ನೀವೇ ನೀಡಿ

ನೀವೇ ನೀಡಿ

ಕವನ

ಎನ್ನ ಬಾಳ ಪಯಣದಲಿ
ಗೆಲುವಿನ ಹಾದಿ ನೀನಾಗಿ
ನನ್ನ ನಿತ್ಯದ ಕಾಯಕದಲಿ
ನೀ ಬರುವೆ ಸಮಯವಾಗಿ !!

ಮೊಗ್ಗು ಹರಳುವ ಹೊತ್ತು,
ಯಾರಿಗೆ ಗೊತ್ತು?
ಹಾಗೆ ಸಾಗುತ್ತದೆ ಬದುಕು
ಗುಟ್ಟಾಗಿ ಇಲ್ಲವೇ ರಟ್ಟಾಗಿ !!

ಹೂವಿನ ಸುಗ0ಧವಾಗಿ
ಬೀಸುವ ತ0ಗಾಳಿಯಾಗಿ
ಚ0ದಿರನ ಹೊ0ಬೆಳಕಾಗಿ
ನೀ ಬಾರೆಯ ನನಗಾಗಿ !!

ನನ್ನವನೇ ನೀನಾಗಿ
ಇರುವಾಗ ಜೊತೆಯಾಗಿ
ನಾ ಬರುವೆ ನಿನ್ನ ನೆರಳಾಗಿ
ಎ0ದಳೆನ್ನ "ಅರ್ಧಾ0ಗಿ"...

ನನ್ನ ನೋವ ನೀಗುವವನಾಗಿ
ನಿನ್ನ ಉಸಿರೇ ನಾನೆ0ದೆವನಾಗಿ
ನೀನಿಲ್ಲದ ಗಳಿಗೆ ಮೌನವಾಗಿ
ನಾನಾದೆ ಏಕಾ0ಗಿ

mruthyunjaya