ನೀ ನನ್ನವಳ ವೇದ .... ?
ಕವನ
ನನ್ನವಳ ಮೊಗದಲಿ ಮಿಂಚಿ ಮರೆಯಾಗದೆ ಉಳಿದ ಕಾತರತೆ
ಅವಳ ಕಣ್ಣಲಿ ಪ್ರೀತಿ ತುಂಬಿ ಹರಿದ ಭಾವುಕತೆಯ ಕವಿತೆ
ಒಂದು ಮಾತಾಡಲು ಅವಳು ಪಡುವ ಪರಿಪಾಟಲು
ಕೆನ್ನೆಯ ಗುಳಿಗಳು ಸುಮ್ಮನೇ ಚೆಲ್ಲಿದ ಹಾಗೆ ಬೆಳದಿಂಗಳು....
ಬೇಕಂತಲೇ ಕೇಳದಂತೆ ಕೇಳಿಸುವ ನನ್ನವಳ ಪಿಸುಮಾತು
'ಒಲ್ಲೆನೆಂದರೂ ನೀ ನನಗೆ ಗೆಳೆಯ' ಎಂದ ಋಜುವಾತು
ದೂರವಾಣಿಯ ರಿಂಗಣದಂಗಳದಿ ಉಲಿಯುವ ಅವಳ 'ಹೂ೦' ಕಾರ
ಮಾತು ಮೌನದ ನಡುವಿನ ಹಂಬಲದ ಅವಿರತ ಜೇ೦ಕಾರ....
ನಾನೇನೇ ಹೇಳಲಿ , ಅವಳು ಸಂಜೆ ತಂಗಾಳಿಯ ಅಮಲು
ಎಂದೋ ಮರೆತು ಹೋದ ಲಘುಬಗೆಯ ಗೆಳೆತನದ ಕಮಲು
ನಿವೇದನದಲಿ ಮೂಡಿದೆ ಒಲವ ಭಾವ ತಂತಿಯ ನಾದ
ಹೃದಯ ವೀಣೆ ನುಡಿಸಿದ ನೀ.... ನನ್ನವಳ ವೇದ ?
ಚಿತ್ರ್