ನೀ ಎಲ್ಲಿ ಹೋದೆ?
ಕವನ
ಸೃಷ್ಟಿ
ಆಕಾಶ ತಿಳಿಯಾಗಿದೆ
ಹೃದಯದಲ್ಲಿರುವ ಪ್ರೀತಿ ಹಾಗೆ
ಮೋಡ ಕವಿದಿದೆ
ಸ್ನೇಹ ಚಿಗುರಿದ ಹಾಗೆ
ತಂಗಾಳಿ ಸೂಸಿದೆ
ಮನ ಖುಷಿಯಿಂದ ತಂಪಾದ ಹಾಗೆ
ಹಕ್ಕಿಗಲು ನಲಿದು ಹಾರುತಿವೆ
ಮನದಾಸೆಯು ಹೊರಹೊಮ್ಮುವ ಹಾಗೆ
ಮಿಡಿಯುವ ಹೃದಯ
ಸೃಷ್ಟಿ ಎಷ್ಟು ಚೆನ್ನ ಎಂದು ನಗುತಿದೆ
ಕಣ್ಣು ರೆಪ್ಪೆ ಚುಂಬನ ನೀಡಿ
ಕ್ಷಣದಲಿ ಸುಖವ ಕಾಣಿದೆ
ಎದೆಯ ಪ್ರತಿ ಬಡಿತ ಮಳೆ
ಹನಿಯ ಹಾಗೆ ಭಾವನೆ ಮೂಡಿಸಿದೆ
ನನ್ನುಸಿರು ಹಸಿರಾಗಿ ಸುಹಾಸನೆ
ಬೀರಿ ಪ್ರೀತಿ ಮಾತು ಕೇಳುತಿದೆ
ಪ್ರೀತಿಯು ಹುಟ್ಟಿ ಸಂಗಾತಿಯ
ನೆನಪಾದಾಗ ಸೃಷ್ಟಿಯಲ್ಲಿ ಸ್ವರ್ಗ ಕಾಣುತಿದೆ
ಬಿಟ್ಯಾಕೋದೆ ನನ್ನ ಬಿಟ್ಯಾಕೋದೆ
ಕೊಟ್ಯಾಕೋದೆ ಪ್ರೀತಿ ಕೊಟ್ಯಾಕೋದೆ
ಹೃದಯದಲ್ಲಿ ಬಂದೆ
ಪ್ರೇಮ ಗೀತೆ ಅಂದೆ
ನನ್ನ ಜೀವ ಕದ್ದು ಹೋದೆ
ಬಿಟ್ಯಾಕೋದೆ ನನ್ನ ಬಿಟ್ಯಾಕೋದೆ
ಕೊಟ್ಯಾಕೋದೆ ಪ್ರೀತಿ ಕೊಟ್ಯಾಕೋದೆ
ಪ್ರೇಮದ ಕಥೆ ಹೇಳಿದ್ದೆ
ನಗಿಸಿ ನಲಿದಾಡಿದ್ದೆ
ಮನಸ್ಸಿಗೆ ಗಾಯ ಮಾಡಿ ಹೋದೆ
ಬಿಟ್ಯಾಕೋದೆ ನನ್ನ ಬಿಟ್ಯಾಕೋದೆ
ಕೊಟ್ಯಾಕೋದೆ ಪ್ರೀತಿ ಕೊಟ್ಯಾಕೋದೆ
ಮೆಲ್ಲನೆ ಅಪ್ಪಿದ್ದೆ
ಬೇಡೆಂದರೂ ಮುತ್ತು ನೀಡಿದ್ದೆ
ಏಕಾಂಗಿಯಾಗಿ ಮಾಡಿ ಹೋದೆ
ಬಿಟ್ಯಾಕೋದೆ ನನ್ನ ಬಿಟ್ಯಾಕೋದೆ
ಕೊಟ್ಯಾಕೋದೆ ಪ್ರೀತಿ ಕೊಟ್ಯಾಕೋದೆ
ನನ್ನ ನೆರಳಾಗಿ ಕಾಣಿಸಿದ್ದೆ
ಪ್ರೇಮಲೋಕಕ್ಕೆ ಕರೆದೋದಿದ್ದೆ
ಪ್ರೀತಿ ಮರೆತು ಕೊಲೆ ಮಾಡಿ ಹೋದೆ
ಬಿಟ್ಯಾಕೋದೆ ನನ್ನ ಬಿಟ್ಯಾಕೋದೆ
ಕೊಟ್ಯಾಕೋದೆ ಪ್ರೀತಿ ಕೊಟ್ಯಾಕೋದೆ
Comments
ಉ: ನೀ ಎಲ್ಲಿ ಹೋದೆ?
In reply to ಉ: ನೀ ಎಲ್ಲಿ ಹೋದೆ? by shreekant.mishrikoti
ಉ: ನೀ ಎಲ್ಲಿ ಹೋದೆ?