ನೀವು ಸೇವಿಸುವ ಉಪ್ಪುಗಳಲ್ಲಿ ಪ್ಲಾಸ್ಟಿಕ್ ಇದೆಯೇ? (ಭಾಗ 2)
ಜೂನ್ 2024ರಲ್ಲಿ ದೈನಿಕ್ ಭಾಸ್ಕರ್, ನಮ್ಮ ದೇಶದಲ್ಲಿ 2.6 ಕೋಟಿ ಕ್ಯಾನ್ಸರ್ ರೋಗಿಗಳಿದ್ದಾರೆ ಎಂದು ವರದಿ ಮಾಡಿತ್ತು. 2025ರ ವೇಳೆಗೆ ಈ ಸಂಖ್ಯೆಯು ಮೂರು ಕೊಟಿ ಆಗಬಹುದು. 'ಕ್ಯಾನ್ಸರ್' ವಿಷಯದಲ್ಲಿ ಭಾರತ ದೇಶವು ಕೇವಲ ಚೀನಾ ಮತ್ತು ಅಮೇರಿಕಾದ ಹಿಂದೆ ಇದೆ. ಸುಮಾರು 15 ಲಕ್ಷದಷ್ಟು ಹೊಸ ಕ್ಯಾನ್ಸರ್ ರೋಗಿಗಳು ಹೊರಹೊಮ್ಮುತ್ತಿದ್ದಾರೆ 2023ರಲ್ಲಿ ಭಾರತದಲ್ಲಿ ಕ್ಯಾನ್ಸರ್ ನಿಂದ 9.16ಲಕ್ಷ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡರು. 90% ಪ್ರಕಾರಣಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕೊನೆಯ ಹಂತದಲ್ಲಿ ಪತ್ತೆಯಾಗಿತ್ತು. ಆದರೆ, ಸ್ಥನದ ಕ್ಯಾನ್ಸರ್ 50% ಪ್ರಕರಣಗಳಲ್ಲಿ ಕಂಡುಬಂತು. 70% ರಷ್ಟು ಬಾಯಿಯ ಕ್ಯಾನ್ಸರ್ ಸಾಮಾನ್ಯವಾಗಿ ಪ್ರಾರಂಭದ ಹಂತದಲ್ಲೇ ಪತ್ತೆಯಾಗುತ್ತದೆ. ಇವುಗಳಲ್ಲಿ 80% ಪ್ರಕರಣಗಳಲ್ಲಿ ರೋಗಿಗಳಿಗೆ ವಿಳಂಬದ ಕಾರಣ ಚಿಕಿತ್ಸೆ ಪಡೆಯಲು ಕಷ್ಟಕರವಾಯಿತು.
ಈ ವರ್ಷ ಇರೋಪಿಯನ್ ಯೂನಿಯನ್ ನ ದೇಶಗಳಲ್ಲಿ ಭಾರತೀಯ 527 ಉತ್ಪನ್ನಗಳನ್ನು ನಿಷೇಧಿಸಲಾಗಿತ್ತು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿತ್ತು. 2019ರಿಂದ 24ವರೆಗೆ ಭಾರತೀಯ 400 ಉತ್ಪನ್ನಗಳು ನಿಷೇಧಿಸಲಾಗಿದೆ. ಆಯುರ್ವೇದದ ಔಷಧಗಳಿಂದ ಅರಿಶಿನ ಪುಡಿಯವರೆಗೆ 14 ಉತ್ಪನ್ನಗಳು ಆರೋಗ್ಯಕ್ಕೆ ಅಸುರಕ್ಷಿತವೆಂದು ನಿಷೇಧಿಸಲಾಗಿದೆ. ಆ ಉತ್ಪನ್ನಗಳಿಂದ ಮೂತ್ರಪಿಂಡಗಳು, ನರಮಂಡಲ, ಮತ್ತು ಮೆದುಳುಗಳಿಗೆ ಹಾನಿಯಾಗುವ ಸಾಧ್ಯತೆಗಳಿದ್ದವು.
ವಿದೇಶಗಳಲ್ಲಿ ಇಂತಹ ಅಪಾಯಕಾರಿ ಆಹಾರ ಪದಾರ್ಥಗಳು ನಿಷೇಧಿಸಲಾಗಿದೆ; ಆದರೆ, ಭಾರತದಲ್ಲಿ ಇಂತಹ ಆಹಾರ ಪದಾರ್ಥಗಳು ಯಾವುದೇ ನಿರ್ಬಂಧವಿಲ್ಲದೆ ಲಭ್ಯವಿದೆ. 140 ಕೋಟಿ ಜನಸಾಮಾನ್ಯರು ಇದನ್ನು ಸೇವಿಸುತ್ತಿದ್ದಾರೆ. ಭಾರತದಲ್ಲೂ ತನೀಖಾ ವ್ಯವಸ್ಥೆ ಇದೆ. ಆದರೆ, ಅದು ಪರಿಣಾಮಕಾರಿಯಲ್ಲ. ಹಾಗಾಗಿ, ಇಂತಹ ಹಾನಿಕಾರಕ ಉತ್ಪನ್ನಗಳು ನಮ್ಮ ಆಹಾರದ ಭಾಗವಾಗುತ್ತಿದೆ. ಹಾಂಗ್ ಕಾಂಗ್, ಸಿಂಗಾಪುರ್, ಮತ್ತು ನೇಪಾಳ ನಂತಹ ದೇಶಗಳಲ್ಲಿ ನಮ್ಮ ದೇಶದ ಮಸಾಲೆ ಪದಾರ್ಥಗಳನ್ನು ನಿಷಧಿಸಲಾಗಿತ್ತು. ಹಾಂಗ್ ಕಾಂಗ್ ಮತ್ತು ಸಿಂಗಾಪುರ್ ನಮ್ಮ ದೇಶದ ಎರಡು ಖ್ಯಾತ ಕಂಪೆನಿಗಳ ಮಸಾಲೆ ಪದಾರ್ಥಗಳನ್ನು ಪರೀಕ್ಷಿಸಿ, ಅವುಗಳಲ್ಲಿ ಇಥೈಲ್ ಆಕ್ಸಿಡ್ ಕಂಡಿದಾಗ, ಅವುಗಳನ್ನು ನಿಷೇಧಿಸಿತು. ಅವುಗಳಿಂದ ಕ್ಯಾನ್ಸರ್ ಆಗುವ ಸಾಧ್ಯತೆಗಳಿದ್ದವು. ವಾಸ್ತವವಾಗಿ, ಎಥಲಿನ ಆಕ್ಸೈಡ್ ಅನ್ನು ಮಾರಣಾಂತಿಕ ಕೀಟನಾಶಕ ಎಂದು ಪರಿಗಣಿಸಲಾಗಿದೆ. National Institute of America ಪ್ರಕಾರ ಕೊಣೆಯ ಉಷ್ಣಾಂಶದಲ್ಲಿ ಎಥಿಲಿನ್ ಆಕ್ಸೈಡ್ ಸಿಹಿ ವಾಸನೆಯುಳ್ಳ ಬಣ್ಣವಿಲ್ಲದ ಗ್ಯಾಸ್ ಆಗಿದೆ. ಇದನ್ನು ಮುಖ್ಯವಾಗಿ ಇತರ ರಾಸಾಯನಿಕಗಳ ಸಂಯೋಜನೆಯಲ್ಲಿ ಬಳಸಲಾಗುತ್ತದೆ. ಹಾಗೆಯೇ, ಕೀತನಾಶಕಗಳಲ್ಲೂ ಇದರ ಉಪಯೋಗ ಮಾಡಲಾಗುತ್ತದೆ. ಇದನ್ನು ಬಟ್ಟೆ, ಡಿಟರ್ಜನ್ಟ್, ಔಷಧ, ಅಂಟುಗಳ ಪದಾರ್ಥಗಳನ್ನು ತಯಾರಿಸುವಲ್ಲಿ ಬಳಸಲಾಗುತ್ತದೆ.
International Agency for Research on Cancer ಪ್ರಕಾರ ಎಥಿಲಿನ್ ಆಕ್ಸೈಡ್ ಅನ್ನು group 01 ಕಾರ್ಸಿನೋಜನ್ ಎಂದು ವರ್ಗಿಕರಿಸಲಾಗಿದೆ. ಅಂದರೆ ಈ ಅಂಶವು ಮಾನವ ದೇಹದಲ್ಲಿ ಕ್ಯಾನ್ಸರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ದೀರ್ಘಾವಧಿ ಕಾಲದ ವರೆಗೆ ರಾಸಾಯನಿಕಗಳ ಸಂಪರ್ಕಕ್ಕೆ ಬರುವವರ ಕಣ್ಣುಗಳು, ಮೂಗು, ಚರ್ಮ, ಗಂಟಲು, ಶ್ವಾಸಕೋಶದಲ್ಲಿ ಕೇರಳಿಕೆ ಮತ್ತು ಮೆದುಳು-ನರಮಂಡಲಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ. ವಿದೇಶಗಳಲ್ಲಿ ನಿಷೇಧಿತ ಮಸಾಲೆಗಳ ಪದಾರ್ಥಗಳನ್ನು ಭಾರತೀಯ ಆಹಾರ ನಿಯಂತ್ರಣ ಸಂಸ್ಥೆ FSSAI ಆಹಾರದ ಗುಣಮಟ್ಟವನ್ನು ಪರೀಕ್ಷಿಸಿತು. ಅವುಗಳಲ್ಲಿ ಎಥಿಲಿನ ಆಕ್ಸೈಡ್ ಪತ್ತೆಯಾಗಲಿಲ್ಲ. ಆದರೆ, ಭಾರತೀಯ ಮಸಾಲೆ ಪದಾರ್ಥಗಳಲ್ಲಿ ನಡೆಯುತ್ತಿರುವ ಕಲಬೆರಕೆಯಿಂದ ಅನೇಕ ದೇಶಗಳಲ್ಲಿ ನಮ್ಮ ಮಸಾಲೆಗಳನ್ನು ನಿಷೇಧಿಸಲಾಯಿತು; ನಂತರ, FSSAI ನಮ್ಮ ದೇಶದ 111 ಮಸಾಲೆ ಉತ್ಪಾದಿಸುವ ಕಂಪೆನಿಗಳ ಮೇಲೆ ನಿರ್ಬಂಧ ಹೇರಿಸಿತು.
ಆ ಕಂಪೆನಿಗಳು ಹೆಚ್ಚಾಗಿ ಕೇರಳ ಮತ್ತು ತಮಿಳುನಾಡಿನ ಮೂಲದವರಾಗಿದ್ದರು. ಹಾಗೆ, ಗುಜರಾತ್, ಮಹಾರಾಷ್ಟ್ರ, ಮತ್ತು ಮಧ್ಯಪ್ರದೇಶದ ಹಲವು ಕಂಪೆನಿಗಳಿದ್ದವು. ಇನ್ನೂ ಹಲವು ಕಂಪೆನಿಗಳ ವಿರುದ್ಧ ತನಿಖೆ ನಡೆಯುತ್ತಿವೆ. ನಿಷೇಧಿತ ಕಂಪೆನಿಗಳಲ್ಲಿ ಹೆಚ್ಚಿನವು ಸಣ್ಣ ಕಂಪೆನಿಗಳಾಗಿದ್ದವು; ಬೃಹತ್ ಕಂಪೆನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಪ್ಯಾಕ್ ಮಾಡಿದ ಆಹಾರಗಳ ಹಿಂಬದಿ ಬಹಳ ಸಣ್ಣ ಅಕ್ಷರಗಳಲ್ಲಿ ಏನು ಬರೆಯಲಾಗಿದೆ ಎಂದು ಖರೀದಿಸುವ ಮುಂಚೆ ಒಮ್ಮೆ ಪರೀಕ್ಷಿಸಬೇಕು. ಆದರೂ, ನಮ್ಮ ಆಹಾರದಲ್ಲಿ ಕಲಬರಕೆಯಾಗಲಿಲ್ಲ ಎಂದು ಖಚಿತವಿಲ್ಲ. ಕೇವಲ ಮಸಾಲೆಗಳ, ಉಪ್ಪು, ಮತ್ತು ಸಕ್ಕರೆ ಅಲ್ಲ... ಭಾರತದಲ್ಲಿ ತಯಾರಿಸಲಾಗುವ ಹಲವು ಔಷಧಗಳೂ ಸಹ ಅಪಾಯಕಾರಿಗಳಾಗಿವೆ ಎಂದು ಬಹಳ ವರದಿಗಳು ಹಿಂದೆ ಬಂದಿದ್ದವು. 2023ರಲ್ಲಿ ಭಾರತದ ಟಾಪ್ ಡ್ರಗ್ ಕಂಟ್ರೋಲರ್ 4 ವರ್ಷದೊಳಗಿನ ಮಕ್ಕಳಿನ ಶೀತ ವಿರೋಧಿ ಔಷಧದ ಮೇಲೆ ನಿಷೇಧವನ್ನು ಹೇರಿತ್ತು. 2022ರಲ್ಲಿ ಗಾಂಬಿಯಾ ಉಝ್ಬೇಕಿಸ್ತಾನ್ ಭಾರತದಲ್ಲಿ ಉತ್ಪಾದಿಸಿದ ಶೀತ ವಿರೋಧಿ ಔಷದವನ್ನು ನಿಷೇಧಿಸಿತು. ಈ ಔಷಧಿಯನ್ನು ಸೇವಿಸಿದ ಬಳಿಕ 2019 ಮತ್ತು 2020ಯ ನಡುವೆ ಕನಿಷ್ಠ 12 ಮಕ್ಕಳು ಸಾವನ್ನಪ್ಪಿಕೊಂಡರು. ಭಾರತೀಯ ಕೆಮ್ಮು ಔಷಧಿ ಕಳೆದ ವರ್ಷ ತನೀಖೆಗೆ ಒಳಪಟ್ಟಿತ್ತು; WHO ಭಾರತೀಯ ನಾಲ್ಕು ಕೆಮ್ಮಿನಾ ಸೀರಪ್ ಗಳ ವಿರುದ್ಧ ಜಾಗತಿಕ ಎಚ್ಚರಿಕೆ ನೀಡಿತು. ಇದರಿಂದ, ಗಂಬಿಯಾದಲ್ಲಿ 66 ಮಕ್ಕಳ ಸಾವು ಆಗಿತ್ತು.
ನಮ್ಮ ದೇಶದಲ್ಲಿ ನಡೆಯುತ್ತಿರುವ ಕಳಬರಕೆಗೆ ಯಾರನ್ನಾದರೂ ಹೊಣೆಗಾರಿಕೆಯನ್ನು ಪಡೆಯಬೇಕು. ಹಾಲಿನಲ್ಲಿ ನೀರನ್ನು ಬೇರೆಸುವ ವಿಷಯ ಸಾಮಾನ್ಯವಾದದ್ದು; ಆದರೀಗ, ಆಹಾರ ಪದಾರ್ಥಗಳಲ್ಲಿ ವಿವಿಧ ಬಗೆಯ ಹಾನಿಕಾರಕ ರಾಸಾಯನಿಕಗಳನ್ನು ಬೇರೆಸುವ ಸುದ್ದಿಗಳು ಪ್ರಕಟವಾಗುತ್ತಿದೆ. ಯೂರಿಯಾ, ಕಾಸ್ಟಿಕ್ ಸೋಡಾ, ಮಾಲಟ್ರೋ ಡೆಕ್ಸಿನ್ ನಂತಹ ರಾಸಾಯನಿಕಗಳು, ಮತ್ತು ಕೊಬ್ಬನ್ನು ಹೆಚ್ಚಿಸಲು ಹೈಡ್ರೋಜನ್ ಪೆರಾಕ್ಸೈಡ್, ಫಾರ್ಮಾಲಿನ ನಂತಹ ರಸಾಯನಿಕಗಳು ಕಲಬೆರಕೆ ಮಾಡಲಾಗುತ್ತಿದೆ. ಅಮೋನೀಯ ಮತ್ತು ಯೂರಿಯಾದಿಂದಾಗಿ ಸ್ವಾದ ಬದಲಾಗುತ್ತದೆ. ಹಾಗಾಗಿ, ಅದನ್ನು ಸರಿಪಡಿಸಲು ಅದರಲ್ಲಿ ಸ್ಟಾರ್ಚ್ ಸೇರಿಸಲಾಗುತ್ತದೆ.
ಅಮರ್ ಉಜಾಲ ಅವರ ಈ ವರದಿಯ ಪ್ರಕಾರ ಕೇಂದ್ರ ಅರೋಗ್ಯ ಕುಟುಂಬ ಕಲ್ಯಾಣವು ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಬೆಚ್ಚಿ ಬೀಳಿಸುವ ಅಂಕಿ-ಅಂಶಗಳನ್ನು ಪ್ರಕಟಿಸಿತು. ದೇಶದಲ್ಲಿ ನಕಲಿ ಹಾಲು ಮತ್ತು ಅದರ ಉತ್ಪನ್ನಗಳ ವ್ಯಾಪಾರವು ರಭಸದಿಂದ ಬೆಳೆಯುತ್ತಿದೆ. ಉ.ಪ್ರದಲ್ಲಿ ಕಳೆದ ವರ್ಷ 16000 ನಕಲಿ ಹಾಲಿನ ಪದಾರ್ಥಗಳ ಮಾದರಿಗಳು ಸಿಕ್ಕಿಬಿದ್ದವು. ತಮಿಳ್ ನಾಡಿನಲ್ಲಿ 2200 ಮತ್ತು ಕೇರಳದಲ್ಲಿ 1300 ಮಾದರಿಗಳು ಸಿಕ್ಕಿಬಿದ್ದವು. ಈ ಕಲಬೆರಕೆಗಳು ನಮ್ಮ ದೇಶದಲ್ಲಿ ಸಾಮಾನ್ಯವಾಗಿದೆ. ನಾವೀಗ ಇದ್ದರೆಲ್ಲರ ನಡುವೆ ಜೀವನ ನಡೆಸುವ ಅಭ್ಯಾಸ ಮಾಡಬೇಕಾಗಿದೆ. ರೋಗಗಳು ನಮ್ಮನ್ನು ಕೊಲ್ಲುತ್ತಿವೆ; ಇದರ ಹಿಂದೆಯೇ ನಮ್ಮ ಉಳಿತಾಯ ಖಾಲಿಯಾಗುತ್ತಿದೆ.
ಪ್ರತಿ ತುಪ್ಪದ ಪ್ಯಾಕೆಟ್ ಮೇಲೆ ಶುದ್ಧ ತುಪ್ಪ ಎಂದು ಬರೆಯಲಾಗುತ್ತದೆ. ಆದರೆ, ಅದು ಶುದ್ಧವಿರುದಿಲ್ಲ. ಇಂತಹ ಸುದ್ದಿಗಳನ್ನು ಬರೆಯುತ್ತಲೇ ಇರುವುದು ಉತ್ತಮ. ಸರಕಾರ ಬೆಂಬಲಿತ ಸಂಸ್ಥೆಗಳು ಜಾಗೃತಗೊಂಡು ಇವುಗಳ ಬಗ್ಗೆ ಸಮಗ್ರ ತನಿಖೆ ನಡೆಸಲೇ ಬೇಕು.
(ಮುಗಿಯಿತು)
-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ