ನೀ ಬರಬಾರದೇನೆ??????

ನೀ ಬರಬಾರದೇನೆ??????

ಕವನ

ಹೃದಯದಾ ಪುಟಗಳಲಿ
ಬರೆದಿರುವೆ ನಿನ ಹೆಸರ,
ಕನಸಿನ ಆಸೆಗಳಿಗೆ
ತುಂಬಿರುವೆ ಹೊಸ ಹುಸಿರ

ಹೃದಯದ ಮಿಡಿತವ
ಕನಸಿನ ಕಲರವ
ಕೇಳಲು ನೀ ಬರಬಾರದೇನೆ?


ಚಂದ್ರನ ಕಾಡಿ
ಬೆಳದಿಂಗಳ ಹಾಸಿರುವೆ
ತಂಗಾಳಿಯ ಬೇಡಿ ತಂಪನು ತಂದಿರುವೆ,
ಹೂವುಗಳ ಕೇಳಿ ಪರಿಮಳವ ಚೆಲ್ಲಿರುವೆ,
ನಿನಗಾಗಿ ನಾನು ಕಾಯುತಲಿರುವೆ.

ತಂಪಾಗಿ ಹಾಯಾಗಿ ಪ್ರೀತಿಸಲು
ನೀ ಬರಬಾರದೇನೆ?

Comments