾವು ಎಷ್ಟೇ ಜಾಗರೂಕತೆ ವಹಿಸಿದರೂ, ನಮಗೆ ಕಾಯಿಲೆಗಳು ಎದುರಾಗುತ್ತವೆ. ಇದೇ ಕಾರಣ 'ಕ್ಯಾನ್ಸರ್' ಬಹಳ ವೇಗದಲ್ಲಿ ಹರಡುತ್ತಿದೆ. ಹಾಗಾಗಿ, ಇಂತಹ ಬೆಚ್ಚಿ ಬೀಳಿಸುವ ವರದಿಗಳನ್ನು ನಾವು ಲಘುವಾಗಿ ಪರಿಗಣಿಸಬಾರದು.

(ಇನ್ನೂ ಇದೆ)

-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ