ನೀ ಕನಸಾಗೆ ಉಳಿದೆ,,,, ನನಸಾಗಲಿಲ್ಲ!
ನಲ್ಲ ಉಸಿರಾಗುವೆನೆ೦ದ ನಿನ್ನ ಮಾತ ನ೦ಬಿದೆ ನಾನು
ನಾಳೆ ಬರುವೆನೆ೦ದಾಗ ನಿನಗಾಗಿ ಕಾದೆ ಮರೆತೆಯೇನು
ಋತುಗಳು ಬದಲಾಗಿ ಸುತ್ತ ಹೊಸ ಚಿಗುರು ಮರೆಯಾಗಿ
ನಿತ್ಯ ಹಸಿರೆಲ್ಲ ಒಣಗಿ ನಿಸರ್ಗ ಸತ್ತು ಬಣ ಬಣ ಬರಡಾಗಿ!
ಏನಡ್ಡ ಬ೦ದರೂ ಎದುರಿಸಿ ಬದುಕೆವೆನೆ೦ದಿದ್ದೆ ನೀನು
ಸಹಮತ ನೀಡಿ ನಡಿ ಬರುವೆನೆ೦ದಿದ್ದೆ ನಿನ್ನೊಡನೆ ನಾನು
ಮಾತುಗಳೇ ಮುತ್ತಾಗಿ ವಾಸ್ತವದ ಕಟುಸತ್ಯ ಅರಿಯದಾಗಿ
ನಾ ಕಾದಿದ್ದೆ ನಿನಗಾಗಿ ಏ ಹುಡುಗಿ ನೀನಿದ್ದೆ ನನ್ನ ಕನಸಾಗಿ!
ಕೊನೆಗೂ ನೀ ಬರಲೇ ಇಲ್ಲ ಮಾಯವಾಗಿ ಹೋದೆ ನೀನು
ನೀ ಕನಸಾಗೆ ಉಳಿದೆ ನನಸಾಗಲಿಲ್ಲ ನಿನಗರಿಯದೇನು
ಪ್ರೀತಿ ಭರವಸೆಯ ಪ್ರೇಮ ಸಿ೦ಚನವೇ ನಮ್ಮ ಬದುಕಾಗಿ
ಸಾಕಷ್ಟು ನುಡಿದೆಯಲ್ಲ ಬೇಸರವಿಲ್ಲದೆ ನನ್ನೊಡನೆ ಒ೦ದಾಗಿ!
ಮರೆತೆಯಲ್ಲೆ ನಲ್ಲೆ ಹೃದಯದ ಮಧುರ ಪಿಸುಮಾತುಗಳನು
ನೆನೆಯಲಿಲ್ಲ ನೀನು ಅ೦ದು ನೀ ಮಾಡಿದ ವಾಗ್ದಾನಗಳನು
ನೀ ದೂರವಾದೆ ಅ೦ದಿನಿ೦ದಲೆ ಬದಲಾದೆ ನಾ ಘೋರ್ಕಲ್ಲಾಗಿ
ಮಾಡದಿಹ ಅಪರಾಧಕೆ ಸಿಕ್ಕ ಶಿಕ್ಷೆಯ ನೆನೆನೆನೆದು ಮೂಕನಾಗಿ
ದೂರವಾದೆಯಲ್ಲೆ ಸುಮ್ಮನೆ ಮು೦ದಿಟ್ಟು ಧರ್ಮದ ಮಾತನ್ನು
ಏನಾದರೇನ೦ತೆ ಆ ಧರ್ಮ ಉಳಿಸಿತೆ ನಮ್ಮೀ ಪ್ರೀತಿಯನ್ನು
ಆದರೂ ಭರವಸೆಯಿದೆ ನನಗೆ ಒಮ್ಮೆ ನೀ ಬರುವೆ ಬೆಳಕಾಗಿ
ಕಾಯುತಲಿಹೆ ನಾನಿಲ್ಲಿ ಆ ದಿನ ಬರುವುದೆ೦ದು ನಿನಗಾಗಿ!!
(ಇದು ಸುಮಾರು ಇಪ್ಪತ್ತು ವರ್ಷಗಳ ಹಿ೦ದಿನ ಕವನ, "ನಿರೀಕ್ಷೆಯ ಕ೦ಗಳೊಡನೆ" ಜೊತೆಯಲ್ಲೇ ಬ೦ದದ್ದು. ಈಗಿನ ಬದುಕಿಗೂ ಈ ಕವನಕ್ಕೂ ಹೋಲಿಕೆಯಿಲ್ಲ!)