ನೀ ಇಲ್ಲದ ಹಾದಿಯಲ್ಲಿ ನಾ ನಡೆದಾಗ

ನೀ ಇಲ್ಲದ ಹಾದಿಯಲ್ಲಿ ನಾ ನಡೆದಾಗ

ಬರಹ

ನಿನ್ನ ಕೈ ಹಿಡಿದು ನಾನಾಗ ನಡೆವಾಗ ಮುಗಿಲ ಚಂದ್ರ ನಮ್ಮ ನೋಡಿ
ಮುಗಿಲ ಹಿಂದ ಸರಿದಾಗ ನನ್ನ ಬಾಳ ಕತ್ತಲದಾಗ ನಾ ಬಾಡಿ

ಗುಲಾಬಿ ಹೂವೆಂದು ತಿಳಿದು ಕತ್ತಲಲ್ಲಿ ನಾ ನಿನ್ನ ಕೈ ಹಿಡಿದು ನಡೆದೆ
ಅದ್ರಾಗ ಮುಳ್ಳೈತಿ ಎಂದು ಚುಚ್ಚಿದಾಗ ನಿನ್ನ ನಾ ನೆನೆದೆ

ಕಮಲದ ಹೂ ಬೇಕೆಂದು ಕೇಳಿದಾಗ ಕೆಸರಾಗ ನಾ ಇಳಿದು ನಡೆದೆ
ಕೆಸರಾಗ ಸಿಕ್ಕು ನಾ ಜೀವ ಬಿಡುವಾಗ ನನ್ನ ನೀ ತೋರೆದೆ

ಆಳ ಕಾಣದ ಜೀವ ಸಾಗರದಾಗ ನಾ ದೋಣಿಯಾಗಿ ನಿನ್ನ ಮುಂದೆ ನಿಂತೆ
ನನ್ನ ಎದೆಗೂಡಿನಾಗ ನೀ ರಂದ್ರ ಮಾಡಿ ನಾ ಮುಳುಗೊದು ನೋಡುತ ನೀ ನಿಂತೆ

ಸಂಪತ್ತ ಕಳಕೊಂಡ ದುಃಖ ನೆನಪು ಇರೊತನಕ
ಮಗನ ಕಳಕೊಂಡ ದುಃಖ ಜೀವ ಇರೊತನಕ