ನೀ ಸಿಗದೆ.....

ನೀ ಸಿಗದೆ.....

ಕವನ

 ನಸುಕು ಬೆಳಕಿನಲಿ ನೆನಪಿನ

ಮೆರವಣಿಗೆ ಸಾಗಿದೆ....

ಮಸುಕಾದ  ಹೆಜ್ಜೆಯ  ಗುರುತಲ್ಲಿ

ಕನಸುಗಳು ನೂರಿದೆ.....

 

ಗತ  ವೈಭವದ  ಕುರುಹು

ಮರೆಯಾಗಿ ಹೋಗಿದೆ...

ಒ ಟ್ಟಾಗಿ  ಬಾಳುವ  ಆಸೆ

ಕನಸಾಗಿ ಉಳಿದಿದೆ....

 

ಮರೆತ  ಗೆಜ್ಜೆಯ  ಸದ್ದು

ಬಹುವಾಗಿ ಕಾಡಿದೆ...

ಜೊತೆಯಾಗಿ ನೆಡೆದ  ದಾರಿ

ಹೊಸದಾಗಿ ತೋರಿದೆ....

 

ನೆನಪಲ್ಲೂ ನಗುವಿದೆ

ನಗುವಲ್ಲೂ ನೋವಿದೆ

ನೋವಲ್ಲೂ ಹಿತವಿದೆ

ಹಿತವಾದ  ನೋವಿಗೂ

ನೀ ಸಿಗದ  ಅರಿವಿದೆ......

 

Comments