ನೀ ನನ್ನಪ್ಪಿ ಮುತ್ತಿಕ್ಕುವುದು ಸರಿಯೇನೆ?

ನೀ ನನ್ನಪ್ಪಿ ಮುತ್ತಿಕ್ಕುವುದು ಸರಿಯೇನೆ?

 

ನಾ ನಿಂತಾಗಲೆಲ್ಲ, ಕುಂತಾಗಲೆಲ್ಲ
ನೀ ನನ್ನಪ್ಪಿ ಮುತ್ತಿಕ್ಕುವುದು ಸರಿಯೇನೆ?
 
ಎನ್ನಪ್ಪಿ ಮೈಮರೆಸುವ ಅವಳನ್ನು ದೂರ ಸರಿಸಿ
ನೀ ನನ್ನಪ್ಪಿ ಮುತ್ತಿಕ್ಕುವುದು ಸರಿಯೇನೆ?
 
ಕಿಂಚಿತ್ ಕಾಲ ಮೈಮರೆಸಿದ್ದ ಅವಳನ್ನು ಓಡಿಸಿ
ನೀ ನನ್ನಪ್ಪಿ ಮುತ್ತಿಕ್ಕುವುದು ಸರಿಯೇನೆ?
 
ನಿನ್ನಿಂದ ದೂರ ಓಡಿದರೂ ನೆರಳಂತೇ ನನ್ನೊಂದಿಗಿದ್ದು 
ನೀ ನನ್ನಪ್ಪಿ ಮುತ್ತಿಕ್ಕುವುದು ಸರಿಯೇನೆ?
 
ಮನುಜ ಕುಲಕ್ಕೂ ನಿನಗೂ ಅದೇನೋ ನಿಕಟ ಸಂಬಂಧ
ಮನುಜನೊಂದಿಗೆ ನಿನ್ನದು ಸಹ ಆಗಮನ, ಸಹ ನಿರ್ಗಮನ
 
ನೀ ಸದಾ ಎನ್ನೊಂದಿಗಿದ್ದರೂ ನಿನ್ನಿರುವು ಎನಗೆ ಬೇಕಿಲ್ಲ
ಕರೆದು ಆದರಿಸದ ಗೂಡಲ್ಲಿ ನಿನಗೇನೆ ಕೆಲಸ, ಹೇಳೇ "ಚಿಂತೆ"?
 
 

Comments

Submitted by ಗಣೇಶ Sat, 05/18/2013 - 00:29

ಕಡೆಯವರೆಗೂ ಯಾರಿರಬಹುದು, ಏನಿರಬಹುದು ಎಂದು "ಚಿಂತೆ" ಮಾಡಿದ್ದೇ ಮಾಡಿದ್ದು..ವ್ಹಾ..ಭಲ್ಲೇಜಿ, ಸೂಪರ್ ಕವನ.