ನೀ ಜೊತೆಗಿದ್ದಿದ್ದರೆ....

ನೀ ಜೊತೆಗಿದ್ದಿದ್ದರೆ....

ಕವನ

ನೀ ಜೊತೆಗಿದ್ದಿದ್ದರೆ..


ಎಷ್ಟೊಂದು ಚೆಲುವಿರುತ್ತಿತ್ತು


ನೋವಲ್ಲೂ ನಲಿವಿರುತ್ತಿತ್ತು


ಸೋಲಲ್ಲೂ ಗೆಲುವಿರುತ್ತಿತ್ತು


 


ನೀ ಜೊತೆಗಿದ್ದಿದ್ದರೆ..


ಮಳೆಹನಿಯಲ್ಲೂ ಹಿತವಿರುತ್ತಿತ್ತು


ಬಿರುಬಿಸಿಲಲ್ಲೂ ನೆರಳಿರುತ್ತಿತ್ತು


ಕೊರೆವ ಛಳಿಯಲ್ಲೂ ಬಿಸಿಯಿರುತ್ತಿತ್ತು


 


ನೀ ಜೊತೆಗಿದ್ದಿದ್ದರೆ..


ತಂಗಾಳಿಗೆ ತಂಪಿರುತ್ತಿತ್ತು


ಮಲ್ಲಿಗೆಗೆ ಕಂಪಿರುತ್ತಿತ್ತು


ಬೆಳದಿಂಗಳಿಗೆ ಬೆಳಕಿರುತ್ತಿತ್ತು


 


ನೀ ಜೊತೆಗಿದ್ದಿದ್ದರೆ..


ಕಣ್ಣಂಚಲ್ಲಿ ಹೊಳಪಿರುತ್ತಿತ್ತು


ಹೊಳಪಿನಲ್ಲಿ ಕನಸಿರುತ್ತಿತ್ತು


ಕನಸುಗಳಿಗೆ ಗರಿ ಬರುತ್ತಿತ್ತು


 


ನೀ ಜೊತೆಗಿದ್ದಿದ್ದರೆ..


ತೋಳಲ್ಲಿ ಬಲವಿರುತ್ತಿತ್ತು


ಎದೆಯಲ್ಲಿ ಛಲವಿರುತ್ತಿತ್ತು


ತುಟಿ ತುಂಬಾ ನಗುವಿರುತ್ತಿತ್ತು


 


ನೀ ಜೊತೆಗಿದ್ದಿದ್ದರೆ..


ದುಃಖದಲೂ ಸುಖವಿರುತ್ತಿತ್ತು


ಸುಖದೊಳಗೆ ಬದುಕಿರುತ್ತಿತ್ತು


ಬದುಕಿಗೊಂದು ಗುರಿಯಿರುತ್ತಿತ್ತು


 


ನೀ ಜೊತೆಗಿದ್ದಿದ್ದರೆ....


 


(ಇದು ನನ್ನ ಪ್ರಥಮ ಕವನ,  ತಪ್ಪಿದ್ದರೆ ಕ್ಷಮಿಸಿ, ತಿದ್ದಿ, ಹರಸುವಿರೆಂದು ಆಶಿಸುತ್ತೇನೆ.)


- ಶ್ರೀನಿವಾಸ್.

Comments